ವಿಜ್ಞಾನಿಗಳಿಲ್ಲದೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ
Team Udayavani, Oct 25, 2017, 1:01 PM IST
ಬೆಂಗಳೂರು: ಕೃಷಿಕರು, ಕಾರ್ಮಿಕರು, ವಿಜ್ಞಾನಿಗಳ ಅಸ್ತಿತ್ವವಿಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವೇ ಇಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತಕ್ಕೆ ಸ್ವಾತಂತ್ರ್ಯ ದೊರೆತು 2025ಕ್ಕೆ 75 ವರ್ಷ ತುಂಬಲಿದೆ.2022ರ ವೇಳೆಗೆ ಭಾರತವನ್ನು ಒಂದು ಮಾದರಿ ರಾಷ್ಟ್ರವನ್ನಾಗಿ ಪರಿವರ್ತಿಸಲು ನಾವು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆಗೆ ಸ್ವಾಮಿ ವಿವೇಕಾನಂದ,ಜೆ.ಎನ್.ಟಾಟಾ ಅವರ ಹೆಗ್ಗುರುತು ಇದ್ದು ಜ್ಞಾನದ ಆವಿಷ್ಕಾರದ ಒಂದು ಕೇಂದ್ರಬಿಂದುವಾಗಿ ನಿಂತಿದೆ ಎಂದು ಬಣ್ಣಿಸಿದರು. ಇಂದು ನಾವು ನ್ಯಾನೋ ತಂತ್ರಜ್ಞಾನ,ಜೈವಿಕ ವಿಜ್ಞಾನ,ಜೆನರಿಕ್ ಔಷಧಿ ಲಸಿಕೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದೇವೆ.
ವಿಜ್ಞಾನಿಗಳಿಗೆ ಯಾವಾಗಲೂ ಜ್ಞಾನದ ಹಸಿವಿದ್ದು ಹೊಸ ಆವಿಸ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಭಾರತ ಇಂದು ಬಡತನ,ಅನಾರೋಗ್ಯ,ಆಹಾರ ಮತ್ತು ಇಂಧನ ಶಕ್ತಿಗಳಲ್ಲಿ ಕೊರತೆ ಅನುಭವಿಸುತ್ತಿದೆ.ಇದನ್ನು ಮೆಟ್ಟಿನಿಂತು ನಾವು ವಿಜ್ಞಾನದ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಮಾಹಿತಿ ತಂತ್ರಜ್ಞಾನದ ತವರೂರು ಎಂದು ವರ್ಣಿಸಿದ ಕೋವಿಂದ್ ಸರ್ . ಸಿ.ವಿ.ರಾಮನ್.ಎಸ್ ಚಂದ್ರಶೇಖರ್, ಅಬ್ದುಲ್ ಕಲಾಂ, ಸಿ.ಎನ್. ಆರ್. ರಾವ್ ಅವರುಗಳ ಸಾಧನೆಯ ಗುಣಗಾನ ಮಾಡಿ ವಿಜ್ಞಾನಿಗಳೇ ದೇಶದ ಬೆನ್ನೆಲುಬು ಅವರಿಂದಲೇ ದೇಶ ಸುಧಾರಣೆಯತ್ತ ಮುಖ ಮಾಡಲು ಸಾಧ್ಯ ಎಂದರು.
ಇದೇ ವೇಳೆ ಇಸೂ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಮುಖ ವಿಜ್ಞಾನಿಗಳು ವಿಷಯ ಮಂಡನೆ ಮಾಡಿ ವಿಜ್ಞಾನ,ಅಣು ವಿಜ್ಞಾನ,ಜೈವಿಕ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಾಗಿರುವ ಹೊಸ ಬೆಳವಣಿಗೆಗಳ ಬಗ್ಗೆ ವಿಚಾರ ಮಂಡಿಸಿದರು. ರಾಜ್ಯಪಾಲ ವಾಜುಭಾಯ್ ವಾಲಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ
Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ
ಇಂದು ಜೆಡಿಎಸ್ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು
Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.