ಇಲಾಖಾವಾರು ಅನುದಾನ ಹಂಚಿಕೆ ವ್ಯತ್ಯಯ
Team Udayavani, Jul 6, 2018, 11:57 AM IST
ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ ಬಜೆಟ್‌ಅನ್ನು ಪರಿಷ್ಕರಣೆ ಮಾಡಿ ಮಂಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಲವು ಇಲಾಖೆಗಳಿಗೆ ಅನುದಾನ ಕಡಿತಗೊಳಿಸಿದರೆ ಇನ್ನು ಕೆಲವು ಇಲಾಖೆಗಳ ಅನುದಾನ ಹೆಚ್ಚಳ ಮಾಡಿದ್ದಾರೆ.
2,18,488 ಕೋಟಿ ರೂ. ಮೊತ್ತದ ಪರಿಷ್ಕೃತ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಗಾತ್ರವನ್ನು 9307 ಕೋಟಿ ರೂ.ನಷ್ಟು ಹಿಗ್ಗಿಸಿದ್ದಾರೆ. ಮುಖ್ಯವಾಗಿ ಇತರೆ ಇಲಾಖೆಗಳಿಗೆ ನೀಡಿರುವ ಅನುದಾನದಲ್ಲಿ 7115 ಕೋಟಿ ರೂ. ಹೆಚ್ಚಳ ಮಾಡಲಾಗಿದ್ದರೆ, ಸಚಿವ ಎಚ್.ಡಿ.ರೇವಣ್ಣ ಅವರು ಹೊಂದಿರುವ ಲೋಕೋಪಯೋಗಿ ಇಲಾಖೆಗೆ 929 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲಾಗಿದೆ.
ಅದೇ ರೀತಿ ಸಚಿವ ಆರ್.ವಿ.ದೇಶಪಾಂಡೆ ಹೊಂದಿರುವ ಕಂದಾಯ ಇಲಾಖೆಗೆ 538 ಕೋಟಿ ರೂ. ಮೊತ್ತ ಹೆಚ್ಚು ಮಾಡಲಾಗಿದೆ. ಇನ್ನು ಶಿಕ್ಷಣ ಇಲಾಖೆಗೆ 283 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 862 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 33 ಕೋಟಿ ರೂ. ಕಡಿಮೆ ಮಾಡಲಾಗಿದೆ.
ಇಲಾಖೆ ಕುಮಾರಸ್ವಾಮಿ ಸಿದ್ದರಾಮಯ್ಯ ವ್ಯತ್ಯಾಸ
ಶಿಕ್ಷಣ 26,581 ಕೋಟಿ ರೂ. 26,864 ಕೋಟಿ ರೂ. 283 ಕೋಟಿ ರೂ. ಕಡಿಮೆ
ಜಲ ಸಂಪನ್ಮೂಲ 18,142 ಕೋಟಿ ರೂ 18,112 ಕೋಟಿ ರೂ. 30 ಕೋಟಿ ರೂ. ಹೆಚ್ಚು
ನಗರಾಭಿವೃದ್ಧಿ 17,727 ಕೋಟಿ ರೂ. 17,196 ಕೋಟಿ ರೂ. 531 ಕೋಟಿ ರೂ. ಹೆಚ್ಚು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ 14,449 ಕೋಟಿ ರೂ. 14,268 ಕೋಟಿ ರೂ. 181 ಕೋಟಿ ರೂ. ಹೆಚ್ಚು
ಇಂಧನ 14,123 ಕೋಟಿ ರೂ. 14,136 13 ಕೋಟಿ ರೂ. ಕಡಿಮೆ
ಸಮಾಜ ಕಲ್ಯಾಣ 11,788 ಕೋಟಿ ರೂ. 11,821 ಕೋಟಿ ರೂ. 33 ಕೋಟಿ ರೂ. ಕಡಿಮೆ
ಲೋಕೋಪಯೋಗಿ 10,200 ಕೋಟಿ ರೂ. 9,271 ಕೋಟಿ ರೂ. 929 ಕೋಟಿ ರೂ. ಹೆಚ್ಚು
ಒಳಾಡಳಿತ ಮತ್ತು ಸಾರಿಗೆ 7,993 ಕೋಟಿ ರೂ. 8,855 ಕೋಟಿ ರೂ. 862 ಕೋಟಿ ರೂ. ಕಡಿಮೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 9,317 ಕೋಟಿ ರೂ. 8,822 ಕೋಟಿ ರೂ. 495 ಕೋಟಿ ರೂ. ಹೆಚ್ಚು
ಕೃಷಿ ಮತ್ತು ತೋಟಗಾರಿಕೆ 7,642 ಕೋಟಿ ರೂ. 7,301 ಕೋಟಿ ರೂ. 339 ಕೋಟಿ ರೂ. ಹೆಚ್ಚು
ಕಂದಾಯ 7,180 ಕೋಟಿ ರೂ. 6,642 ಕೋಟಿ ರೂ. 538 ಕೋಟಿ ರೂ. ಹೆಚ್ಚು
ಮಹಿಳಾ ಮತ್ತು ಮಕ್ಕಳ ಕಲ್ಯಾಣ 5,725 ಕೋಟಿ ರೂ. 5,371 ಕೋಟಿ ರೂ. 354 ಕೋಟಿ ರೂ. ಹೆಚ್ಚು
ವಸತಿ 3,942 ಕೋಟಿ ರೂ. 3,942 ಕೋಟಿ ರೂ. ಬದಲಾವಣೆ ಇಲ್ಲ
ಆಹಾರ ಮತ್ತು ನಾಗರಿಕ ಸರಬರಾಜು 3,866 ಕೋಟಿ ರೂ. 3,882 ಕೋಟಿ ರೂ. 16 ಕೋಟಿ ರೂ. ಕಡಿಮೆ
ಇತರೆ 82,196 ಕೋಟಿ ರೂ 75,081 ಕೋಟಿ ರೂ. 7115 ಕೋಟಿ ರೂ. ಹೆಚ್ಚು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.