ದೇಸಿ, ವಿದೇಶಿ ಸಸ್ಯಹಾರ ಮೇಳ ಆರಂಭ
Team Udayavani, Sep 22, 2018, 1:14 PM IST
ಬೆಂಗಳೂರು: ಒಂದೇ ಸೂರಿನಡಿ ದೇಸಿ ಮತ್ತು ವಿದೇಶಿ ಆಹಾರ ದೊರೆಯುವ ಬೃಹತ್ ಸಸ್ಯಹಾರ ಮೇಳಕ್ಕೆ ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಚಾಲನೆ ದೊರೆಯಿತು. ಭೋಜನಾ ಪ್ರಿಯರನ್ನು ಆಕರ್ಷಿಸುವ ಈ ಆಹಾರ ಮೇಳ ಮೂರು ದಿನಗಳ ಕಾಲ ನಡೆಯಲಿದೆ.
ಖಾಸಗಿ ಸಂಸ್ಥೆ ಆಯೋಜಿಸಿರುವ ಮೇಳವನ್ನು ವಿಧಾನ ಪರಿಷತ್ ಸದಸ್ಯ ಶರವಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕರ್ನಾಟದ ಜನಪ್ರಿಯ ಖ್ಯಾದ್ಯಗಳ ಜತೆ ಹಲವು ರಾಜ್ಯಗಳ ಮತ್ತು ವಿದೇಶಿ ಆಹಾರಗಳು ಕೂಡ ಒಂದೇ ಸೂರಿನಡಿ ದೊರಕಲಿವೆ. ಗ್ರಾಮೀಣ ಪ್ರದೇಶ ಆಹಾರಕ್ಕೂ, ಆಯೋಜಕರು ವಿಶೇಷ ಆದ್ಯತೆ ನೀಡಿದ್ದು ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ಜನತೆಗೆ ಕರೆ ನೀಡಿದರು.
ಇಲ್ಲಿ ಸಂಗ್ರಹವಾದ ಒಂದಿಷ್ಟು ಹಣವನ್ನು ಆಯೋಜಕರು ಕೊಡಗು ಮತ್ತು ಕೇರಳ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ. ಇದೊಂದು ಒಳ್ಳೆಯ ಕೆಲಸ ಎಂದು ಪ್ರಶಂಸಿಸಿದರು.ಈ ವೇಳೆ ಪಾಲಿಕೆ ಸದಸ್ಯರಾದ ಲತಾ,ರೆಡ್ ರಿಬ್ಬನ್ ಸಂಸ್ಥೆಯ ಅನಿಲ್ ಗುಪ್ತಾ, ನವೀನ್ ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ತರಹೇವಾರಿ ಆಹಾರ: ಆಹಾರ ಮೇಳದಲ್ಲಿ ಸುಮಾರು 150 ಮಳಿಗೆಗಳನ್ನು ತರೆಯಲಾಗಿದೆ. ಉತ್ತರ ಕರ್ನಾಟಕದ ವಿವಿಧ ಶೈಲಿಯ ಆಹಾರ ಜತಗೆ ಆಂಧ್ರದ ಪೋತರೇಕಲ್, ಬಾಳೆಕಾಯಿ ಬಿರಿಯಾನಿ, ಮಹಾರಾಷ್ಟ್ರದ ಮಿಸಲ್ ಪಾವ್, ತಮಿಳುನಾಡಿನ ಬ್ರಿಂಜಾಲ್ ಬಿರಿಯಾನಿ, ಬಿಹಾರದ ಲಿಟ್ಟಿ ಚೋಕಾ, ಗುಜರಾತಿನ ನೆಫೆಡಾ, ಚಾರ್‌ಮೀನಾರ್ ದೋಸ, ಸ್ಯಾಂಡ್ ವಿಚ್‌ದೋಸ, ಮಧುರೈ ಮಸಾಲ ದೋಸ ಸೇರಿದಂತೆ ಸಾವಿರಕ್ಕೂ ಹೆಚ್ಚು ತರಹೇವಾರಿ ಆಹಾರಗಳು ಇಲ್ಲಿ, ದೊರೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.