ದೇವನಹಳ್ಳಿ ಅಂಬೇಡ್ಕರ್ ಭವನದ ಉದ್ಘಾಟನೆಗೆ ಹೈಕೋರ್ಟ್‌ಗ್ರೀನ್‌ಸಿಗ್ನಲ್
Team Udayavani, Apr 7, 2017, 11:49 AM IST
ಬೆಂಗಳೂರು: ದೇವನಹಳ್ಳಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ. ಆರ್ ಅಂಬೇಡ್ಕರ್ ಭವನದ ಉದ್ಘಾಟನೆಯನ್ನು ಏಪ್ರಿಲ್ 14ರಂದು ನೆರವೇರಿಸುವಂತೆ ಹೈಕೋರ್ಟ್ ಸೂಚಿಸಿದೆ.
2015ರಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿದ್ದ ಜಿಲ್ಲಾಡಳಿತ, ಭವನದ ಹಿಂಭಾಗವಿರುವ 30×40 ವಿಸ್ತೀರ್ಣದ ಜಾಗವನ್ನು ಮೂರು ಮನೆಗಳ ಮಾಲೀಕರು ಒತ್ತುವರಿ ಮಾಡಿದ್ದಾರೆ ಎಂದು ತಿಳಿಸಿ ಮನೆ ಖಾಲಿ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಿತ್ತು. ಜಿಲ್ಲಾಡಳಿತ ಕ್ರಮ ಪ್ರಶ್ನಿಸಿದ್ದ ಲಕ್ಷ್ಮಮ್ಮ ಸೇರಿದಂತೆ ಮೂವರು ಅರ್ಜಿದಾರರು, ” ನಾವು ಸುಮಾರು ವರ್ಷಗಳಿಂದ ಇದೇ ಜಾಗದಲ್ಲಿ ವಾಸಿಸುತ್ತಿದ್ದು ಈ ಸ್ವತ್ತು ನಮಗೇ ಸೇರಿದೆ.
ಹೀಗಾಗಿ ತಮ್ಮನ್ನು ಸ್ಥಳಾಂತರಗೊಳಿಸಬಾರದು ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಮುಂದುವರಿಸದಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು,” ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಈ ಮಧ್ಯೆ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಿದ್ದ ಜಿಲ್ಲಾಡಳಿತ ಏಪ್ರಿಲ್ 14ಕ್ಕೆ ಉದ್ಘಾಟನೆ ಮಾಡಲು ನಿರ್ಧರಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರಿದ್ದ ಏಕಸದಸ್ಯಪೀಠ, ಏಪ್ರಿಲ್ 14ರಂದು ನಿಗದಿಪಡಿಸಿರುವಂತೆ ಅಂಬೇಡ್ಕರ್ ಭವನವನ್ನು ಲೋಕಾರ್ಪಣೆಗೊಳಿಸಿ. ಅಲ್ಲದೆ ಅರ್ಜಿದಾರರಿಗೆ ತಾತ್ಕಾಲಿಕವಾಗಿ ಬೇರೆಕಡೆ ವಾಸಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅಲ್ಲದೆ ಅರ್ಜಿದಾರರಿಗೆ ಸೇರಿದೆ ಎನ್ನಲಾದ ಸ್ವತ್ತಿನ ಮಾಲಿಕತ್ವದ ಬಗ್ಗೆ ಮುಂದಿನ ವಿಚಾರಣೆಗಳಲ್ಲಿ ನ್ಯಾಯಾಲಯದ ಮುಂದೆ ಸಾಬೀತಾಗಲಿ ಎಂದು ಸರ್ಕಾರದ ವಕೀಲರಿಗೆ ಸೂಚನೆ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.