ವಿಧ್ವಂಸಕ ಕೃತ್ಯಕ್ಕೆ ಬಂದಿದ್ದನೇ ಉಗ್ರ?
Team Udayavani, Oct 12, 2018, 9:44 AM IST
ಬೆಂಗಳೂರು: ಕಳೆದ 10 ವರ್ಷಗಳ ಹಿಂದೆ ರಾಷ್ಟ್ರವನ್ನೇ ಬೆಚ್ಚಿಬೀಳಿಸಿ ಐಟಿ ಹಬ್ ಹಿರಿಮೆಯ ಬೆಂಗಳೂರನ್ನು ಅಕ್ಷರಶಃ ನಡುಗಿಸಿಬಿಟ್ಟಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದದಲ್ಲಿ ಭಾಗಿಯಾಗಿರುವ ಎಲ್‌ಇಟಿ ಉಗ್ರ ಪಿ.ಎ ಸಲೀಂ ಬಂಧನದಿಂದ ಭಯೋತ್ಪಾದನಾ ಸಂಚುಗಳು ಮುಂದುವರಿದಿರುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
2008ರ ಜುಲೈ 25ರಂದು ಮಧ್ಯಾಹ್ನ ಕೇವಲ 1 ಗಂಟೆಗೆ ನಗರದ ವಿವಿಧ 9 ಭಾಗಗಳಲ್ಲಿ ಸರಣಿ ಬಾಂಬ್‌ಗಳನ್ನು ಸ್ಫೋಟಿಸಿದ್ದ ಪ್ರಕರಣದ ಆರೋಪಿ ಕೇರಳದ ಸಲೀಂ ಬಳಿಕ ನಗರ ಅಪರಾಧ ದಳ (ಸಿಸಿಬಿ) ಘಟಕದ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸರಣಿ ಸ್ಫೋಟದ ಬಳಿಕ 10 ವರ್ಷಗಳ ಅವಧಿಯಲ್ಲಿ ಎಲ್‌ಇಟಿ ಸಂಘಟನೆ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂಬುದು ಖಚಿತವಾಗಿದೆ. ಈ ಅವಧಿಯಲ್ಲಿ ಇತರೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ, ಮೋಸ್ಟ್ ವಾಂಟೆಂಡ್ ಉಗ್ರ ರಿಯಾಜ್ ಭಟ್ಕಳ್ ಸೂಚನೆ ಮೇರೆಗೆ ಉಗ್ರ ಚಟುವಟಿಕೆಗಳನ್ನು ಪುನಃ ಚಿಗುರಿಸಲು ಯತ್ನಿಸುತ್ತಿದ್ದ. ಹೀಗಾಗಿ, ವಿಧ್ವಂಸಕ ಕೃತ್ಯಗಳನ್ನು ಎಸಗುವ ಉದ್ದೇಶದಿಂದಲೇ ವಾಪಾಸ್ ಆಗಿದ್ದನೇ? ಇತರೆ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದನೇ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಿಸಿಬಿ ಮುಂದಿದೆ ಸವಾಲು: ಪ್ರಕರಣದಲ್ಲಿ 2009ರಲ್ಲಿಯೇ ಸಲೀಂ ಸೇರಿ ತಲೆಮರೆಸಿಕೊಂಡಿದ್ದ ಇತರೆ 7 ಮಂದಿ ಆರೋಪಿಗಳ ಕುರಿತು ಸಣ್ಣ ಸುಳಿವು ಲಭ್ಯವಾಗಿರಲಿಲ್ಲ. ಕೇಂದ್ರ ಹಾಗೂ ರಾಜ್ಯ ಗುಪ್ತಚರ ದಳಗಳ ಮಾಹಿತಿ ಆಧರಿಸಿ ಹಲವು ಬಾರಿ ಆರೋಪಿಗಳ ಬಂಧನಕ್ಕೆ ಯತ್ನಿಸಿದರೂ ಯಶ ದೊರೆತಿರಲಿಲ್ಲ.
ಇದೀಗ ಸಲೀಂ ಬಂಧನದಿಂದ ಇಂಡಿಯನ್ ಮುಜಾಯಿದ್ದೀನ್ (ಐಎಂ), ಪಾಕ್ ನಿಷೇಧಿತ ಉಗ್ರ ಸಂಘಟನೆ (ಎಲ್‌ಇಟಿ)ಯ ಚಟುವಟಿಕೆಗಳು ಹತ್ತು ವರ್ಷಗಳಲ್ಲಿ ಹೇಗೆ ಬೆಳೆದಿದೆ ಎಂಬುದನ್ನು ಬೇಧಿಸುವ ಅವಕಾಶ ದೊರೆತಿದೆ. ಜತೆಗೆ, ಬೆಂಗಳೂರಿನ ಮಡಿವಾಳ, ಮೈಸೂರು ರಸ್ತೆ, ರಿಚ್‌ಮಂಡ್ ಸರ್ಕಲ್ ಸೇರಿ ಒಟ್ಟು 9 ಜಾಗಗಳಲ್ಲಿ ಸುಧಾರಿತ ಸ್ಫೋಟಕ ( ಐಇಡಿ) ಬಳಸಿ ಬಾಂಬ್ ಬ್ಲಾಸ್ಟ್‌ಗಳನ್ನು ಸ್ಫೋಟಿಸಲು ಭಾಗಿಯಾಗಿದ್ದ. ಹೀಗಾಗಿ, ಆರೋಪಿ ಸಲೀಂನನ್ನು ಕೃತ್ಯ ನಡೆದ ಸ್ಥಳ ಗುರುತಿಸುವಿಕೆ (ಮಹಜರು) ಪ್ರಕ್ರಿಯೆ ನಡೆಸಲಿದೆ.
ಇದಲ್ಲದೆ ಬಹುತೇಕ ಹತ್ತು ವರ್ಷಗಳೇ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವ ಸಾಧ್ಯತೆಗಳಿವೆ. ಹೀಗಾಗಿ, ಈ ನಿರ್ದಿಷ್ಟ ಕೇಸ್‌ಗೆ ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ಕಲೆಹಾಕುವ
ಸವಾಲು ಸಿಸಿಬಿ ಮೇಲಿದೆ.
ಕಾರ್ಖಾನೆಯಲ್ಲಿ ಬಾಂಬ್ ತಯಾರಿ!
ಸರಣಿ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಅಬ್ದುಲ್ ಬಬ್ಟಾರ್ ಅಲಿಯಾಸ್ ಅನೂಪ್, ಫ್ಯಾನ್ ಸರ್ಕ್ನೂಟ್ ತಯಾರು ಮಾಡುವ ಕಾರ್ಖಾನೆ ನಡೆಸುತ್ತಿದ್ದು. ಆತನ ಸಂಬಂಧಿಯಾದ ಸಲೀಂ ಕೂಡ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಅಬ್ದುಲ್ ಜಬ್ಟಾರ್‌ಗೆ ಇಂಡಿನ್ ಮುಜಾಹಿದ್ದೀನ್ ಸಂಘಟನೆಯ ರೂವಾರಿ ರಿಯಾಜ್ ಭಟ್ಕಳ್ ಸಂಪರ್ಕವಿತ್ತು.
ಹೀಗಾಗಿ ರಿಯಾಜ್ ಭಟ್ಕಳ್ ಸೂಚನೆ ಮೇರೆಗೆ, ಫ್ಯಾನ್ ಸರ್ಕ್ಯೂಟ್ ಕಾರ್ಖಾನೆಯಲ್ಲಿ ಐಇಡಿ ಬಾಂಬ್ ತಯಾರಿಕೆಯಲ್ಲಿ ಸಲೀಂ ಸಹಕಾರ ನೀಡಿದ್ದ. ಜತೆಗೆ, ಬೆಂಗಳೂರಿನಲ್ಲಿ ವಿವಿಧ ಭಾಗಗಳಲ್ಲಿ ಬಾಂಬ್ ಇಡುವ ತಂಡದಲ್ಲಿದ್ದ. ಜತೆಗೆ, ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳಿಗೂ ಬಾಂಬ್ ಪೂರೈಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸ್ಫೋಟಕ ಮುನ್ನ ಸರಣಿ ಸಭೆಗಳು! ಎಲ್‌ಇಟಿ ಕಮಾಂಡರ್ ವಲೀ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಸರಣಿ ಸ್ಫೋಟಗಳನ್ನು ನಡೆಸಿ ಜನರ ಪ್ರಾಣಹಾನಿ ಉಂಟು ಮಾಡುವುದು ಉಗ್ರರ ಗುರಿಯಾಗಿತ್ತು. ಹೀಗಾಗಿ, ಸ್ಫೋಟ ನಡೆಸುವ ಮುನ್ನ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆರೋಪಿಗಳೆಲ್ಲರೂ ಸರಣಿ ಸಭೆಗಳನ್ನು ನಡೆಸಿದ್ದಾರೆ. ಬಳಿಕ, ಕೇರಳದಿಂದ ನ್ಪೋಟಕ ಬಾಂಬ್‌ಗಳನ್ನು ತಂದು ಒಂದೊಂದು ವಿಭಾಗದಲ್ಲಿ ಬಾಂಬ್ ಇಡುವ ಉಸ್ತುವಾರಿಯನ್ನು ವಹಿಸಿಕೊಂಡು ತಂಡ ತಂಡಗಳಾಗಿ ಬಾಂಬ್‌ಗಳನ್ನು ಇಟ್ಟಿದ್ದರು ಎಂದು ಅಧಿಕಾರಿ ತಿಳಿಸಿದರು.
ಸ್ಫೋಟದಲ್ಲಿಮಹಿಳೆ ಸಾವು!
ಮಡಿವಾಳ ಬಸ್ ನಿಲ್ದಾಣದಲ್ಲಿ ಜುಲೈ 25ರಂದು ಮಧ್ಯಾಹ್ನ 1:20ರ ಸುಮಾರಿಗೆ ಐಇಡಿ ಸ್ಫೋಟದ ಪರಿಣಾಮ ಸ್ಥಳದಲ್ಲಿದ್ದ ಸುಧಾ ಎಂಬುವವರು ಮೃತಪಟ್ಟಿದ್ದರು. ಆಕೆಯ ಪತಿ ರವಿ ಗಂಭೀರವಾಗಿ ಗಾಯ ಗೊಂಡಿದ್ದರು. ಜತೆಗೆ ಚೇತನ್ ಹಾಗೂ ಗುಳ್ಳಮ್ಮ ಅವರು ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಮೃತರಾಗಿರುವವರು ಅಬ್ದುಲ್ ರಹೀಂ, ಮಹಮದ್ ಫಯಾಜ್, ಫಾಯೀಸ್, ಮಹಮದ್ ಯಾಸೀನ್ ಬಂಧನ ಅಗಬೇಕಿರುವ ಆರೋಪಿಗಳು! ಅಯೂಬ್, ರಿಯಾಜ್ ಭಟ್ಕಳ್, ವಲೀ (ಎಲ್‌ಇಟಿ ಕಮಾಂಡರ್ ಪಾಕ್), ಅಲೀ
(ಮಸ್ಕಟ್ ), ಸಲೀಂ (ಢಾಕಾ ಬಾಂಗ್ಲಾ), ಜಾಹೀದ್, ಶೋಹೆಬ್
ಜೈಲಿನಲ್ಲಿರುವ ಆರೋಪಿಗಳು ಯಾರ್ಯಾರು?
ಅಬ್ದುಲ್ ನಾಜೀರ್ ಮದನಿ (ಷರತ್ತು ಬದ್ಧ ಜಾಮೀನು ಸಿಕ್ಕಿದೆ) ಟಿ. ನಜೀರ್, ಇ.ಟಿ ಜೈನುದ್ದೀನ್, ಸರ್ಪರಾಜ್ ನವಾಜ್, ಇ.ಟಿ ಶರಾಫುದ್ದೀನ್, ಅಬ್ದುಲ್ ಜಬ್ಟಾರ್, ಎ.ಇ ಮನಾಫ್, ಮುಜೀಬ್ , ಮಹಮದ್ ಸಕಾರಿಯಾ, ಬದ್ರುದ್ದೀನ್,
ಫೈಸಲ್, ಅಬ್ದುಲ್ ಜಲೀಲ್, ಉಮರ್ ಫಾರೂಕ್, ಇಬ್ರಾಹಿಂ ಮೌಲ್ವಿ, ಸಫಾಜ್, ಸಮೀರ್, ಸಫುದ್ದೀನ್, ತಾಜುದ್ದೀನ್,
ಅಬ್ದುಲ್ ಖಾದರ್, ಪಿ.ಬಿ ಸಾಬೀರ್
ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.