ಬೆಂಕಿ ಮಳೆ ಸುರಿದ್ರೂ ಏನೂ ಆಗಲ್ಲ!: ವಿನೂತನ ಜೀವರಕ್ಷಕ ಜಾಕೆಟ್ ಅಭಿವೃದ್ಧಿ
Team Udayavani, Feb 15, 2023, 3:56 PM IST
ಬೆಂಗಳೂರು: ಈ ಜಾಕೆಟ್ ಹಾಕಿಕೊಂಡಾಗ, ನಿಮ್ಮ ಮೇಲೆ ಬೆಂಕಿಯ ಮಳೆಯೇ ಸುರಿದರೂ ನೀವು ಒಳಗೆ “ಕೂಲ್’ ಆಗಿರ್ತೀರಾ. ಒಂದೇ ಒಂದು ಗಾಯ ಕೂಡ ಆಗುವುದಿಲ್ಲ! ವೀರಾ ಎಂಬ ಕಂಪನಿಯು ಈ ವಿನೂ ತನ ಜೀವರಕ್ಷಕ ಜಾಕೆಟ್ ಅಭಿವೃದ್ಧಿಪಡಿಸಿದೆ. ಇದನ್ನು ಧರಿಸಿದರೆ, ನೀವು -200 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿರಲಿ ಅಥವಾ 1000 ಡಿಗ್ರಿ ಸೆಲ್ಸಿಯಸ್ ಇರಲಿ ನಿಮ್ಮ ದೇಹದ ತಾಪಮಾನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಇದರ ಹೆಸರು “ಟಾರ್ಡಿಗ್ರೇಡ್ ಜಾಕೆಟ್’.
ಅತಿ ಎತ್ತರದ ಪ್ರದೇಶದಲ್ಲಿ ವಾಸಿಸುವವರಿಗೆ ಅಥವಾ ಹವಾಮಾನದಲ್ಲಿ ತುಂಬಾ ವೈಪ ರೀತ್ಯ ಗಳಿರುವ ಜಾಗಗಳಿಗೆ ತೆರಳುವವರಿಗೆ ಇದು ಹೇಳಿಮಾಡಿಸಿದ್ದಾಗಿದೆ. “ಈಗಿರುವ ಜಾಕೆಟ್‌ಗಳು ತುಂಬಾ ಭಾರ ಅಂದರೆ ಕನಿಷ್ಠ 2-3 ಕೆಜಿ ಇರುತ್ತವೆ. ಈ ಜಾಕೆಟ್ ತೂಕ ಬರೀ 900 ಗ್ರಾಂ ಆಗಿದ್ದು, ಪರ್ವತಾರೋ ಹಿಗಳಿಗೆ ಧರಿಸಲು ತುಂಬಾ ಆರಾಮ ದಾಯಕವೂ ಆಗಿರಲಿದೆ.
ಗಡಿಗಳಲ್ಲಿ ಹಾಗೂ ಅತಿ ಎತ್ತರದ ಪ್ರದೇಶಗಳಲ್ಲಿ ನಮ್ಮ ಸೈನಿಕರು ಇರುತ್ತಾರೆ. ಅಂತಹ ವರಿಗೆ ಇದು ಅನುಕೂಲ ಆಗಲಿದೆ. 6 ತಿಂಗಳ ಹಿಂದಷ್ಟೇ ಇದನ್ನು ಅಭಿವೃದ್ಧಿಪಡಿಸಿದ್ದು, ಎಲ್ಲ ರೀತಿಯ ಪರೀಕ್ಷೆಗಳು ಪೂರ್ಣಗೊಂಡಿವೆ. ಭಾರತೀಯ ನೌಕಾಸೇನೆಗೆ ಇದನ್ನು ಪೂರೈಸುತ್ತಿದ್ದು, ಈ ಸಂಬಂಧ ಒಡಂಡಿಕೆಯೂ ಆಗಿದೆ’ ಎಂದು ವೀರಾ ಕಂಪನಿಯ ಮಾರುಕಟ್ಟೆ ಅಧಿಕಾರಿ ಸುಕೃತ್ ತಿಳಿಸಿದರು.
ಸಾಮಾನ್ಯ ಜಾಕೆಟ್‌ಗಳ ಬೆಲೆ 5 ಸಾವಿರ ರೂಪಾಯಿ ಇರುತ್ತವೆ. ರಕ್ಷಣಾ ವಲಯದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಜೀವರಕ್ಷಕ ಜಾಕೆಟ್‌ಗಳ ಬೆಲೆ 50-70 ಸಾವಿರ ರೂಪಾಯಿ ಇರಬಹುದು. ಆದರೆ, ಈ ಜಾಕೆಟ್‌ನ ಬೆಲೆ ಒಂದು ಲಕ್ಷಕ್ಕೂ ಮೇಲ್ಪಟ್ಟಿದೆ ಎಂದೂ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.