8,500 ಸ್ಮಾರ್ಟ್ ಕ್ಷಾಸ್ ರೂಂ ಅಭಿವೃದ್ದಿ
Team Udayavani, Jul 11, 2021, 6:02 PM IST
ಬೆಂಗಳೂರು: ರಾಜ್ಯ ಸರ್ಕಾರ ಡಿಜಿಟಲ್‌ಕಲಿಕೆಗೆ ಪ್ರೋತ್ಸಾಹಹಾಗೂಆದ್ಯತೆ ನೀಡುತ್ತಿದ್ದು,8500 ಸ್ಮಾರ್ಟ್ ತರಗತಿ ಕೊಠಡಿಗಳನ್ನುಅಭಿವೃದ್ಧಿಪಡಿಸಲಿದ್ದೇವೆ ಎಂದು ಉನ್ನತ ಶಿಕ್ಷಣಸಚಿವರೂ ಆದ ಉಪ ಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ರಾಜ್ಯದ ಉನ್ನತ ಶಿಕ್ಷಣ ವಿಭಾಗದಲ್ಲಿರುವ8,500 ತರಗತಿ ಕೊಠಡಿಗಳನ್ನು ಪ್ರಸಕ್ತ ಶೈಕ್ಷಣಿಕವರ್ಷದಲ್ಲಿ ಸ್ಮಾರ್ಟ್‌ಕ್ಲಾಸ್ ರೂಂಗಳನ್ನಾಗಿಪರಿವರ್ತಿಸಲಾಗುತ್ತಿದೆ. ಈ ಪೈಕಿ 2,500ಕೊಠಡಿಗಳನ್ನು ಈಗಾಗಲೇ ಸ್ಮಾರ್ಟ್‌ಕ್ಲಾಸ್‌ರೂಂಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆಎಂದರು.ಮಲ್ಲೇಶ್ವರದ ಸರ್ಕಾರಿ ಪ್ರಥಮ ದರ್ಜೆಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ಉಚಿತ ಟ್ಯಾಬ್ಲೆಟ್-ಪಿಸಿಗಳನ್ನು ವಿತರಿಸಿ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಡಿಜಿಟಲ್‌ಕಲಿಕೆಗೆ ಪೂರಕವಾಗುವಂತೆ ಕಳೆದ ಶೈಕ್ಷಣಿಕವರ್ಷದಲ್ಲಿ 1.10 ಲಕ್ಷ ಲ್ಯಾಪ್‌ಟಾಪ್‌ಗ್ಳನ್ನುಪದವಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.ಇದಕ್ಕಾಗಿ 330 ಕೋಟಿ ರೂ. ಖರ್ಚುಮಾಡಲಾಗಿತ್ತು.
ಹಾಗೆಯೇ ಈ ಶೈಕ್ಷಣಿಕವರ್ಷದಲ್ಲಿ 1.60 ಲಕ್ಷದಷ್ಟು ಎಂಜಿನಿಯರಿಂಗ್,ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಡಿಜಿಟಲ್ ಪರಿಕರಗಳನ್ನುಕೊಟ್ಟು ಸರ್ಕಾರ ಸುಮ್ಮನಿಲ್ಲ. ಬದಲಾಗಿ,ಕಲಿಕಾವ್ಯವಸ್ಥೆಯನ್ನು ರೂಪಿಸಿದೆ. ಎಲ್‌ಎಂಎಸ್, ಇಡೀದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲದಕ್ರಾಂತಿಕಾರಿ ವ್ಯವಸ್ಥೆಯಾಗಿದೆ ಮತ್ತು ಖಾಸಗಿವಿಶ್ವವಿದ್ಯಾಲಯಗಳಿಗೂ ರೂಪಿಸಲುಸಾಧ್ಯವಾಗದ ಉಪಕ್ರಮ ಇದಾಗಿದೆ ಎಂದುತಿಳಿಸಿದರು.
ಎಲ್‌ಎಂಎಸ್ ಅತ್ಯುತ್ತಮಕಂಟೆಂಟ್ ಜತೆಗೆ,ಪರಿಣಾಮಕಾರಿಕಲಿಕೆಗೆಎಲ್ಲಆಯಾಮಗಳಲ್ಲೂಸಹಕಾರಿಯಾಗಿದೆ. 3.5 ಲಕ್ಷ ತರಗತಿಗಳನ್ನುನಮ್ಮದೇ ಬೋಧಕರು ಅಪ್‌ಲೋಡ್‌ಮಾಡಿದ್ದಾರೆ. ಇಂಥ ಅದ್ಭುತ ಯೋಜನೆಗೆಸರ್ಕಾರ 4 ಕೋಟಿ ರೂ. ಖರ್ಚು ಮಾಡಿದೆ.ಇಂತಹ ಉತ್ತಮ ಅವಕಾಶಗಳನ್ನುವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡುವಿದ್ಯಾರ್ಜನೆ ಮಾಡಬೇಕು. ಯಾವುದೇಕಾರಣಕ್ಕೂ ಮೈಮರೆಯಬಾರದು ಎಂದುಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಡಿ.ಎಸ್.ಪ್ರತಿಮಾ, ಐಕ್ಯೂಎಸಿ ಸಂಚಾಲಕ ಡಾ.ಸಿ.ಸ್ವಾಮಿನಾಥನ್ ಹಾಗೂ ನ್ಯಾಕ್ ಸಂಚಾಲಕಿ ಪಿ.ಎನ್.ಜಯಂತಿ ಹಾಗೂ ಪ್ರಾಧ್ಯಾಪಕರಾದರವಿಶಂಕರ್, ರವಿಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.