2 ವರ್ಷ ಕಳೆದರೂ ನಾಗರಿಕರ ಜಲಮಾರ್ಗ ಅಪೂರ್ಣ
Team Udayavani, Apr 16, 2023, 1:19 PM IST
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಪ್ರಪ್ರಥಮವಾಗಿ ಕೋರಮಂಗಲ ಕಣಿವೆ (ಕೆ-100) ರಾಜಕಾಲುವೆಯ “ನಾಗರೀಕರ ಜಲಮಾರ್ಗ’ ಕಾಮಗಾರಿಯೂ ಆಮೆ ವೇಗದಲ್ಲಿ ಸಾಗುತ್ತಿದೆ.
ಕಾಮಗಾರಿ ಪ್ರಾರಂಭಗೊಂಡು 11 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ, ಸುಮಾರು 2 ವರ್ಷಗಳು ಕಳೆದರೂ ಶೇ.80ರಷ್ಟು ಕಾಮಗಾರಿ ನಡೆದಿದ್ದು, ಉಳಿದ ಶೇ.20ರಷ್ಟು ಕಾಮಗಾರಿಯನ್ನು ಮುಂದಿನ ಐದಾರು ತಿಂಗಳುಗಳಲ್ಲಿ ಪೂರ್ಣ ಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿಕೊಂಡಿದೆ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಎದುರು ಇದ್ದ ರಾಜಕಾಲುವೆ ಸ್ಥಳವು ಒಳಚರಂಡಿ ತ್ಯಾಜ್ಯ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ಸಾರ್ವಜನಿಕರು ಮನೆಯಲ್ಲಿನ ತ್ಯಾಜ್ಯವನ್ನೂ ಆ ಪ್ರದೇಶದಲ್ಲಿ ಎಸೆಯುತ್ತಿದ್ದರು. ಇದರಿಂದಾಗಿ ಆ ಪ್ರದೇಶದ ಸುತ್ತಲೂ ದುರ್ವಾಸನೆಯಿಂದ ಜನರು ಮೂಗಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿತ್ತು. ಜತೆಗೆ ಮಳೆ ಸಂದರ್ಭದಲ್ಲಿ ಮಳೆ ನೀರಿನೊಂದಿಗೆ ಕೊಚ್ಚೆ ನೀರು ಸುತ್ತಮುತ್ತಲಿನ ಪ್ರದೇಶದಲ್ಲಿ ಹರಿಯುತ್ತಿತ್ತು. ಇದನ್ನು ತಪ್ಪಿಸಲು ಮಹಾನಗರ ಪಾಲಿಕೆಯೂ ರಾಜಕಾಲುವೆಗಳ ಪುನಶ್ಚೇತನ ಯೋಜನೆಯಡಿ ಈ ನಾಗರೀಕರ ಜಲಮಾರ್ಗ ಯೋಜನೆಯನ್ನು ಕೈಗೊಂಡಿದೆ.
ರಾಜಕಾಲುವೆಗಳಿಂದ ತ್ಯಾಜ್ಯ ನೀರನ್ನು ಹೊರತುಪಡಿಸಿ, ಈ ಸ್ಥಳಗಳನ್ನು ಸಾರ್ವಜನಿಕ ಆಕರ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶ. ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಅಭಿವೃದ್ಧಿ ಪಡಿಸಲಾಗಿದ್ದು, ಶಾಂತಿನಗರದ ಟಿಟಿಎಂಪಿ ಮುಂಭಾಗ “ನಾಗರೀಕರ ಜಲಮಾರ್ಗ’ ಪ್ಲಾಜಾವನ್ನು ನಿರ್ಮಿಸಲಾಗಿದ್ದು, ಈ ದೆಸೆಯಲ್ಲಿ ಕೋರಮಂಗಲ ಕಣಿವೆಯ 32 ಚ.ಕಿ.ಮೀ. ಜಲಾಯನ ಪ್ರದೇಶವನ್ನು ಸುಮಾರು 9.6 ಕಿ.ಮೀ.ಉದ್ದಕ್ಕೆ 195 ಕೋಟಿ ರೂ.ವೆಚ್ಚ ದಲ್ಲಿ ನಿರ್ಮಿಸಲು ಕೈಗೊಂಡಿದ್ದು, 2020ರ ಡಿ.31ರಂದು ಈ ಯೋಜನೆಗೆ ಸರ್ಕಾರವು 169 ಕೋಟಿ ರೂ.ಗಳ ಅನುಮೋದನೆ ನೀಡಿದ್ದು, 2021ರ ಮಾ.25ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಮಗಾರಿಗೆ ಚಾಲನೆ ನೀಡಿದ್ದರು.
2021ರ ಮೇ 6ರಿಂದ ಕಾಮಗಾರಿ ಪ್ರಾರಂಭವಾಗಿದ್ದು,11 ತಿಂಗಳೊಳಗೆ ಕಾಮಗಾರಿ ಸಂಪೂ ರ್ಣಗೊಳಿಸಲು ಗಡುವು ನೀಡಿತ್ತು. ಆದರೆ, ನಾಲ್ಕು ತಿಂಗಳ ಮಳೆಗಾಲ, ಹೂಳು ತೆಗೆಯು ವುದು, ಅಕಾಲಿಕ ಮಳೆ ಹಾಗೂ ಒಳಚರಂಡಿ ತ್ಯಾಜ್ಯ ಹರಿಯಲು ಅನ್ಯ ವ್ಯವಸ್ಥೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಕಾಮಗಾರಿಯೂ ನಿಧಾನಗತಿ ಯಲ್ಲಿ ಸಾಗುತ್ತಿದ್ದು, ಮುಂದಿನ ಐದಾರು ತಿಂಗಳಲ್ಲಿ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ತಿಳಿಸಿದರು.
ಕೋರಮಂಗಲ ಕಣಿವೆ ಬಳಿ ಸುಂದರ ಪ್ಲಾಜಾ : ಈ ಕೋರಮಂಗಲ ಕಣಿವೆ (ಕೆ-100) ಬಳಿ ಸುಂದರವಾದ ಪ್ಲಾಜಾವನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚ್‌ಗಳು, ಸುತ್ತಲೂ ಆಕರ್ಷಕವಾದ ಹೂವಿನ ಗಿಡ-ಮರಗಳು, ಸೆಲ್ಫೀ ಪಾಯಿಂಟ್, ಕೆ.ಎಚ್.ರಸ್ತೆಯಿಂದ ಈಜೀಪುರವರೆಗೆ ವಾಯುವಿಹಾರ ಮಾಡಲು ಕಣಿವೆಯ ಎರಡೂ ಬದಿಯಲ್ಲಿ ಸುಮಾರು 7.5 ಕಿ.ಮೀ. ಉದ್ದದ ಪಾದಚಾರಿ ಮಾರ್ಗ, ಸುಮಾರು 480ರಿಂದ 500 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ನೆಲದ ಮಟ್ಟ ತುಂಬಿ ಕೊಂಡಿದ್ದ ಹೂಳನ್ನು ತೆಗೆಯುವು ದಕ್ಕೆ ಬಹಳ ಸಮಯ ಹಿಡಿಯಿತು. ಬಳಿಕ ಮಳೆಗಾಲ ಪ್ರಾರಂಭ ಮತ್ತು ಒಳಚರಂಡಿ ಹರಿಯಲು ಅನ್ಯ ಮಾರ್ಗ ಕಲ್ಪಿಸುವುದು. ಹೀಗೆ ಹಲವು ಕಾರಣಗಳಿಂದಾಗಿ ನಾಗರಿಕರ ಜಲಮಾರ್ಗ ಯೋಜನೆಯ ಕಾಮಗಾರಿಯೂ ತಡವಾಗಿದೆ. ಇನ್ನೂ ಐದಾರು ತಿಂಗಳುಗಳಲ್ಲಿ ಈ ಕಾಮಗಾರಿ ಪೂರ್ಣವಾಗಿ, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. -ಬಿ.ಎಸ್. ಪ್ರಹ್ಲಾದ್, ಬಿಬಿಎಂಪಿ ಮುಖ್ಯ ಎಂಜಿನಿಯರ್
-ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.