ಇಂದಿರಾನಗರದಲ್ಲಿ ಮಧುಮೇಹ ಚಿಕಿತ್ಸಾ ಕೇಂದ್ರ
Team Udayavani, Jun 10, 2017, 12:40 PM IST
ವಿಧಾನಪರಿಷತ್ತು: ಕರ್ನಾಟಕ ಮಧುಮೇಹ ಸಂಸ್ಥೆಗೆ ಇಂದಿರಾನಗರದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ, ಅಗತ್ಯವಿರುವ ಸಿಬ್ಬಂದಿ ನೇಮಿಸಲಾಗುವುದು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ.
ಬಿಜೆಪಿಯ ರಾಮಚಂದ್ರ ಗೌಡ ಅವರು ನಿಯಮ 72ರ ಅಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, “ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮಧುಮೇಹಿಗಳಿಗೆ ಹೊರರೋಗಿ ಚಿಕಿತ್ಸಾ ವಿಭಾಗವಿದೆಯೇ ಹೊರತು ಒಳರೋಗಿ ವಿಭಾಗವಿಲ್ಲ. ಅಲ್ಲದೆ, ಮಂಜೂರಾದ 178 ಹುದ್ದೆಗಳಲ್ಲಿ ಅವಶ್ಯಕವಿರುವ ಸಿಬ್ಬಂದಿಯನ್ನು ನಿಯೋಜನೆ ಹಾಗೂ ಗುತ್ತಿಗೆ/ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ.
ಹಾಗಾಗಿ ಇಂದಿರಾನಗರದಲ್ಲಿ 37 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆದು ಶೀಘ್ರವೇ ಟೆಂಡರ್ ಆಹ್ವಾನಿಸಲಾಗುವುದು. ಕಟ್ಟಡ ನಿರ್ಮಾಣವಾಗುತ್ತಿದ್ದಂತೆ ಸಿಬ್ಬಂದಿ ನಿಯೋಜಿಸಲಾಗುವುದು,’ ಎಂದು ಹೇಳಿದರು.
ಸದ್ಯ ಮಧುಮೇಹ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಜತೆಗೆ ಅಗತ್ಯವಿರುವ ಕಡೆ ಮಧುಮೇಹ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ರಾಮಚಂದ್ರಗೌಡ ಮಾತನಾಡಿ, “ಕರ್ನಾಟಕ ಮಧುಮೇಹ ಸಂಸ್ಥೆಯು ಜಯದೇವ ಸಂಸ್ಥೆ ಆವರಣದಲ್ಲಿ ಸಣ್ಣ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಅತ್ಯುತ್ತಮ ಸೇವೆ ನೀಡುತ್ತಿದೆ.
ಹಾಗಾಗಿ ಇಂದಿರಾನಗರದಲ್ಲಿ ಉದ್ದೇಶಿತ ಆಸ್ಪತ್ರೆ ನಿರ್ಮಾಣಕ್ಕೆ ಆರು ಎಕರೆ ಜತೆಗೆ ಇನ್ನೂ ಆರು ಎಕರೆ ಹೆಚ್ಚುವರಿ ಜಾಗದಲ್ಲಿ ವಿಶಾಲವಾದ ಆಸ್ಪತ್ರೆ ನಿರ್ಮಿಸಿ ಸೇವೆ ಕಲ್ಪಿಸುವತ್ತ ಗಮನ ಹರಿಸಬೇಕು. ಇದರಿಂದ ಸಂಶೋಧನೆ ಇತರೆ ಸೇವೆ ಕಲ್ಪಿಸಲು ಅನುಕೂಲವಾಗಲಿದೆ,’ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ, “ಕರ್ನಾಟಕ ಮಧುಮೇಹ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಅರೆವೈದ್ಯ ಸಿಬ್ಬಂದಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಕಾಯಂ ಸಿಬ್ಬಂದಿಯನ್ನು ನೇಮಿಸಬೇಕು.
ಇಂದಿರಾನಗರದಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆ ಬಳಿಯೇ ನೆಫೊ- ಯುರಾಲಜಿ ಸೇವೆ ಆರಂಭಿಸಿದರೆ ರೋಗಿಗಳಿಗೆ ಅನುಕೂಲವಾಗಲಿದೆ. ದಿನ ಕಳೆದಂತೆ ರಾಜ್ಯದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯ ನಾಲ್ಕೂ ವಿಭಾಗಗಳಲ್ಲಿ ಒಂದು ಮಧುಮೇಹ ಚಿಕಿತ್ಸಾ ಕೇಂದ್ರ ನಿರ್ಮಿಸಬೇಕು,’ ಎಂದು ಮನವಿ ಮಾಡಿದರು.
ಜೆಡಿಎಸ್‌ನ ರಮೇಶ್‌ಬಾಬು ಮಾತನಾಡಿ, “ಮಧುಮೇಹ ಸಂಸ್ಥೆಯು ಉತ್ತಮ ಸೇವೆ ನೀಡುತ್ತಿದ್ದು, ಕೇವಲ ಒಂದು ಆಸ್ಪತ್ರೆಯಿಂದ ಇಡೀ ನಗರದ ಮಧುಮೇಹಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹಾಗಾಗಿ ನಗರದ ಏಳೆಂಟು ಕಡೆ ಮಧುಮೇಹ ಕೇಂದ್ರಗಳನ್ನು ತೆರೆಯಬೇಕು’ ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.