ಕೊಕ್ಕೆ ಹಾಕುವ ಮನಸ್ಥಿತಿಯಿಂದ ಹೊರ ಬನ್ನಿ


Team Udayavani, May 27, 2018, 6:30 AM IST

26bnp-1.jpg

ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ಸಚಿವಾಲಯದ ನೌಕರರಿಗೆ ಕ್ಲಾಸ್‌ ತೆಗೆದುಕೊಂಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, “ಉತ್ತಮ ಆಡಳಿತದಲ್ಲಿ ಸರ್ಕಾರಿ ನೌಕರರ ಪಾತ್ರ ಬಹುಮುಖ್ಯ. ಅಧಿಕಾರಿ ನೌಕರರು ಕೊಕ್ಕೆ ಹಾಕುವು ಮನಸ್ಥಿತಿಯಿಂದ ಹೊರಬರಬೇಕು. ಕಡತಗಳ ವಿಲೇವಾರಿ ತ್ವರಿತವಾಗಿ ಆಗಬೇಕೆಂದು ತಾಕೀತು ಮಾಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಸಚಿವಾಲಯ ಪತ್ರಾಂಕಿತ ಅಧಿಕಾರಿಗಳ ಸಂಘದ ವಜ್ರ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಅಧಿಕಾರಿ-ನೌಕರರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕು. ಡ್ಯುಟಿ ವೇಳೆ ಮೊಬೈಲ್‌ ಫೋನ್‌ಗಳನ್ನು ಪಕ್ಕಕ್ಕಿಡಬೇಕು’ ಎಂದು ಖಡಕ್‌ ಆಗಿ ಹೇಳಿದರು.

ಜನರಿಗೆ ನೋವು ಕೊಡಲು ನೀವು (ನೌಕರರು) ಸರ್ಕಾರಿ ನೌಕರರಾಗಿ ನೇಮಕ ಆಗಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ದೇವರು ಈ ಜವಾಬ್ದಾರಿಯನ್ನು ನಿಮಗೆ ನೀಡಿದ್ದಾನೆ. ಆದರೆ, ಕಡತಗಳಿಗೆ ಕೊಕ್ಕೆ ಹಾಕಿ, ಜನರಿಗೆ ತೊಂದರೆ ಕೊಡಬೇ ಕೆಂಬ ಆಲೋಚನೆ ನಿಮ್ಮಲ್ಲಿ ಯಾಕೆ ಬರುತ್ತದೆ ಗೊತ್ತಿಲ್ಲ. ನಿಮ್ಮ ಹಂತದಲ್ಲೇ ವಿಲೇವಾರಿ ಆಗ
ಬೇಕಾದ ಎಷ್ಟೋ ಕಡತಗಳು ನನ್ನ ಬಳಿ ಬರುತ್ತವೆ.

ಈ ನಿಟ್ಟಿನಲ್ಲಿ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ನೀವು ಹಿಂದೆಬಿದ್ದಿದ್ದೀರಿ. ಕೊಕ್ಕೆ ಹಾಕುವ ಪ್ರವೃತ್ತಿ ಬಿಡಬೇಕು’ ಎಂದು ತಾಕೀತು ಮಾಡಿದರು.

ನೀವು ಅದೃಷ್ಟವಂತರು: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜನರ ನಿರೀಕ್ಷೆಗಳು ತುಂಬಾ ಇವೆ. ಅವುಗಳನ್ನು ಈಡೇರಿಸುವ ಮೂಲಕ ಉತ್ತಮ ಆಡಳಿತ ನೀಡುವುದರಲ್ಲಿ ಸರ್ಕಾರಿ ನೌಕರರ ಪಾತ್ರ ದೊಡ್ಡದು. 6.25 ಕೋಟಿ ಜನರಲ್ಲಿ ಕೆಲವೇ ಲಕ್ಷ ಜನರಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ಪಿ.ಎಚ್‌ಡಿ, ಎಂಎ, ಎಂμಲ್‌ ಪೂರೈಸಿದವರೆಲ್ಲಾ ಕಾನ್‌ಸ್ಟೆàಬಲ್‌ ಹುದ್ದೆಗೆ ಭರ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ನೀವು ಅದೃಷ್ಟವಂತರು ಎಂದು ಸೂಚ್ಯವಾಗಿ ಹೇಳಿದರು.

“ನಾನು ನಿಮಗೆ ಕ್ಲಾಸ್‌ ತೆಗೆದುಕೊಳ್ಳಲು ಬಂದಿಲ್ಲ. ಆದರೆ, ಇದೊಂದು ಅವಕಾಶ ಸಿಕ್ಕಿದ್ದರಿಂದ ನಿಮಗೆ ಹೇಳುತ್ತಿದ್ದೇನೆ’ ಎಂದೂ ಸ್ಪಷ್ಟಪಡಿಸಿದ ಕೆ. ರತ್ನಪ್ರಭಾ,ಮೊಬೈಲ್‌ ಫೋನ್‌ ದೊಡ್ಡ ಅಡ್ಡಿಯಾಗಿದೆ. ಕೆಲಸ ಮುಗಿಯುವವರೆಗೂ ಮೊಬೈಲ್‌ ಪಕ್ಕಕ್ಕಿಡಿ, ಕೆಲಸದ ಸಮಯ ಮುಗಿದ ನಂತರ ನಿಮಗೆ ಮುಕ್ತ ಅವಕಾಶ ಇರುತ್ತದೆ ಎಂದು ತಿಳಿಸಿದರು.

ಕಚೇರಿ ಎರಡನೇ ಮನೆ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಮಾತನಾಡಿ, ನೌಕರರು ದಿನದ ಬಹುತೇಕ ಸಮಯವನ್ನು ಕಚೇರಿಗಳಲ್ಲಿ ಕಳೆಯುತ್ತಾರೆ. ಹಾಗಾಗಿ, ಕಚೇರಿ ಎರಡನೇ ಮನೆ ಇದ್ದಂತೆ.ನಿಮ್ಮ ಕುಟುಂಬದ ಸದಸ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವಂತೆ ಜನರ ಸಮಸ್ಯೆಗಳಿಗೂ ಸ್ಪಂದಿಸುವುದು
ನೌಕರರ ಜವಾಬ್ದಾರಿ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಕೆ. ರಾಮು, ಕರ್ನಾಟಕ ಸರ್ಕಾರ ಸಚಿವಾಲಯ ಪತ್ರಾಂಕಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎಸ್‌.ಎನ್‌. ಕೃಷ್ಣಕುಮಾರ್‌, ಪದಾಧಿಕಾರಿಗಳಾದ ಡಾ.ಎಲ್‌. ಗೀತಾ, ಬಿ.ಎಸ್‌.ನಾಗರಾಜ್‌, ಎ. ದಿನೇಶ್‌ ಸಂಪತ್‌ರಾಜ್‌, ಟಿ.ವಿ.ಜಾನ್ಸನ್‌ ಆಂಥೋಣಿ, ಆರ್‌. ಚಂದ್ರಶೇಖರ್‌ ಉಪಸ್ಥಿತರಿದ್ದರು.

ಇದೇ ವೇಳೆ, ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸಬೇಕು. ಕೇಂದ್ರ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ನಿಗದಿಪಡಿಸಿದ ವೇತನ ಶ್ರೇಣಿಯನ್ನು ರಾಜ್ಯದ ಸಚಿವಾಲಯಕ್ಕೂ ಅನ್ವಯ ಆಗಬೇಕು. ಹಳೆಯ ಪಿಂಚಣಿ ಯೋಜನೆಯನ್ನು ಮುಂದು ವರಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘವು ಮನವಿ ಸಲ್ಲಿಸಿತು.

ಜನರಿಗೆ ವಿನಾಕಾರಣ ಸರ್ಕಾರಿ ನೌಕರರು ತೊಂದರೆ ಕೊಟ್ಟರೆ,ಶಾಪ ತಟ್ಟುತ್ತದೆ. ಜನರ ಸೇವೆ ಮಾಡಲು
ದೇವರು ನಿಮ್ಮನ್ನು (ನೌಕರರನ್ನು)ನೇಮಿಸಿದ್ದಾನೆ. ಆದರೆ, ವಿನಾಕಾರಣ ಕೊಕ್ಕೆ ಹಾಕಿ ಅಲೆದಾಡಿಸಿದರೆ, ಶಾಪ
ತಟ್ಟುತ್ತದೆ ಹುಷಾರು.

–  ರತ್ನಪ್ರಭಾ, ಸರ್ಕಾರದ ಮುಖ್ಯ ಕಾರ್ಯದರ್ಶಿ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.