ಡಿಪ್ಲೊಮಾ ಕೋರ್ಸ್: ಪರೀಕ್ಷೆ ಬರೆಯಲು ಅವಕಾಶ
Team Udayavani, Nov 5, 2018, 6:10 AM IST
ಬೆಂಗಳೂರು : ರಾಜ್ಯದ ಪಾಲಿಟೆಕ್ನಿಕ್‌ಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳಿಗೆ 2009-10ನೇ ಸಾಲಿನಲ್ಲಿ ಮೊದಲ ವರ್ಷಕ್ಕೆ ಹಾಗೂ 2011-12, 2012-13ರಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಎರಡನೇ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಕೊನೆಯ ಅವಕಾಶ ವಿಸ್ತರಿಸಲಾಗಿದೆ.
2009-10 ಹಾಗೂ 2011-12, 2012-13ರಲ್ಲಿ ಐಟಿಐಗೆ ದಾಖಲಾಗಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ 2018-19 ಏಪ್ರಿಲ್, ಮೇ ಸಮಿಸ್ಟರ್ ಪರೀಕ್ಷೆಯೇ ಕೊನೆಯ ಅವಕಾಶ ಆಗಿತ್ತು. ಆದರೆ, ಏಪ್ರಿಲ್, ಮೇನಲ್ಲಿ ನಡೆದ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರಿಂದ ಶೈಕ್ಷಣಿಕ ಹಿತದೃಷ್ಟಿಯಿಂದ ಒಂದು ಅವಧಿ ವಿಸ್ತರಿಸಲಾಗಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
ಈ ಅವಧಿಯಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಬೇರೆ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ. ನಿರ್ದಿಷ್ಟ ವರ್ಷದೊಳಗೆ ಕೋರ್ಸ್ ಪೂರೈಸಬೇಕು ಎಂಬ ಸ್ಪಷ್ಟ ನಿಯಮ ಇರುತ್ತದೆ. ಆದರೆ, ಕ್ಯಾರಿಓವರ್ ಪದ್ಧತಿಯಲ್ಲಿ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣ ವಿಷಯವನ್ನು ಮುಂದುವರಿಸಿಕೊಂಡು ಬರುತ್ತಿರುತ್ತಾರೆ. ಪಠ್ಯಕ್ರಮ ಬದಲಾದಂತೆ ಈ ವಿದ್ಯಾರ್ಥಿಗಳಿಗೆ ಅನಾನೂಕೂಲವಾಗಲಿದೆ. ಹೀಗಾಗಿ 2009-10 ಹಾಗೂ 2011-12, 2012-13ರಲ್ಲಿ ಐಟಿಐಗೆ ದಾಖಲಾಗಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದು ಪಾಸಾಗಲು ಒಂದು ಅವಕಾಶ ನೀಡಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅರ್ಹ ಅಭ್ಯರ್ಥಿಗಳು 2018ರ ನವೆಂಬರ್/ಡಿಸೆಂಬರ್ ಸೆಮಿಸ್ಟರ್ ಪರೀಕ್ಷೆ ಹಾಗೂ 2019ರ ಏಪ್ರಿಲ್/ಮೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಇದೆ. 2018ರ ನವೆಂಬರ್/ಡಿಸೆಂಬರ್ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗುವವರು ನ.13ರೊಳಗೆ ದಂಡ ರಹಿತವಾಗಿ ಪರೀಕ್ಷಾ ಶುಲ್ಕ ಪಾವತಿಸಬೇಕು ಎಂದು ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.