ಮನುಷ್ಯನ ಮೇಲೇ ನೇರ ಔಷಧ ಪ್ರಯೋಗ


Team Udayavani, Dec 2, 2018, 11:55 AM IST

manushyana.jpg

ಬೆಂಗಳೂರು: ಪ್ರಾಣಿಗಳ ಮೇಲೆ ನಡೆಸುವ ಔಷಧಗಳ ಪ್ರಯೋಗ ಈಗ ನೇರವಾಗಿ ಮನುಷ್ಯನ ಸ್ಟೆಮ್‌ಸೆಲ್‌ಗ‌ಳ ಮೇಲೆಯೇ ನಡೆಯಲಿದೆ. ಈ ಸಂಬಂಧ ಬಯೋ ಚಿಪ್‌ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಮನುಷ್ಯನ ಸ್ಟೆಮ್‌ಸೆಲ್‌ಗ‌ಳನ್ನು ಉದ್ದೇಶಿತ ಚಿಪ್‌ನಲ್ಲಿ ಸಂಗ್ರಹಿಸಿ, ಅದರ ಮೇಲೆ ಔಷಧಗಳ ಪ್ರಯೋಗ ನಡೆಸುವ ತಂತ್ರಜ್ಞಾನ ಬರುತ್ತಿದೆ.

ನಗರದ “ರಿಜಿನ್‌’ (ReaGene) ಬಯೋ ಸೈನ್ಸಸ್‌ ಕಂಪನಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಇದು ಸೇವೆಗೆ ಲಭ್ಯವಾಗಲಿದೆ. ಸಾಮಾನ್ಯವಾಗಿ ಮೊದಲು ನಾಯಿ, ಕೋತಿ ಅಥವಾ ಇಲಿಗಳ ಮೇಲೆ ಔಷಧಗಳ ಪರೀಕ್ಷೆ ನಡೆಸಲಾಗುತ್ತದೆ. ಅದು ಯಶಸ್ವಿಯಾದರೆ, ಮನುಷ್ಯನ ಮೇಲೆ ಪ್ರಯೋಗಿಸಲಾಗುತ್ತದೆ.

ಆದರೆ, ವಾಸ್ತವವಾಗಿ ಪ್ರಾಣಿಗಳು ಮತ್ತು ಮನುಷ್ಯನ ದೇಹದ ವ್ಯವಸ್ಥೆ ಭಿನ್ನವಾಗಿವೆ. ಇದೇ ಕಾರಣಕ್ಕೆ ಯಶಸ್ಸಿನ ಪ್ರಮಾಣ ಕೂಡ ತುಂಬಾ ಕಡಿಮೆ. ಪ್ರತಿ ವರ್ಷ ಇದಕ್ಕಾಗಿ ಲಕ್ಷಾಂತರ ಪ್ರಾಣಿಗಳು ಬಲಿಯಾಗುತ್ತವೆ. ಇದರ ಬದಲಿಗೆ ನೇರವಾಗಿ ವ್ಯಕ್ತಿಯ ಸ್ಟೆಮ್‌ಸೆಲ್‌ಗ‌ಳನ್ನು ಸಂಗ್ರಹಿಸಿ, ಅದರ ಮೇಲೆಯೇ ಪ್ರಯೋಗ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ. 

ನಿಖರ ಕಾಯಿಲೆಗೆ ನಿರ್ದಿಷ್ಟ ಔಷಧಿ: ಪ್ರಸ್ತುತ ರೋಗಿಯ ನಿಖರ ಕಾಯಿಲೆಯನ್ನು ಪತ್ತೆಗೆ ಹಾಗೂ ಆ ಕಾಯಿಲೆ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಸಲು ಡಯಾಗ್ನಸ್ಟಿಕ್‌ ಸೆಂಟರ್‌ಗಳಿವೆ. ಆದರೆ, ಆ ಕಾಯಿಲೆಗೆ ಇಂತಹದ್ದೇ ಔಷಧ ಕೊಡಬಹುದು ಎಂಬ ವ್ಯವಸ್ಥೆ ಇಲ್ಲ.

ಹಾಗಾಗಿ, ವೈದ್ಯರು ಕಾಯಿಲೆಗಳಿಗೆ ವಿವಿಧ ಹಂತಗಳಲ್ಲಿ ಔಷಧಗಳನ್ನು ಸೂಚಿಸುತ್ತಾರೆ. ಅವುಗಳಲ್ಲಿ ಯಾವುದಾದರೊಂದು ಸ್ಪಂದನೆ ಸಿಗುತ್ತದೆ. ಆದರೆ, ಅಷ್ಟೊತ್ತಿಗೆ ಕಾಯಿಲೆ ಉಲ್ಬಣಗೊಂಡಿರುತ್ತದೆ. ಅಥವಾ ಅದಕ್ಕೂ ಮುನ್ನ ವಿನಾಕಾರಣ ಔಷಧಗಳ ಸೇವನೆ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು “3ಡಿ ಮಾಡ್ಯುಲ್‌ ಬಯೋ ಚಿಪ್‌’ ಅಭಿವೃದ್ಧಿಪಡಿಸಲಾಗುತ್ತಿದೆ.

ಇದರಿಂದ ಸಮಯ ಉಳಿತಾಯ ಆಗಲಿದೆ ಎಂದು ಹಿರಿಯ ವಿಜ್ಞಾನಿ ಸೀತಾರಾಂ ಕುಲಕರ್ಣಿ ತಿಳಿಸುತ್ತಾರೆ. ವ್ಯಕ್ತಿಯ ಸ್ಟೆಮ್‌ಸೆಲ್‌ಗ‌ಳನ್ನು 3ಡಿ ಮಾಡ್ಯುಲ್‌ನ ಬಯೋ ಚಿಪ್‌ನಲ್ಲಿ ಹಾಕಲಾಗುವುದು. ಅದರ ಬೆಳವಣಿಗೆಗೆ ಪೂರಕವಾದ ಕೃತಕ ವಾತಾವರಣ ಸೃಷ್ಟಿಸಲಾಗುವುದು. ಉದಾಹರಣೆಗೆ ಯಕೃತ್‌ಗೆ ಸಂಬಂಧಿಸಿದ ಕಾಯಿಲೆ ಇದ್ದರೆ, ಆ ರೋಗಿಯ ಸ್ಟೆಮ್‌ಸೆಲ್‌ ಪಡೆದು, ಚಿಪ್‌ನಲ್ಲಿ ಹಾಕಲಾಗುವುದು.

ನಂತರ ಅದರ ಬೆಳವಣಿಗೆಗೆ ಬೇಕಾದ ಅಂಶಗಳನ್ನು ಪೂರೈಸಿ, ಕೃತಕವಾಗಿ ಯಕೃತ್‌ ಬೆಳೆಸಲಾಗುವುದು. ಅದರ ಬೆಳವಣಿಯನ್ನು ಆಧರಿಸಿ ಔಷಧವನ್ನು ನಿರ್ಧರಿಸಲಾಗುವುದು. ಈ ತಂತ್ರಜ್ಞಾನ ಇನ್ನೂ ಪ್ರಯೋಗ ಹಂತದಲ್ಲಿದ್ದು, ಯುಎಸ್‌ಎಫ್ಡಿಎ (ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ) ಅನುಮೋದನೆ ಪಡೆಯುವುದು ಬಾಕಿ ಇದೆ ಎಂದು ಹೇಳಿದರು.  

ಬಯೋ ಇನ್‌ಫಾರ್ಮೇಷನ್‌ ಸಾಫ್ಟ್ವೇರ್‌: ವಿದೇಶಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಜಾರಿಯಲ್ಲಿದೆ. ಆದರೆ, ಭಾರತದಲ್ಲಿ ಇಂತಹ ವ್ಯವಸ್ಥೆ ಇನ್ನೂ ಇಲ್ಲ ಎಂದ ಅವರು, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬರುವ ದಿನಗಳಲ್ಲಿ ಹೀಗೆ ಸಂಗ್ರಹಿಸಿದ ಮಾದರಿಗಳ ದತ್ತಾಂಶಗಳನ್ನು ಬಯೋ ಇನ್‌ಫಾರ್ಮೇಷನ್‌ ಸಾಫ್ಟ್ವೇರ್‌ನಲ್ಲಿ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ.

ಅದನ್ನು ಭಾರತೀಯ ವೈದ್ಯಕೀಯ ಪರಿಷತ್ತಿಗೆ ಸಲ್ಲಿಸಲಾಗುವುದು. ಇದರಿಂದ ವೈದ್ಯರು ಸುಲಭವಾಗಿ ರೋಗಿಗಳಿಗೆ ನಿಖರವಾದ ಔಷಧಿಗಳನ್ನು ಸೂಚಿಸಲು ಅನುಕೂಲ ಆಗಲಿದೆ ಎಂದರು. ದೇಶದ ನೂರಾರು ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳಿದ್ದು, ಅವರೆಲ್ಲರೂ ಪ್ರಾಣಿಗಳ ಮೇಲೆಯೇ ಔಷಧಗಳ ಪ್ರಯೋಗ ಮಾಡುತ್ತಾರೆ.

ಇದರಿಂದ ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಪ್ರಾಣಿಗಳ ಬಲಿ ಆಗುತ್ತದೆ. ಅಲ್ಲದೆ, ನೂರು ಪ್ರಯೋಗಗಳಲ್ಲಿ ಯಾವುದಾದರೂ ಒಂದು ಯಶಸ್ವಿಯಾಗುತ್ತದೆ. ಇದರಿಂದ ಸಮಯ ಮತ್ತು ಶ್ರಮವೂ ವ್ಯಯವಾಗುತ್ತದೆ ಎಂದು ಸೀತಾರಾಂ ಕುಲಕರ್ಣಿ ಹೇಳುತ್ತಾರೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

vidhana-Soudha

Cast Census: ಲಿಂಗಾಯತ, ಒಕ್ಕಲಿಗ ಜಂಟಿ ಸಮರ?

1-bajaj

L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್‌ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.