ಪಿಎಚ್‌ಡಿ ಅಧ್ಯಯನದಲ್ಲಿ ಶಿಸ್ತು ಅತ್ಯಗತ್ಯ
Team Udayavani, Mar 27, 2017, 12:29 PM IST
ಬೆಂಗಳೂರು: “ಸಂಶೋಧನಾ ವಿದ್ಯಾರ್ಥಿಗಳು ಶಿಸ್ತುಬದ್ಧ ಅಧ್ಯಯನದ ಮೂಲಕ ಸಂಶೋಧನಾ ಪ್ರಬಂಧಗಳಿಗೆ ನ್ಯಾಯ ಒದಗಿಸಬೇಕು,” ಎಂದು ಸಾಹಿತಿ ಭೈರಮಂಗಲ ರಾಮೇಗೌಡ ಸಲಹೆ ನೀಡಿದರು.
ಭಾನುವಾರ ಎಸ್‌ಆರ್‌ಎನ್ ಆದರ್ಶ ಸಂಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ “ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನದ ಮುನ್ನೋಟಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಪ್ರಸ್ತುತ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಿರ್ದಿಷ್ಟ ವಿಷಯದ ಬಗ್ಗೆ ನಡೆಯವ ಸಂಶೋಧನಾ ಪ್ರಬಂಧಗಳು ಯಾವ ಪ್ರಮಾಣದಲ್ಲಿ ವಾಸ್ತವಕ್ಕೆ ಹತ್ತಿರವಾಗಿವೆ ಎಂಬ ಬಗ್ಗೆ ಚಿಂತನೆಯಾಗಬೇಕಿದೆ” ಎಂದರು.
“ಸಂಶೋಧನಾ ಪ್ರಬಂಧಗಳು ಗಟ್ಟಿತನದಿಂದ ಕೂಡಿರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸಂಶೋಧನಾ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಕೂಲಂಕಶ ಅಧ್ಯಯನ ನಡೆಸಬೇಕು. ಸಮಗ್ರ ವಸ್ತು ವಿಷಯನ್ನು ಅಭ್ಯಸಿಸಿ, ತಾವು ಸಲ್ಲಿಸುವ ಸಂಶೋಧನಾ ಪ್ರಬಂಧಗಳಿಂದ ಹೊಸ ರೀತಿಯ ಅಧ್ಯಯನಕ್ಕೆ ಬೆಳಕು ಚೆಲ್ಲುವಂತಾಗಬೇಕು,” ಎಂದು ಈ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು .
“ವಿಧ್ಯಾರ್ಥಿಗಳು ಆಕರ್ಷಣೀಯ ಶೀರ್ಷಿಕೆಗಳಿಗೆ ಮನಸೋತು ಸಂಶೋಧನಾ ವಿಷಯ ಆಯ್ಕೆ ಮಾಡಿಕೊಳ್ಳಬಾರದು. ಹೀಗಾದಾಗ ಅಧ್ಯಯನದ ಸಂದರ್ಭದಲ್ಲಿ ಸಮರ್ಪಕ ಮಾಹಿತಿ ಕೊರತೆಯಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಸಂಶೋಧನಾ ವಸ್ತು ವಿಷಯ ಆಯ್ಕೆಯಲ್ಲಿ ಬಹಳ ಎಚ್ಚರಿಕೆಯಿಂದಿಧಿರಬೇಕು.
ಮತ್ತೂಂದೆಡೆ ಸಂಶೋಧನಾ ವಿದ್ಯಾರ್ಥಿಗಳಿಗೆ ತಮ್ಮ ಮಾರ್ಗದರ್ಶಕ ಅಧ್ಯಾಪಕರ ವಿರುದ್ಧ ಅಸಮಾಧಾನವಿದೆ. ಕೆಲ ಪ್ರಾಧ್ಯಾಪಧಿಕರು ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಜತೆ ವಿಷಯದ ಕುರಿತು ಅಗತ್ಯ ಚರ್ಚೆಯನ್ನೇ ನಡೆಸುವುದಿಲ್ಲ. ಸಂಶೋಧನಾ ಪ್ರಬಂಧಗಳನ್ನು ಕೂಲಂಕುಶವಾಗಿ ಪರ್ಯಾಲೋಚಿಸದೇ ತಂದುಧಿಧಿಧಿಕೊಟ್ಟ ಪ್ರಬಂಧಕ್ಕೆ ಸಹಿಹಾಕಿ ಕಳುಹಿಸುತ್ತಿರುವುದು ಬೇಸರದ ಸಂಗತಿ,” ಎಂದರು.
ಆದರ್ಶ ಸಂಜೆ ಕಾಲೇಜು ಪ್ರಾಂಶುಪಾಲೆ ಪೊ›.ನಥಾಲಿಯಾ ಡಿಸೋಜ, ಬೆಂವಿವಿ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ ಅಧ್ಯಕ್ಷ ಡಾ.ಬೆಳಕೆರೆ ಲಿಂಗರಾಜಯ್ಯ, ರೇವ ವಿ.ವಿ ಕನ್ನಡ ವಿಭಾಗದ ಸಂಶೋಧನಾ ಮಾರ್ಗದರ್ಶಕ ಡಾ.ಜಗದೀಶ್ ಬಾಬು ಬಿ.ವಿ, ಕೆ.ಹೆಚ್. ಕುಮಾರ್, ಸತ್ಯಮಂಗಲ ಮಹಾದೇವ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Mallikarjun kharge; ಹೇಳಿಕೆಯಿಂದ ಗ್ಯಾರಂಟಿ ಚುನಾವಣೆಗಾಗಿ ಎನ್ನುವುದು ಸ್ಪಷ್ಟ : ಜೋಶಿ
Poll promises; ಖರ್ಗೆ, ರಾಹುಲ್ ಗಾಂಧಿ ಕ್ಷಮೆಗೆ ಒತ್ತಾಯಿಸಿದ ಬಿಜೆಪಿ
INDvsNZ: ಮತ್ತೆ ಬ್ಯಾಟಿಂಗ್ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.