ಪಾಲಿಕೆ ಸದಸ್ಯೆಯರ ಮೇಲೆ ಅವ್ಯವಹಾರ ಆರೋಪ


Team Udayavani, Jun 20, 2017, 12:34 PM IST

muni-vs-corporators.jpg

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ಶಾಸಕರು ಹಾಗೂ ಬಿಬಿಎಂಪಿ ಮಹಿಳಾ ಸದಸ್ಯರ ನಡುವಿನ ತಿಕ್ಕಾಟ ಮುಂದುವರಿದ್ದು, ಸೋಮವಾರ ಶಾಸಕರ ಬೆಂಬಲಿಗರು ಮತ್ತು ಪಾಲಿಕೆ ಸದಸ್ಯೆಯರ ಆರೋಪ ಮತ್ತು ಪ್ರತ್ಯಾರೋಪಗಳಿಗೆ ನಗರದ ಪ್ರಸ್‌ಕ್ಲಬ್‌ ವೇದಿಕೆಯಾಗಿತ್ತು. 

ಶಾಸಕ ಮುನಿರತ್ನ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಬಿಡದೆ, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಕೌನ್ಸಿಲ್‌ ಸಭೆಯಲ್ಲಿ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಶಾಸಕರ ಬೆಂಬಲಿಗ ಸದಸ್ಯರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮೂವರು ಪಾಲಿಕೆ ಸದಸ್ಯೆಯರು ಅವ್ಯವಹಾರ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಯಾಗಿ ಕ್ಲಬ್‌ನ ಮತ್ತೂಂದು ಸಭಾಂಗಣದಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಲಗ್ಗೆರೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ, ಜೆ.ಪಿ.ಪಾರ್ಕ್‌ ಸದಸ್ಯೆ ಮಮತಾ ವಾಸುದೇವ ಮತ್ತು ಎಚ್‌ಎಂಟಿ ಬಡಾವಣೆ ಕಾರ್ಪೊರೇಟರ್‌ ಆಶಾ ಸುರೇಶ್‌, ಮಂಗಳವಾರದಿಂದ ಶಾಸಕರ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಸ್ವಾತಂತ್ರ್ಯ ಹೋರಾಟಗರ ಎಚ್‌.ಎಸ್‌.ದೊರೆಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಪ್ರತಿಭಟನೆ ಕರೆತರುವುದಾಗಿ ತಿಳಿಸಿದರು. ಆದರೆ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದೂಡಲಾಗಿದೆ.

ಶಾಸಕರ ಬೆಂಬಲಿಗರ ಆರೋಪಗಳೇನು?: ಯಶವಂತಪುರ ಪಾಲಿಕೆ ಸದಸ್ಯ ಜಿ.ಕೆ.ವೆಂಕಟೇಶ್‌ ಮಾತನಾಡಿ, “ಮೂವರು ಮಹಿಳಾ ಸದಸ್ಯೆಯರು ಶಾಸಕ ಮುನಿರತ್ನ ಅವರ ತೇಜೋವಧೆಗೆ ಮುಂದಾಗಿದ್ದು, ಜಾತಿ ಮುಂದಿಟ್ಟುಕೊಂಡು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಾಲಿಕೆ ಸದಸ್ಯೆ ಮಮತಾ ವಾಸುದೇವ್‌ ತಮ್ಮ ಕುಟುಂಬದವರ ಹೆಸರಿನಲ್ಲಿ ಜೆ.ಪಿ.ಪಾರ್ಕ್‌ನ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಅಲ್ಲದೆ ಕೆರೆಯ ಮೂಲ ಸರ್ವೇ ನಂಬರ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಮಾಡಿ ಕೋಟ್ಯಂತರ ರೂ. ದೋಚಿದ್ದಾರೆ,’ ಎಂದು ದೂರಿದರು.

ಪಾಲಿಕೆ ಸದಸ್ಯ ಜಿ.ಮೋಹನ್‌ ಕುಮಾರ್‌ ಮಾತನಾಡಿ, “ಮಲ್ಲೇಶ್ವರ, ಯಶವಂತಪುರ, ರಾಜರಾಜೇಶ್ವರಿ ನಗರ ವಿಭಾಗಗಳಿಂದ ಮಹಿಳಾ ಸದಸ್ಯರು ವಿವಿಧ ಕಾಮಗಾರಿಗಳಿಗೆ ಹಣ ಪಡೆದು ಅವ್ಯವಹಾರ ನಡೆಸಿದ್ದಾರೆ. ಜತೆಗೆ ಶಾಸಕರು ಕಾಮಗಾರಿಗಳ ವೀಕ್ಷಣೆಗೆ ಹೋದಾಗ ಪಾಲಿಕೆ ಸದಸ್ಯೆ ಆಶಾ ಸುರೇಶ್‌ ರೌಡಿಗಳಿಂದ ಶಾಸಕರಿಗೆ ಬೆದರಿಕೆ ಹಾಕಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದರೊಂದಿಗೆ ಶಾಸಕರ ವಿರುದ್ಧವೇ ಕಿರುಕುಳದ ಸುಳ್ಳು ದೂರು ದಾಖಲಿಸುತ್ತಿದ್ದಾರೆ,’ ಎಂದು ಆರೋಪಿಸಿದರು. 

ಬೆಥೆಲ್‌ ಸಂಸ್ಥೆಯ ಮುಖ್ಯಸ್ಥ ಡಾ.ಸನ್ನಿ ಮಾತನಾಡಿ, “ಲಗ್ಗೆರೆ ವಾರ್ಡ್‌ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ವೈದ್ಯಕೀಯ ಕಾಲೇಜಿನಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಆರೋಪಿಸಿ ಮಂಜುಳಾ ನಾರಾಯಣಸ್ವಾಮಿ ಅವರು, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡುವಂತೆ ಇನ್ನಿಲ್ಲದ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಎರಡೂವರೆ ಲಕ್ಷ ರೂ. ನೀಡಿದ್ದೇನೆ,’ ಎಂದು ಆರೋಪಿಸಿದರು. 

ಕಾನೂನುಗಳನ್ನು ಉಲ್ಲಂಘನೆ ಮಾಡದಿದ್ದರೆ ಹಣ ಏಕೆ ನೀಡಿದಿರಿ? ಎಂಬ ಪ್ರಶ್ನೆಗೆ ತಬ್ಬಿಬ್ಟಾದ ಡಾ.ಸನ್ನಿ, “ಕಿರುಕುಳ ನೀಡುತ್ತಿದ್ದರಿಂದ ಹಣ ನೀಡಿದ್ದು, ಹಣ ನೀಡಿರುವ ವಿಡಿಯೋ ನನ್ನ ಬಳಿಯಿದೆ,’ ಎಂದು ವಿಡಿಯೋ ತೋರಿಸಿದರು. ವಿಡಿಯೋದಲ್ಲಿ ಹಳೆಯ ಒಂದು ಸಾವಿರ ರೂ. ನೋಟಿರುವ ಬಗ್ಗೆ ಪ್ರಶ್ನಿಸಿದಾಗ, “ಆರು ತಿಂಗಳ ಹಿಂದೆ ಹಣ ನೀಡಿದ್ದು, ಈಗ ಮತ್ತಷ್ಟು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ,’ ಎಂದರು. ಕಟ್ಟಡ ನಿರ್ಮಾಣದ ಕುರಿತ ದಾಖಲೆಗಳನ್ನು ಕೇಳಿದಾಗ, ದಾಖಲೆಗಳು ಶಾಲೆಯಲ್ಲಿದ್ದು ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸಮಜಾಯಿಶಿ ನೀಡಿದರು.

ಸುಳ್ಳು ದೂರು, ಜಾತಿ ನಿಂದನೆ ಪ್ರಕರಣ!: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಶಾ ಸುರೇಶ್‌, ರಾಜರಾಜೇಶ್ವರಿ ನಗರ ಕ್ಷೇತ್ರದ ಒಕ್ಕಲಿಗ ಸಮುದಾಯದ ಸದಸ್ಯೆಯರಿಗೆ ಮುನಿರತ್ನ ಅವರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಸುಳ್ಳು ದೂರುಗಳು ಮತ್ತು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಮಹಿಳಾ ಸದಸ್ಯರ ಮಾತು ಕೇಳದಂತೆ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜನಪ್ರತಿನಿಧಿಗಳ ಹಕ್ಕಿಗೆ ಚ್ಯುತಿ ತಂದಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

“ಕಾಂಗ್ರೆಸ್‌ ಪಕ್ಷದಿಂದ ನನ್ನನ್ನು ವಜಾಗೊಳಿಸುವಂತೆ ಹೇಳಲು ಶಾಸಕ ಎಚ್‌.ಟಿ.ಸೋಮಶೇಖರ್‌ ಯಾರು?’ ಎಂದು ಪ್ರಶ್ನಿಸಿದ ಅವರು, “ಶಾಸಕ ಮುನಿರತ್ನ ನೀಡುತ್ತಿರುವ ಕಿರುಕುಳದ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೇನೆ. ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ,’ ಎಂದು ಸ್ಪಷ್ಟನೆ ನೀಡಿದ ಅವರು, “ಸೋಮಶೇಖರ್‌ ಅವರು ಸಚಿವ ಸ್ಥಾನ ದೊರೆಯಲಿಲ್ಲ ಎಂಬ ಹತಾಶೆಯಿಂದ ಹೈಕಮಾಂಡ್‌ ನನ್ನ “ಪುಟುಗೋಸಿ’ ಎಂಬ ಪದ ಬಳಿಸಿದ್ದರು. ಈಗ ನನ್ನ ಮೇಲೆ ಶಿಸ್ತು ಕೈಗೊಳ್ಳಲು ಅವರ್ಯಾರು?,’ ಎಂದು ದೂರಿದರು. 

ರಾಹುಲ್‌ ಗಾಂಧಿಗೆ ದೂರು: “ಶಾಸಕ ಮುನಿರತ್ನ ಅವರು ಕಿರುಕುಳ ನೀಡುತ್ತಿರುವ ಕುರಿತು ರಾಜ್ಯದ ಎಲ್ಲ ನಾಯಕರಿಗೆ ದೂರು ನೀಡಲಾಗಿದೆ. ಆದರೆ ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಜೂ.28ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲಾಗುವುದು,’ ಎಂದು ಆಶಾ ಸುರೇಶ್‌ ತಿಳಿಸಿದರು.

ಟಾಪ್ ನ್ಯೂಸ್

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

13-bng

Bengaluru: ಕೆಂಗೇರಿಯ ಮಧು ಪೆಟ್ರೋಲ್‌ ಬಂಕ್‌ ಜಂಕ್ಷನ್‌ ಮೃತ್ಯುಕೂಪ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kundapura: ಮದುವೆ ವಾಹನ ಅಡ್ಡಗಟ್ಟಿ ಹಲ್ಲೆ ಆರೋಪಿಗಳು ದೋಷಮುಕ್ತ

Kundapura: ಮದುವೆ ವಾಹನ ಅಡ್ಡಗಟ್ಟಿ ಹಲ್ಲೆ ಆರೋಪಿಗಳು ದೋಷಮುಕ್ತ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

2

Sullia: ಹೋರಿ ಎರಗಿ ವ್ಯಕ್ತಿಗೆ ಗಾಯ

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.