ಅನರ್ಹತೆ-“ಪರಿಚ್ಛೇದ 10′; ಪ್ರಶ್ನೆ ಹತ್ತಾರು


Team Udayavani, Nov 14, 2019, 3:07 AM IST

Supreme-Court

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಹಾಗೂ ರಾಜ್ಯದ ರಾಜಕೀಯ ವಿದ್ಯಮಾನಗಳು ರೋಚಕ ತಿರುವು ಪಡೆದುಕೊಳ್ಳಲು ಕಾರಣವಾಗಿದ್ದ ಕಾಂಗ್ರೆಸ್‌-ಜೆಡಿಎಸ್‌ನ 17 ಮಂದಿ ಶಾಸಕರ ರಾಜೀನಾಮೆ ಪ್ರಹಸನ ಹಾಗೂ ಅದರ ಮೇಲಿನ ಸ್ಪೀಕರ್‌ ಆದೇಶಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದಿದೆ. ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್‌ ಆದೇಶವನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಿದೆ. ಆದರೆ, 2023ರವರೆಗೆ ಅನರ್ಹಗೊಳಿಸಿದ್ದನ್ನು ಒಪ್ಪಿಲ್ಲ. ಹಾಗಾಗಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹತೆಗೊಂಡಿದ್ದ ಶಾಸಕರಿಗೆ ಅವಕಾಶ ಸಿಕ್ಕಿದೆ.

ಈ ಮೂಲಕ ಸುಪ್ರೀಂ ಸ್ಪೀಕರ್‌ ತೀರ್ಪನ್ನು ಭಾಗಶಃ ಎತ್ತಿಹಿಡಿದೆ. ಈ ಮಧ್ಯೆ, ಶಾಸಕರು ರಾಜೀನಾಮೆ, ಪಕ್ಷಾಂತರ ಹಾಗೂ ಅನರ್ಹತೆಯ ಪ್ರಹಸನದ ಮೂಲ ಬಿಂದು ಆಗಿದ್ದ ಸಂವಿಧಾನದ ಶೆಡ್ನೂಲ್‌ (ಪರಿಚ್ಛೇದ) 10 ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಖ್ಯಾನ ಹಾಗೂ ವೈರುಧ್ಯಗಳ ಬಗ್ಗೆ ಈ ತೀರ್ಪು ಹತ್ತಾರು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಸುಪ್ರೀಂಕೋರ್ಟ್‌ನ ಒಟ್ಟಾರೆ ತೀರ್ಪು ಮುಂದಿಟ್ಟುಕೊಂಡು, ಈ ವಿಷಯಗಳ ಬಗ್ಗೆ ಕಾನೂನು ತಜ್ಞರು ತಮ್ಮದೇ ವಿಶ್ಲೇಷಣೆ- ವಿಮರ್ಶೆಗೆ ಮುಂದಾಗಿದ್ದಾರೆ.

ಜತೆಗೆ ಐತಿಹಾಸಿಕ ಹಾಗೂ ಸಮತೋಲನ ಎಂದು ವಿಶ್ಲೇಷಿಸಲಾಗುತ್ತಿರುವ ಸುಪ್ರೀಂನ ಈ ತೀರ್ಪು ಸಂಸದೀಯ ವ್ಯವಸ್ಥೆಯ ನೈತಿಕತೆ, ಪಕ್ಷಗಳು ಮತ್ತು ಚುನಾಯಿತ ಜನಪ್ರತಿಧಿನಿಗಳ ನಡವಳಿಕೆಯ ಜತೆಗೆ ಮುಖ್ಯವಾಗಿ ಸ್ಪೀಕರ್‌ ಅವರ ಅಧಿಕಾರ ವ್ಯಾಪ್ತಿ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ನೂಲ್‌ನ ಕಾನೂನು ಸೂಕ್ಷತೆ ಹಾಗೂ ವ್ಯಾಖ್ಯಾನಗಳ ಕುರಿತ ಪರ-ವಿರೋಧ ಪರಾಮರ್ಶೆಗೆ ಹೊಸ ಬುನಾದಿ ಹಾಕಿಕೊಟ್ಟಿದೆ ಎನ್ನುತ್ತಾರೆ ತಜ್ಞರು.

ಏಕೆಂದರೆ, ಸಂವಿಧಾನದ 10ನೇ ಶೆಡ್ನೂಲ್‌ ಆಧರಿಸಿಯೇ ತಮ್ಮ ವಿವೇಚನಾ ಮತ್ತು ವಿಶೇಷಾಧಿಕಾರ ಬಳಿಸಿ ಸ್ಪೀಕರ್‌ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು. ಆದರೆ, ಅನರ್ಹತೆಗೆ ಅವಧಿ ನಿಗದಿಪಡಿಸಿದ ಸ್ಪೀಕರ್‌ ಕ್ರಮ ಸರಿಯಿಲ್ಲ. ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ಸ್ಪೀಕರ್‌ಗಳು ನಡೆದುಕೊಳ್ಳುತ್ತಿರುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ ಎಂಬ ಸುಪ್ರೀಂಕೋರ್ಟ್‌ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಕಾನೂನು ತಜ್ಞರು ಶೆಡ್ನೂಲ್‌ 10ರ ಬಗ್ಗೆ ತಮ್ಮದೇ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ.

ಸ್ಪೀಕರ್‌ ನಿಸ್ಪಕ್ಷಪಾತತನ ವಿರಳ: “ಸಂವಿಧಾನದ 10ನೇ ಶೆಡ್ನೂಲನ್ನು ಬಲಪಡಿಸುವ ಬದಲು ಅನೇಕ ಹಂತಗಳಲ್ಲಿ ಚುನಾವಣಾ ಸುಧಾರಣೆಗಳು ಆಗಬೇಕಿದೆ. ಮುಖ್ಯವಾಗಿ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವನ್ನು ಸ್ಪೀಕರ್‌ ಅವರಿಂದ ಕಿತ್ತೂಗೆಯಬೇಕು. ಏಕೆಂದರೆ, ಸ್ಪೀಕರ್‌ ಆದವರು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ ನಿದರ್ಶನಗಳು ಇತ್ತೀಚಿನ ವರ್ಷಗಳಲ್ಲಿ ತೀರಾ ವಿರಳ. ಈ ವಿಚಾರವನ್ನು ಸ್ವತಃ ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ. ಆಚಾರ್ಯ ಹೇಳುತ್ತಾರೆ.

ಸ್ಪಷ್ಟತೆ ಸಿಕ್ಕಿದೆ: ಸುಪ್ರೀಂ ತೀರ್ಪಿನಿಂದ 10ನೇ ಶೆಡ್ನೂಲ್‌ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಕ್ಕಿದೆಯೇ ಅಥವಾ ಸಿಗಬೇಕೆದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಅಡ್ವೋಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ, “ನನಗೆ ಹಾಗೇನು ಅನಿಸುತ್ತಿಲ್ಲ. ಏಕೆಂದರೆ, ಸಂವಿಧಾನದಲ್ಲಿ ಮೊದಲೇ ಆ ರೀತಿ ಇದೆ. ಯಾವುದೇ ಒಬ್ಬ ಶಾಸಕ ಅನರ್ಹಗೊಂಡು ಅಥವಾ ರಾಜಿನಾಮೆ ಕೊಟ್ಟು ಅದೇ ಪಕ್ಷದ ಸದಸ್ಯನಾಗಿ ಮುಂದುವರಿಯಲು ಅವಕಾಶವಿಲ್ಲ. ಆದರೆ, ರಾಜಿನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಹೋಗಲು ಅಥವಾ ಸ್ಪರ್ಧಿಸಿ ಗೆಲ್ಲಲು ಸಮಸ್ಯೆ ಇಲ್ಲ. ಹೀಗಿದ್ದಾಗಲೂ ರಮೇಶ್‌ ಕುಮಾರ್‌ ಅವರು ಸ್ವಲ್ಪ ಮುಂದುವರಿದಿದ್ದರು. ರಾಜೀನಾಮೆ ಮತ್ತು ಅನರ್ಹತೆ ವಿಚಾರ ಬಂದಾಗ ಏನು ಮಾಡಬೇಕು ಅನ್ನೊದಕ್ಕೆ ಸುಪ್ರೀಂ ಈ ತೀರ್ಪಿನಿಂದ ಸ್ಪಷ್ಟತೆ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.

ಪಕ್ಷ ವಿರೋಧಿ ಪದವೇ ಇಲ್ಲ: ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅನರ್ಹಗೊಂಡವರಿಗೆ ಗರಿಷ್ಠ ಮಟ್ಟದ ಶಿಕ್ಷೆ ಆಗಬೇಕು ಅನ್ನುವುದು ಮತದಾರರು, ಸಾರ್ವಜನಿಕರ ಸಹಜ ಮತ್ತು ಸಾಮಾನ್ಯ ಬೇಡಿಕೆ. ಆದರೆ, 10ನೇ ಶೆಡ್ನೂಲ್‌ನಲ್ಲಿ ಅದಕ್ಕೆ ಪೂರಕವಾದ ಅವಕಾಶಗಳು ಇಲ್ಲ. ಅಲ್ಲಿ ಇರುವುದು ಸ್ವ ಇಚ್ಛೆಯಿಂದ ರಾಜೀನಾಮೆ ಎಂದಿದೆ. ಪಕ್ಷ ವಿರೋಧಿ ಎಂಬ ಪದವೇ ಇಲ್ಲ. ಹಾಗಾಗಿ, ಅರ್ಥ ಬಾರದ ಪದಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಅರ್ಥ ಕೊಡುವ ಕೆಲಸವಾಗಿದೆ. ಅದು ಆಯಾ ಸಂದರ್ಭ, ಸನ್ನಿವೇಶ ಹಾಗೂ ಅನುಕೂಲಗಳಿಗೆ ತಕ್ಕಂತೆ ಆಗಿದೆ. ಹೀಗಾಗಿ, 10ನೇ ಶೆಡ್ನೂಲ್‌ಗೆ ಬಲ ನೀಡುವ ದಿಸೆಯಲ್ಲಿ ಶಾಸನ ರಚನಾ ಸಂಸ್ಥೆಗಳು ಅವಲೋಕನ ನಡೆಸಬೇಕಾಗಿದೆ ಎಂದು ಸುಪ್ರೀಂಕೋರ್ಟ್‌ ವಕೀಲ ಕೆ.ವಿ. ಧನಂಜಯ ಹೇಳುತ್ತಾರೆ.

ಈ ತೀರ್ಪು ಸಾಂವಿಧಾನಿಕ ತತ್ವಗಳ ಸಮರ್ಥನೆಯಾಗಿದೆ. ಜನಪ್ರತಿನಿಧಿಗಳು ತಮ್ಮ ವೈಯುಕ್ತಿಕ ಅಧಿಕಾರದಾಸೆಗೆ ಜನಮತವನ್ನು ನಿರ್ಲಕ್ಷ್ಯ ಸಾಧ್ಯವಿಲ್ಲ. ಅನರ್ಹ ಶಾಸಕರನ್ನು ಸೋಲಿಸುವ ಮೂಲಕ ಮತದಾರರು ಮತ್ತು ಜನತೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ತತ್ವಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ನನಗಿದೆ. ಇಂತಹ ಪ್ರಕರಣಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಕಾನೂನು ತಿದ್ದುಪಡಿ ತರುವ ಬಗ್ಗೆಯೂ ಸಂಸತ್ತು ಆಲೋಚಿಸಬೇಕು.
-ಎ.ಎಸ್‌. ಪೊನ್ನಣ್ಣ, ಮಾಜಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌

ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ: ಸುಧಾಕರ್‌
ಬೆಂಗಳೂರು: ಶಾಸಕರ ಅನರ್ಹತೆ ಪ್ರಕರಣದಲ್ಲಿ ಎಲ್ಲ ಶಾಸಕರಂತೆ ತಮ್ಮನ್ನೂ ಪರಿಗಣಿಸಿರುವುದು ಸರಿಯಿಲ್ಲ. ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಸುಧಾಕರ್‌ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ವಿಷಯಗಳಲ್ಲಿ ನಮ್ಮ ಪರವಾಗಿ ಬಂದಿದ್ದು, ಸ್ಪೀಕರ್‌ ಅವರ ತೀರ್ಮಾನವನ್ನು ಭಾಗಶಃ ಒಪ್ಪಿದೆ.

ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಈ ರೀತಿಯ ತೀರ್ಪು ನೀಡಿದೆ. ನಾನು ಅನರ್ಹತೆ ಅಡಿಯಲ್ಲಿ ಬರುವುದಿಲ್ಲ. ಸುಪ್ರೀಂ ಕೋರ್ಟ್‌ ಬೇರೆಯವರ ಜತೆಗೆ ನನ್ನನ್ನೂ ಪರಿಗಣಿಸಿದೆ. ವಿಚಾರಣೆ ವೇಳೆ ನನ್ನ ಪ್ರಕರಣದ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ನೋವು ತಂದಿದ್ದು, ಈ ಬಗ್ಗೆ ಕಾನೂನು ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದೇನೆ. ಈ ಬಗ್ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ವಕೀಲರ ತಂಡದ ಜತೆಗೆ ಚರ್ಚಿಸುವುದಾಗಿ ಹೇಳಿದರು.

ಕಾಂಗ್ರೆಸ್‌ನಲ್ಲಿ ನನ್ನನ್ನು ಮುಗಿಸಲು ಹುನ್ನಾರ ನಡೆಸಲಾಗಿತ್ತು. 14 ತಿಂಗಳು ಸಾಕಷ್ಟು ಅಪಮಾನವಾಗಿತ್ತು. ನಮ್ಮ ಪಕ್ಷದ ಮಂತ್ರಿಗಳೇ ನನ್ನ ಕೆಲಸ ಮಾಡಿಕೊಡದಂತೆ ಮುಖ್ಯಮಂತ್ರಿಗೆ ಸಲಹೆ ನೀಡುತ್ತಿದ್ದರು. ಇದನ್ನು ಕುಮಾರಸ್ವಾಮಿಯವರೇ ಹೇಳಿದ್ದರು. ಚುನಾವಣೆಯಲ್ಲಿ ಅವರ ಬೆಂಬಲ ಕೋರಲು ಇನ್ನೂ ಸಮಯವಿದೆ. ನಮ್ಮನ್ನು ಮುಗಿಸುವುದು ಬೆಳೆಸುವುದು ಜನರ ಕೈಯಲ್ಲಿದೆ ಎಂದರು.

ಫ‌ಲಿತಾಂಶದ ಮೇಲೆ ಅನರ್ಹರ ಭವಿಷ್ಯ ನಿರ್ಧಾರ
ಬೆಂಗಳೂರು: ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್‌, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸದೇ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂದು ಹೇಳುವ ಮೂಲಕ ಅನರ್ಹರಿಗೆ ಶಾಕ್‌ ನೀಡಿದೆ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ತಮ್ಮ ತೀರ್ಪಿನಲ್ಲಿ ಪ್ರಸಕ್ತ ವಿಧಾನಸಭೆಯ ಅವಧಿಗೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿದ್ದರು.

ಅಲ್ಲದೇ ಚುನಾವಣೆಯಲ್ಲಿ ಗೆಲ್ಲದ ಹೊರತು ಅವರಿಗೆ ಸಾಂವಿಧಾನಿಕ ಹುದ್ದೆ ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದರು. ಸುಪ್ರೀಂ ಕೋರ್ಟ್‌ ಕೂಡ ಅನರ್ಹತೆಯ ವಿಷಯದಲ್ಲಿ ಸ್ಪೀಕರ್‌ ನಿರ್ಧಾರವನ್ನು ಎತ್ತಿ ಹಿಡಿದಿದೆ. ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸದಿದ್ದರೆ, ಯಾವುದೇ ಸಾಂವಿಧಾನಿಕ ಹುದ್ದೆ ಪಡೆಯಲು ಅರ್ಹರಾಗುವುದಿಲ್ಲ ಎಂದು ಹೇಳಿರುವುದರಿಂದ ಅನರ್ಹ ಶಾಸಕರ ಭವಿಷ್ಯ ಚುನಾವಣೆಯ ಫ‌ಲಿತಾಂಶದ ಮೇಲೆ ನಿಂತಿದೆ.

ಬಿಜೆಪಿ, ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 7 ಜನ ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಅನಿವಾರ್ಯತೆಗೆ ಸಿಲುಕಿದೆ. ಆದರೆ, ಅನರ್ಹರು ಗೆಲ್ಲುವು ಸಾಧಿಸದೇ ಹೋದರೆ, ಮಂತ್ರಿ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದಲೂ ವಂಚಿತರಾಗುವುದರಿಂದ ಈ ಚುನಾವಣೆಯಲ್ಲಿ ಅನರ್ಹರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಒಂದು ವೇಳೆ ಚುನಾವಣೆಯಲ್ಲಿ ಸೋಲುಂಡರೆ, ಅವರ ಬಂಡಾಯದ ಉದ್ದೇಶವೇ ವಿಫ‌ಲವಾದಂತಾಗುತ್ತದೆ.

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.