ನಶಿಸುತ್ತಿರುವ ಸಾಂಪ್ರದಾಯಿಕ ಕಲೆ
Team Udayavani, May 3, 2018, 11:19 AM IST
ಬೆಂಗಳೂರು: ಅಸಕ್ತಿ ಹಾಗೂ ಪ್ರೊತ್ಸಾಹದ ಕೊರತೆಯಿಂದ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಸಾಂಪ್ರದಾಯಿಕ ಕಲೆಗಳು ನಶಿಸಿ ಹೋಗುತ್ತಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕೆಇಆರ್‌ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ಚಿತ್ರಕಲಾ ಮಹಾವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿರುವ ಗಂಜೀಫಾ ಕಲೆ ಕುರಿತ ಕಾರ್ಯಗಾರ, ಪ್ರದರ್ಶನ ಹಾಗೂ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮರೆಯಾಗುತ್ತಿರುವ ಕಲೆಗಳಲ್ಲಿ ಗಂಜೀಫಾ ಕಲೆಯೂ ಒಂದಾಗಿದೆ. ಮೊಘಲರ ಕಾಲದಲ್ಲಿ ಆಟದ (ಇಸ್ಪೀಟ್) ಎಲೆಗಳ ಮೇಲೆ ವಿವಿಧ ಬಗೆಯ ಗುರುತಿನ ಚಿತ್ರಗಳನ್ನು ಬಿಡಿಸುವ ಮೂಲಕ ಈ ಕಲೆಯನ್ನು ಬಳಸಲಾಗುತ್ತಿತ್ತು. ಆದರೆ, ಈಗ ಇದೇ ಇಸ್ಪೀಟ್ ಆಟದ ಎಲೆಗಳಲ್ಲಿ ರಾಜ ಹಾಗೂ ರಾಣಿಯ ಎರಡು ಚಿತ್ರಗಳು ಮಾತ್ರವೇ ಉಳಿದಿವೆ ಎಂದರು.
ಇಂದಿನ ಜನರು ಕಲೆಗಳಿಂದ ದೂರ ಉಳಿಯುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಿರಾಸಕ್ತಿಯೇ ಆಗಿದೆ. ಈ ನಿರಾಸಕ್ತಿ
ಮುಂದುವರಿದರೆ ಮುಂದೊಂದು ದಿನ ಕಲೆಗಳು ಕಲೆಗಳನ್ನು ಹುಡುಕಿಕೊಂಡು ವಸ್ತು ಸಂಗ್ರಹಾಲಯಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಗೃಹಿಣಿಯರು ತಮ್ಮ ಬಿಡುವಿನ ಸಮಯದಲ್ಲಿ ಕರಕುಶಲಕಲೆ ಹಾಗೂ ಇತರೆ ಕಲೆಗಳನ್ನು
ಹವ್ಯಾಸವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಲಾವಿದೆ ವಿಮಲಾ ರಂಗಚಾರ್ ಮಾತನಾಡಿ, ಇಂದು ಸಾಂಪ್ರದಾಯಿಕ ಕಲೆಗಳ ಕುರಿತು ಮಕ್ಕಳಿಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಮುಖ್ಯವಾಗಿ ಶಾಲೆ ಹಾಗೂ ಮನೆಗಳಲ್ಲಿ ಮಕ್ಕಳಿಗೆ ವಿವಿಧ ಕಲೆಯ ಬಗ್ಗೆ ತಿಳಿಸಿ ಆಸಕ್ತಿ ಮೂಡಿಸಿದಾಗ ನಮ್ಮ ಕಲೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಜೆ.ಕಮಲಾಕ್ಷಿ ಮಾತನಾಡಿ, ಗಂಜೀಫಾ ಕಲೆಯ ಪುನರು ಜ್ಜೀವನ ಹಾಗೂ ಪುನಶ್ಚೇತನದ ಉದ್ದೇಶದಿಂದ ಈ ಕಾರ್ಯಗಾರ ಹಮ್ಮಿಕೊಂಡಿದ್ದೇವೆ. ಮೇ 8ರವರೆಗೆ ನಡೆಯುವ ಕಾರ್ಯ ಗಾರದಲ್ಲಿ ಗಂಜೀಫಾ ಕುರಿತು ವಿವಿಧ ಉಪನ್ಯಾಸ ಹಾಗೂ ಪಾರಂಪರಿಕ ಆಟಗಳು ಇರುತ್ತವೆ. ಅನೇಕ ಕಲಾವಿದರು ಸ್ಥಳ ದಲ್ಲಿಯೇ ಚಿತ್ರ ಬಿಡಿಸುತ್ತಾರೆ. ಆಸಕ್ತರು ಅದನ್ನು ಕೊಂಡುಕೊಳ್ಳ ಬಹುದು ಅಥವಾ ಮುಂಗಡ ಕಾಯ್ದಿರಿಸಬಹುದು ಎಂದರು. ಕಾರ್ಯಕ್ರಮದಲ್ಲಿ ವಿವಿಧ ರಾಜ್ಯದ ಕಲಾವಿದರು ತಮ್ಮ ಚಿತ್ರಬರಹ ಹಾಗೂ ಸಂಗ್ರಹಗಳ ಮೂಲಕ ಭಾಗವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.