ಏಕಕಾಲದಲ್ಲಿ ವೈದ್ಯಕೀಯ ಕೋಟಾದ ಸೀಟುಗಳ ಹಂಚಿಕೆ
Team Udayavani, Dec 18, 2017, 6:00 AM IST
ಬೆಂಗಳೂರು: ಸರ್ಕಾರಿ, ಖಾಸಗಿ ಮತ್ತು ಎನ್‌ಆರ್‌ಐ ಕೋಟಾದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಹಂಚಿಕೆ ಇನ್ನು ಮುಂದೆ ಏಕಕಾಲದಲ್ಲಿ ನಡೆಯಲಿದೆ. ಪ್ರತ್ಯೇಕ ಸೀಟು ಹಂಚಿಕೆಯಿಂದ ಆಗುತ್ತಿದ್ದ ಗೊಂದಲಗಳ ನಿವಾರಣೆಗಾಗಿ ಮುಂದಿನ ವರ್ಷದಿಂದ ಈ ಪದ್ಧತಿ ಜಾರಿಗೊಳಿಸಲು ಚಿಂತಿಸಲಾಗಿದೆ.
2017-18ನೇ ಸಾಲಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸರ್ಕಾರಿ, ಖಾಸಗಿ ಹಾಗೂ ಎನ್‌ಆರ್‌ಐ ಕೋಟಾದ ಸೀಟುಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೂ ಸ್ವಲ್ಪ ಗೊಂದಲವಾಗಿತ್ತು. ಯಾವ ಕೋಟಾದಡಿ ಸೀಟು ಸಿಗಬಹುದೆಂಬ ಸ್ಪಷ್ಟತೆ ಇರಲಿಲ್ಲ. ಇದೆಲ್ಲದಕ್ಕೂ ಕಡಿವಾಣ ಹಾಕುವ ಉದ್ದೇಶದಿಂದ ಮುಂದಿನ ಸಾಲಿನ ಸರ್ಕಾರಿ, ಖಾಸಗಿ ಹಾಗೂ ಎನ್‌ಆರ್‌ಐ ಕೋಟಾ ಸೀಟು ಹಂಚಿಕೆಯನ್ನು ಏಕಕಾಲದಲ್ಲಿ ನಡೆಸಲು ಕ್ರಮ ತೆಗೆದುಕೊಂಡಿದೆ.
3,000 ಸೀಟುಗಳು: ಸರ್ಕಾರಿ, ಖಾಸಗಿ ಮತ್ತು ಎನ್‌ಆರ್‌ಐ ಕೋಟಾದ ಎಂ.ಡಿ, ಎಂ.ಎಸ್ ಹಾಗೂ ಪಿಜಿ ಡಿಪ್ಲೊಮಾ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ರಾಜ್ಯದ ಸುಮಾರು 3000 ಸೀಟು ಸೇರಿ ದೇಶಾದ್ಯಂತ 23,686 ಸೀಟುಗಳು ಲಭ್ಯವಿದೆ. ಪಿಜಿಸಿಇಟಿಯಲ್ಲಿ ಅಧಿಕ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳುವುದರಿಂದ ವೈದ್ಯಕೀಯ ಸೀಟು ಭರ್ತಿಯಾದ ನಂತರ ದಂತ ವೈದ್ಯಕೀಯ ಸೀಟು ಭರ್ತಿ ಮಾಡಲಾಗುತ್ತದೆ. ದಾಖಲೆ ಪರಿಶೀಲನೆ ಸೇರಿ ಸೀಟು ಹಂಚಿಕೆ ಪ್ರಕ್ರಿಯೆ ಮತ್ತು ಸೀಟು ಪಡೆದ ವಿದ್ಯಾರ್ಥಿಗಳು ಆಯಾ ಕಾಲೇಜಿಗೆ ಸೇರಿಕೊಳ್ಳುವ ಪ್ರಕ್ರಿಯೆ 2018ರ ಮೇ 31ರೊಳಗೆ ಮುಗಿಯಬೇಕು. 2018-19ನೇ ಸಾಲಿನ ಪಿಜಿಸಿಇಟಿ ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆಯ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಗೊಂಡಿದೆ.
ಬ್ರೋಷರ್ ಸಿದ್ಧತೆ : ಕೌನ್ಸೆಲಿಂಗ್, ಆಪ್ಷನ್ ಎಂಟ್ರಿ, ಕಾಲೇಜಿನ ಆಯ್ಕೆ, ಸೀಟು ಹಂಚಿಕೆ, ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ಲೋಡ್ ಸೇರಿ ಪಿಜಿಸಿಇಟಿ ಪರೀಕ್ಷಾ ವೇಳಾಪಟ್ಟಿ ಒಳಗೊಂಡಿರುವ ಬ್ರೋಷರ್ ಸಿದ್ಧಪಡಿಸುವ ಕಾರ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಲ್ಲೀನವಾಗಿದೆ.
ಏಪ್ರಿಲ್‌ನಲ್ಲಿ ಸಿಇಟಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಾರ್ಷಿಕ ಪರೀಕ್ಷೆ 2018ರ ಮಾರ್ಚ್‌ನಲ್ಲಿ ನಡೆಯುವುದರಿಂದ ಮುಂದಿನ ವರ್ಷದ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಕೂಡ ಏಪ್ರಿಲ್ 18, 19 ಮತ್ತು 20ರಂದು ನಡೆಯಲಿದೆ. ಅಂದರೆ, ಪಿಯು ಪರೀಕ್ಷೆ ಮುಗಿದ ಒಂದೇ ತಿಂಗಳಲ್ಲಿ ಸಿಇಟಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ಇರುತ್ತದೆ. ವಿಧಾನಸಭಾ ಚುನಾವಣೆಗೂ ಪೂರ್ವದಲ್ಲೇ ಫಲಿತಾಂಶ ನೀಡಲಿದ್ದೇವೆಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕೃತ ಆದೇಶವಷ್ಟೇ ಬಾಕಿ
2018-19ನೇ ಸಾಲಿನ ವೈದ್ಯಕೀಯ ಹಾಗೂ ದಂತವೈದ್ಯಕೀಯ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆ 2018ರ ಜ.7ರಂದು ನಡೆಯಲಿದ್ದು, ಜ.31ಕ್ಕೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಮಾರ್ಚ್‌ನಲ್ಲಿ ಕೌನ್ಸೆಲಿಂಗ್ ಆರಂಭವಾಗಲಿದೆ. ಎಂ.ಎಸ್ ಮತ್ತು ಎಂ.ಡಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಬಿಇ) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ನಡೆಸಲಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಎನ್‌ಬಿಇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇನ್ನಷ್ಟೇ ಅಧಿಕೃತ ಆದೇಶ ಬರಬೇಕಿದೆ.
ವೈದ್ಯಕೀಯ ಪಿಜಿಸಿಇಟಿ ಕೌನ್ಸೆಲಿಂಗ್ ಸಂಬಂಧಿಸಿದಂತೆ ಇನ್ನಷ್ಟೇ ಆದೇಶ ಬರಬೇಕಿದೆ. ರಾಜ್ಯದಲ್ಲಿ ಸುಮಾರು 3,000 ಸೀಟುಗಳಿವೆ. ಸರ್ಕಾರಿ, ಖಾಸಗಿ ಮತ್ತು ಎನ್‌ಆರ್‌ಐ ಕೋಟಾ ಸೀಟುಗಳ ಹಂಚಿಕೆ ಒಮ್ಮೆಗೇ ಮಾಡಲಿದ್ದೇವೆ. ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.
– ಡಾ.ಎಸ್.ಸಚ್ಚಿದಾನಂದ, ನಿರ್ದೇಶಕ, ವೈದ್ಯಕೀಯ ಶಿಕ್ಷಣ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.