ಅಭಿವೃದ್ಧಿ ನಡುವೆಯೂ ಕಿರಿದಾದ ರಸ್ತೆಗಳಲ್ಲಿ ದಟ್ಟಣೆ ಕಿರಿಕಿರಿ


Team Udayavani, Mar 31, 2018, 12:02 PM IST

abhivudhi.jpg

ಬೆಂಗಳೂರು: ದೇವಾಲಯಗಳ ಕ್ಷೇತ್ರ ಮಹಾಲಕ್ಷ್ಮೀ ಬಡಾವಣೆ ಅಭಿವೃದ್ಧಿ ಕಂಡಿದೆಯಾದರೂ ಇಕ್ಕಟ್ಟಾದ ರಸ್ತೆಗಳದ್ದೇ ಸಮಸ್ಯೆ. ಕ್ಷೇತ್ರದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸವಾಗಿದ್ದಾರೆ. ಬೆಂಗಳೂರು ಸುತ್ತಲಿನ ಪ್ರದೇಶಗಳಾದ ಮಾಗಡಿ, ಕುಣಿಗಲ್‌, ತುಮಕೂರು, ದೇವನಹಳ್ಳಿ, ನೆಲಮಂಗಲ ಭಾಗದಿಂದ ಬಂದು ನೆಲೆಸಿರುವ ಜನರೇ ಹೆಚ್ಚಾಗಿದ್ದಾರೆ.

ಒಕ್ಕಲಿಗ ಸಮುದಾಯವೇ ಹೆಚ್ಚಾಗಿದ್ದು, ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಮುಸ್ಲಿಂ ಸಮುದಾಯದ ತಲಾ 30 ಸಾವಿರ ಜನಸಂಖ್ಯೆ ಇದೆ. ನೇಕಾರ ಸಮುದಾಯ ಹಾಗೂ ಉತ್ತರ ಕರ್ನಾಟಕದ 35 ಸಾವಿರಕ್ಕೂ ಹೆಚ್ಚು ಜನರೂ ಈ ಕ್ಷೇತ್ರದಲ್ಲಿ ವಾಸವಾಗಿದ್ದಾರೆ. ವೃಷಭಾವತಿ ನಗರ, ಮಾರಪ್ಪನ ಪಾಳ್ಯ ವಾರ್ಡ್‌ನಲ್ಲಿ ಸ್ಲಂ ಪ್ರದೇಶವಿದ್ದು, ಉಳಿದ ಭಾಗದಲ್ಲಿ ದುಡಿಯುವ ವರ್ಗವೇ ಪ್ರಮುಖವಾಗಿದೆ.

2008ಕ್ಕೂ ಮುನ್ನ ಉತ್ತರಹಳ್ಳಿ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ್ದ ಮಹಾಲಕ್ಷ್ಮೀ ಲೇಔಟ್‌, 2008ರಲ್ಲಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ಬದಲಾಯಿತು. ಜೆಡಿಎಸ್‌ನ ಗೋಪಾಲಯ್ಯ ಶಾಸಕರಾಗಿದ್ದು, ಜೆಡಿಎಸ್‌ನ ನಾಲ್ವರು ಕಾರ್ಪೊರೇಟರ್‌ಗಳನ್ನು ಹೊಂದಿದೆ. ಕಾಂಗ್ರೆಸ್‌ ಎರಡು ಮತ್ತು ಬಿಜೆಪಿಯ ಒಬ್ಬರು ಕಾರ್ಪೊರೇಟರ್‌ಗಳೂ ಈ ಕ್ಷೇತ್ರದಲ್ಲಿದ್ದಾರೆ.

ಹಳೆಯ ಪಾರ್ಕ್‌ಗಳನ್ನು ನವೀಕರಣ ಮಾಡಲಾಗಿದ್ದು, ವಾಟರ್‌ ಪೈಪ್‌ಗ್ಳನ್ನು ಸಂಪೂರ್ಣವಾಗಿ ಬದಲಾಯಿಸಿ ಎಲ್ಲ ವಾರ್ಡ್‌ಗಳಿಗೂ ಕಾವೇರಿ ನೀರು ದೊರೆಯುವಂತೆ ಮಾಡಲಾಗಿದೆ. ಅದರ ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನೂ ಸ್ಥಾಪಿಸಲಾಗಿದೆ. ಶಾಸಕರೇ ನೀರಿನ ಕ್ಯಾನ್‌ಗಳನ್ನೂ ವಿತರಿಸಿದ್ದಾರೆ.

ತಗ್ಗು ದಿಣ್ಣೆಗಳಿಂದ ಕೂಡಿದ ಕ್ಷೇತ್ರವಾಗಿದ್ದರಿಂದ ಇಕ್ಕಟ್ಟಾದ ರಸ್ತೆಗಳೇ ಕ್ಷೇತ್ರದ ದೊಡ್ಡ ಸಮಸ್ಯೆ. ಕುರುಬರ ಹಳ್ಳಿ ಮತ್ತು ಜೆ.ಸಿ.ನಗರದ ಪ್ರದೇಶಗಳಲ್ಲಿ ವಾಹನ ಸಂಚಾರವೇ ಕಷ್ಟ ಎನ್ನುವಂತಿದೆ. ಒಡ್ಡರ ಪಾಳ್ಯದಿಂದ ರಿಂಗ್‌ರೋಡ್‌ವರೆಗೆ ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ದೊರೆತಿದ್ದು, ಇನ್ನೂ ಕೆಲಸ ಆರಂಭವಾಗಬೇಕಿದೆ. ಆದರೆ, ಇರುವ ರಸ್ತೆಗಳಿಗೆ ಡಾಂಬರು ಹಾಕಲಾಗಿದ್ದು, ಡ್ರೈನೇಜ್‌ ವ್ಯವಸ್ಥೆ ಸುಧಾರಣೆಗೊಂಡಿದೆ.

ಜೆ.ಸಿ. ನಗರ ಪ್ರದೇಶದಲ್ಲಿ ರಾಜಕಾಲುವೆ ಗೋಡೆ ಒಡೆದಿದ್ದು, ಇಬ್ಬರ ಸಾವಿಗೆ ಕಾರಣವಾಗಿದ್ದನ್ನು ಸರಿಪಡಿಸಿ, ಗೋಡೆ ನಿರ್ಮಿಸಲಾಗಿದೆ. ಕಮಲಾನಗರದಲ್ಲಿ ಹೆರಿಗೆ ಆಸ್ಪತ್ರೆ, ಡಯಾಲಿಸಿಸ್‌ ಕೇಂದ್ರ ಸ್ಥಾಪನೆ, ನಾಗಪುರ ವಾರ್ಡ್‌ನಲ್ಲಿ ಇಂಡೋರ್‌ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ.

ಟಿಕೆಟ್‌ ಪೈಪೋಟಿ: ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಯಾರಿಗೆ ಟಿಕೆಟ್‌ ನೀಡುತ್ತಾರೆ ಎನ್ನುವುದರ ಮೇಲೆ ಈ ಕ್ಷೇತ್ರದ ಚುನಾವಣಾ ಕಣದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಕಾಂಗ್ರೆಸ್‌ನಲ್ಲಿ ಉತ್ತರ ಕರ್ನಾಟಕ ಮೂಲದ ಗಿರೀಶ್‌ ನಾಶಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಜಯಮ್ಮ ಕೇಶವಮೂರ್ತಿ, ಮಂಜುಳಾ ಪುರುಷೋತ್ತಮ್‌ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಹೋಗಿರುವ ನೆ.ಲ. ನರೇಂದ್ರ ಬಾಬು, ಮಾಜಿ ಉಪ ಮೇಯರ್‌ ಹರೀಶ್‌, ಪಾಲಿಕೆಯ ಮಾಜಿ ಸದಸ್ಯ ಎಂ.ನಾಗರಾಜ್‌ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಕ್ಷೇತ್ರದಲ್ಲಿ ಬೆಸ್ಟ್‌ ಏನು?: ಕುಟಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕಾವೇರಿ ನೀರು ಸರಬರಾಜಿಗೆ ದೊಡ್ಡ ಪೈಪ್‌ಗ್ಳ ಅಳವಡಿಕೆ ಮಾಡಲಾಗಿದೆ. ಕ್ಷೇತ್ರದಲ್ಲಿನ ಪಾರ್ಕ್‌ಗಳು ನವೀಕರಣಗೊಂಡಿವೆ. ಬಹುತೇಕ ರಸ್ತೆಗಳ ಅಭಿವೃದ್ಧಿಯಾಗಿದೆ. ಒಳಾಂಗಣ ಕ್ರೀಡಾಂಗಣ ನಿರ್ಮಾಣ ಈ ಬಾರಿಯ ಅಭಿವೃದ್ಧಿ ಕಾರ್ಯಗಳಪೈಕಿ ಪ್ರಮುಖವೆನಿಸಿಕೊಂಡಿದೆ. ಇದರೊಂದಿಗೆ ಕ್ಷೇತ್ರದ ಬಡ ಹಾಗೂ ಮಧ್ಯಮವರ್ಗದ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಹೆರಿಗೆ ಆಸ್ಪತ್ರೆ ಹಾಗೂ ಡಯಾಲಿಸಿಸ್‌ ಕೇಂದ್ರ ಸ್ಥಾಪಿಸಲಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?: ಇಕ್ಕಟ್ಟಾದ ರಸ್ತೆಗಳು ಕ್ಷೇತ್ರದ ಜನರನ್ನು ಬಹುವಾಗಿ ಕಾಡುತ್ತಿವೆ. ಕುರುಬರಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ಕಿರಿದಾದ ರಸ್ತೆಗಳಲ್ಲೇ ದ್ವಿಮುಖ ಸಂಚಾರ ನಡೆಯುತ್ತಿದ್ದು, ಪೀಕ್‌ ಅವರ್‌ಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತದೆ. ಆಟೋ ಕೂಡ ಹೋಗಲು ಸಾಧ್ಯವಾಗದಂತಹ ರಸ್ತೆಗಳಿರುವುದರಿಂದ ವಾಹನ ಸಂಚಾರ ಇಲ್ಲಿ ಕಷ್ಟದ ಕೆಲಸ. ಇದರೊಂದಿಗೆ ಕೆಲವು ಭಾಗಗಳಿಗೆ ಬಸ್‌ ಸಂಪರ್ಕ ಕೂಡ ಇಲ್ಲ. ಶಾಸಕರ ಚಂಚಲ ಮನಸ್ಸು. ಯಾವ ಪಕ್ಷದೊಂದಿಗೆ ಇರುತ್ತಾರೆ ಎನ್ನುವ ಗೊಂದಲವೂ ದೊಡ್ಡ ಸಮಸ್ಯೆ.

ಕ್ಷೇತ್ರ ಮಹಿಮೆ: ಮಹಾಲಕ್ಷ್ಮಿ ಲೇಔಟ್‌ನ ಪ್ರಮುಖ ಆಕರ್ಷಣೆ, ಇಲ್ಲಿನ ಸುಪ್ರಸಿದ್ಧ ಇಸ್ಕಾನ್‌ ದೇವಾಲಯ. ಇದರೊಂದಿಗೆ ಪಂಚಮುಖೀ ಗಣಪ, ಆಂಜನೇಯ ದೇವಾಲಯ, ಶ್ರೀನಿವಾಸ ದೇವಾಲಯ, ಅನಂತಸ್ವಾಮಿ ದೇಗುಲಗಳು ಕ್ಷೇತ್ರವನ್ನು ದೇವಾಲಯಗಳ ಕ್ಷೇತ್ರವನ್ನಾಗಿಸಿವೆ. ಇದರೊಂದಿಗೆ ಕರ್ನಾಟಕದ ಹೆಮ್ಮೆ ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ಇರುವುದು ಕೂಡ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ.

ಹಿಂದಿನ ಫ‌ಲಿತಾಂಶ
-ಗೋಪಾಲಯ್ಯ (ಜೆಡಿಎಸ್‌) 66127
-ನರೇಂದ್ರಬಾಬು (ಕಾಂಗ್ರೆಸ್‌) 50757
-ಎಸ್‌. ಹರೀಶ್‌ (ಬಿಜೆಪಿ) 23545

ಆಕಾಂಕ್ಷಿಗಳು
-ಕಾಂಗ್ರೆಸ್‌- ಗಿರೀಶ್‌ ನಾಶಿ, ಜಯಮ್ಮ ಕೇಶವಮೂರ್ತಿ, ಮಂಜುಳಾ ಪುರುಷೋತ್ತಮ್‌
-ಬಿಜೆಪಿ- ನೆ.ಲ.ನರೇಂದ್ರ ಬಾಬು, ಹರೀಶ್‌, ಎಂ.ನಾಗರಾಜ್‌
-ಜೆಡಿಎಸ್‌- ಗೋಪಾಲಯ್ಯ

ಶಾಸಕರು ಏನನ್ನುತ್ತಾರೆ?
ಇಷ್ಟು ವರ್ಷ ಎಷ್ಟು ಜನ ಶಾಸಕರು ಆಗಿ ಹೋಗಿದ್ದಾರೆ. ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಈಗ ಐದು ವರ್ಷದಲ್ಲಿ ಎಲ್ಲಾ ಪಾರ್ಕ್‌ಗಳನ್ನೂ ಪುನರ್‌ ನಿರ್ಮಾಣ ಮಾಡಲಾಗಿದೆ. ಇಂಡೋರ್‌ ಸ್ಟೇಡಿಯಂ, ಹೆರಿಗೆ ಆಸ್ಪತ್ರೆ, ಡಯಾಲಿಸಿಸ್‌ ಸೆಂಟರ್‌, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಗೊಂಡಿದೆ. ಜನತೆಯ ವಿಶ್ವಾಸ ಗಳಿಸಿದ್ದೇನೆ, ಅದಕ್ಕೆ ಮತ್ತೆ ಆಯ್ಕೆಯಾಗುವ ಆತ್ಮವಿಶ್ವಾಸವಿದೆ.
-ಗೋಪಾಲಯ್ಯ

ಜನ ದನಿ
ಸಣ್ಣ ಪುಟ್ಟ ಸಮಸ್ಯೆ ಇದೆ. ಮೋರಿ ವ್ಯವಸ್ಥೆ ಸರಿಯಾಗಬೇಕಿದೆ. ಪಾರ್ಕ್‌ ಚೆನ್ನಾಗಿ ಮಾಡಿದ್ದಾರೆ. ಸ್ವಿಮ್ಮಿಂಗ್‌ ಫ‌ೂಲ್‌ ಸುಧಾರಣೆ ಆಗಬೇಕು. ಈಗ ಚೈನ್‌ ಸ್ನ್ಯಾಚಿಂಗ್‌ ಕಡಿಮೆಯಾಗಿದೆ.
-ಆನಂದ್‌

ನಮ್ಮ ಏರಿಯಾದಲ್ಲಿ ಬಸ್‌ ವ್ಯವಸ್ಥೆಯೇ ಇಲ್ಲ. ಹಾಪ್‌ಕಾಮ್ಸ್‌, ನಂದಿನಿ ಪಾರ್ಲರ್‌ ಯಾವುದೂ ಇಲ್ಲ. ಜೆ.ಸಿ. ನಗರ ಪ್ರದೇಶದಲ್ಲಿ ಆಟೋಗಳೂ ಹೋಗಲು ರಸ್ತೆ ಇಲ್ಲ. ರಸ್ತೆ ಅಗಲೀಕರಣ ಆಗಬೇಕು.
-ಮೋಹನ್‌

ಜಿಮ್‌, ಯೋಗಾ ಕ್ಲಾಸ್‌, ಹಿರಿಯರಿಗೆ ಮಸಾಜ್‌ ಸೆಂಟರ್‌, ಆಡಿಟೋರಿಯಂ ಎಲ್ಲಾ ಚೆನ್ನಾಗಿ ಮಾಡಿದ್ದಾರೆ. ಮಕ್ಕಳಿಗೆ ಸ್ವಿಮ್ಮಿಂಗ್‌ ಫ‌ೂಲ್‌, ಇಂಡೋರ್‌ ಸ್ಟೇಡಿಯಂ ಇದೆ. ಶಾಸಕರು ಯಾವಾಗ ಬೇಕಾದರೂ ಸಿಗುತ್ತಾರೆ.
-ಕನ್ನಡ ರಾಜು

ನಮಗೆ ಸ್ವಂತ ಮನೆ ಇಲ್ಲ. ಇರೋ ಮನೆಯಲ್ಲೇ ನಮ್ಮ ಬದುಕು. ಪ್ರತಿ ತಿಂಗಳು ಅಕ್ಕಿ ಬರುತ್ತದೆ. ಎಂಎಲ್‌ಎ ಕಾರ್ಪೊರೇಟರ್‌ ಬರ್ತಾರೆ. ಅವರು ನಮ್ಮನೆಯಲ್ಲಿ ನೋಡ್ತಾರೆ. ಗುಡಿಸಲಿನಲ್ಲೇ ಬಟ್ಟೆ ಇಸಿ ಮಾಡಿಕೊಂಡು ಬದುಕುತ್ತಿದ್ದೇವೆ.
-ಸಿದ್ದಗಂಗಮ್ಮ

* ಶಂಕರ ಪಾಗೋಜಿ

ಟಾಪ್ ನ್ಯೂಸ್

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.