![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 4, 2021, 10:27 AM IST
ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಯಲ್ಲಿ ಹೊಸ ಹೊಸ ಬಟ್ಟೆ ಧರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಮಹಿಳೆಯರಿಗಂತೂ ರೇಷ್ಮೆ ಸೀರೆ ಅಚ್ಚುಮೆಚ್ಚಿನ ಉಡುಗೆ. ಉದಯವಾಣಿ ಪತ್ರಿಕೆ ಹಬ್ಬದ ಸಂಭ್ರಮ ಹೆಚ್ಚಿಸಲೆಂದೇ “ರೇಷ್ಮೆ ಜತೆ ದೀಪಾವಳಿ’ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. ರೇಷ್ಮೆ ಸೀರೆ-ಉಡುಗೆಗಳನ್ನು ದೀಪಾವಳಿ ಸಂದರ್ಭ ತೊಟ್ಟು ಸಂಭ್ರಮಿಸುವುದಷ್ಟೇ ಅಲ್ಲ; ಅವುಗಳ ಉತ್ತಮ ಫೋಟೋ ಗಳನ್ನು ಕಳುಹಿಸಿ ಬಹುಮಾನ ವನ್ನೂ ಗೆಲ್ಲಲು ಅವಕಾಶವಿದೆ.
ಕರ್ನಾಟಕದ ಜನಮನದ ಜೀವನಾಡಿ ಉದಯವಾಣಿ ತನ್ನ ಮಹಿಳಾ ಓದುಗರಿಗೆ ಬೆಂಗಳೂರಿನ ಶ್ರೀ ಸಾಯಿ ಜ್ಯುವೆಲ್ಸ್ ಪ್ಯಾಲೇಸ್ ಅವರ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ. ಇದರಲ್ಲಿ “ಉದಯವಾಣಿ’ ಬೆಂಗಳೂರು ಆವೃತ್ತಿಯು ಮಹಿಳೆಯರು ಪಾಲ್ಗೊಳ್ಳಬಹುದು. ಸಾಂಪ್ರದಾಯಿಕ ರೇಷ್ಮೆ ಸೀರೆ ಉಟ್ಟು ದೀಪಾವಳಿ ಆಚರಿಸು ತ್ತಿರುವ ಸಂಭ್ರಮಾ ಚರಣೆಯ ಫೋಟೋಗಳ ಸ್ಪರ್ಧೆ ಇದಾಗಿದೆ. ಕುಟುಂಬ ಸದಸ್ಯೆಯರು, ಗೆಳತಿಯರು- ತಮ್ಮ ಸಂಭ್ರ ಮಾಚರಣೆಯ ಗ್ರೂಪ್ ಫೋಟೋಗಳನ್ನು ರವಾನಿಸಬಹು ದಾಗಿದೆ.
ಇದನ್ನೂ ಓದಿ:- ಬೆಂವಿವಿಯಲ್ಲಿ 30 ಹೊಸ ಕೋರ್ಸ್ ಶುರು
ವಿಶಿಷ್ಟ ಪರಿಕಲ್ಪನೆಯ ಕಲಾತ್ಮಕ ಫೋಟೋಗಳಿಗೆ ಆದ್ಯತೆಯಿದ್ದು, ಸಹಜ ಅಭಿವ್ಯಕ್ತಿಯ ಅಪೇಕ್ಷೆ ಇರುತ್ತದೆ. ಮೊಬೈಲ್ ನಿಂದ ತೆಗೆದ ಚಿತ್ರಗಳಾದರೂ ಉತ್ತಮ ರೆಸಲ್ಯೂಶನ್ ಹೊಂದಿರುವುದು ಕಡ್ಡಾಯ. ಹಳೆಯ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ.
ಬಹುಮಾನ ವಿವರ-
ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ., ತೃತೀಯ 5 ಸಾವಿರ ರೂ. ಮೌಲ್ಯದ ಬಹುಮಾನವಿರಲಿದೆ. 10 ಪ್ರೋತ್ಸಾಹಕರ ಬಹುಮಾನಗಳು, ತಲಾ 2 ಸಾವಿರ ರೂ. ಮೌಲ್ಯದ ಬಹುಮಾನ ನಿಗದಿಪಡಿಸಲಾಗಿದೆ.
ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ ನ.6, 2021.
ಫೋಟೋ ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ: 8861196369
ಇಮೇಲ್: [email protected].
ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆ ಇಲ್ಲದ ಪ್ರವೇಶಗಳನ್ನು ಪರಿಗಣಿಸಲಾಗುವುದಿಲ್ಲ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.