“ಡಿಕೆಶಿ ಮೇಲಿನ ಮುನಿಸು ವೈಯಕ್ತಿಕ’
Team Udayavani, Oct 31, 2018, 6:00 AM IST
ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಮುನಿಸು ವೈಯಕ್ತಿಕವಾಗಿದ್ದು, ಅವರು ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಜಮಖಂಡಿ ಚುನಾವಣಾ ಪ್ರಚಾರಕ್ಕೆ ತೆರಳುವ
ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಹೋಗಿಲ್ಲ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಉತ್ತಮ ವಾತಾವರಣವಿದೆ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವಿನ ಭಿನ್ನಾಭಿಪ್ರಾಯ ತೀರಾ ವೈಯಕ್ತಿಕವಾಗಿದ್ದು, ಈ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನು ಕೂಡ್ಲಿಗಿಗೆ ಹೋಗಿ ಅಲ್ಲಿನ ಭಿನ್ನಾಭಿಪ್ರಾಯವನ್ನು ಬಗೆ ಹರಿಸಿದ್ದೇನೆ ಎಂದರು. ಜಮಖಂಡಿಯಲ್ಲಿ ಬಿಜೆಪಿಯವರು ಗೊಂದಲ ಸೃಷ್ಠಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಬಳ್ಳಾರಿ ಬದಲು
ಜಮಖಂಡಿ ಉಸ್ತುವಾರಿ ಹಾಕಿಸಿಕೊಂಡಿದ್ದೇನೆ. ಶಾಸಕ ಸತೀಶ್ ಜಾರಕಿಹೊಳಿ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಬಳ್ಳಾರಿ ಚುನಾವಣಾ ಪ್ರಚಾರಕ್ಕೆ ತೆರಳುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಕರೆದರೆ ಮಾತ್ರ ಹೋಗುತ್ತೇನೆ ಎಂದರು.
ಬಿಜೆಪಿಗೆ ಹೋಗಲ್ಲ: ನಾನು ಬಿಜೆಪಿಗೆ ಹೋಗುತ್ತೇನೆ ಎನ್ನುವುದು ಸುಳ್ಳು. ಹಿಂದಿನ ಗೊಂದಲಗಳೆಲ್ಲ ಮುಗಿದ ಅಧ್ಯಾಯ. ಪಕ್ಷದ ನಾಯಕರ ಮೇಲೆ ಸಿಟ್ಟು ಇದ್ದಿದ್ದು ನಿಜ. ಆದರೆ, ಮಾಧ್ಯಮಗಳು ಅದನ್ನು ದೊಡ್ಡದಾಗಿ ಬಿಂಬಿಸಿದವು. ಶಾಸಕಾಂಗ ಪಕ್ಷದ ನಾಯಕ
ಸಿದ್ದರಾಮಯ್ಯ ಅವರ ಬಳಿ ಎಲ್ಲವನ್ನೂ ಹೇಳಿದ್ದೇವೆ. ಅವರು ಬಗೆ ಹರಿಸುವ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಬೆಲೆ
ಕೊಟ್ಟು ಸಮಾಧಾನ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ಬಳ್ಳಾರಿಗೆ ವಿ.ಎಸ್. ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ
ಮಾಡಿರುವುದು ವಾಲ್ಮೀಕಿ ಸಮಾಜ ಒಡೆಯಲು ಎಂದು ಶಾಸಕ ಶ್ರೀರಾಮುಲು ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಅವರು ನವೆಂಬರ್ 6 ರಂದು ಫಲಿತಾಂಶ ಗೊತ್ತಾಗುತ್ತದೆ. ಉಗ್ರಪ್ಪ ಸಂಸದರಾಗಬೇಕೆನ್ನುವುದು ನನ್ನ ಕನಸಾಗಿತ್ತು ಅದು ನನಸಾಗುತ್ತದೆ ಎಂದರು. ಸಂಪುಟ ಸಭೆಗೆ ಸತತ ಗೈರಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಪುಟಕ್ಕೆ ಗೈರು ಹಾಜರಾಗುವುದಕ್ಕೂ ದೇವರ
ದರ್ಶನಕ್ಕೆ ಹೋಗುವುದಕ್ಕೂ ಸಂಬಂಧವಿಲ್ಲ. ಕ್ಯಾಬಿನೆಟ್‌ಗೆ ಗೈರಾಗಲು ಅನೇಕ ಕಾರಣಗಳಿವೆ. ಅದನ್ನೆಲ್ಲ ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.