ಬೆಂಗಳೂರು ಒಡೆಯಬೇಡಿ


Team Udayavani, Jun 30, 2018, 10:21 AM IST

blore-1.jpg

ಬೆಂಗಳೂರು: ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಾಗಿಸಬಹುದು ಎಂದು ಬಿಬಿಎಂಪಿ ಪುನಾರಚನೆ ತಜ್ಞರ ಸಮಿತಿ ಶಿಫಾರಸು ಮಾಡಿರುವ ವಿಚಾರ ಶುಕ್ರವಾರ ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿತು. ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ನೇತೃತ್ವದ ಸಮಿತಿ ವರದಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಪಾಲಿಕೆಯನ್ನು ಐದು ಭಾಗಗಳಾಗಿ ವಿಭಜಿಸುವ ಶಿಫಾರಸು ಒಳಗೊಂಡಿರುವ ವರದಿಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಸದಸ್ಯರು ಕಪ್ಪುಪಟ್ಟಿ ಧರಿಸಿ “ಬೇಡ ಬೇಡ ವಿಭಜನೆ ಬೇಡ’ ಎಂದು ಘೋಷಣೆ ಕೂಗಿದರು.

ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಶುಕ್ರವಾರ ಸಭೆ ಪ್ರಾರಂಭವಾದ ಕೂಡಲೇ ಬಿಜೆಪಿ ಸದಸ್ಯರು, ಯಾವುದೇ ಕಾರಣಕ್ಕೂ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆಯುವ ಕೆಲಸಕ್ಕೆ
ಮುಂದಾಗಬಾರದು ಎಂದು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್‌ ಸದಸ್ಯ ಗುಣಶೇಖರ್‌ ಕ್ರಿಯಾಲೋಪ ಎತ್ತಿದರೂ, ಅವರಿಗೆ ಮಾತನಾಡಲು ಬಿಜೆಪಿ ಸದಸ್ಯರು ಅವಕಾಶ ನೀಡಲಿಲ್ಲ.

ಇದರಿಂದ ಕೋಪಗೊಂಡ ಆಡಳಿತ ಪಕ್ಷ ನಾಯಕ ಎಂ.ಶಿವರಾಜ್‌, ಹಿರಿಯ ಸದಸ್ಯರಾದ ಗುಣಶೇಖರ್‌ ಅವರು ಕ್ರಿಯಾಲೋಪ ಎತ್ತಿದ್ದು, ಅವರಿಗೆ ಮಾತನಾಡಲು ಅವಕಾಶ ಕೊಡಿ. ನಂತರ ನಿಮ್ಮ ಅಭಿಪ್ರಾಯ ಹೇಳಿ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಹಿಂಗೆಲ್ಲ ಮಾಡಬೇಡಿ ಎಂದು ಗರಂ ಆದರು. ಇದರಿಂದ ಬಿಜೆಪಿ ಸದಸ್ಯರು ಗುಣಶೇಖರ್‌ ಮಾತನಾಡಲು ಅವಕಾಶ ನೀಡಿದರು. 

ಸಾಧಕ-ಬಾಧಕಗಳ ಚರ್ಚೆ ಅಗತ್ಯ: ವರದಿಯಲ್ಲಿ ಬೆಂಗಳೂರನ್ನು ವಿಭಿಜಿಸುವ ವಿಚಾರವನ್ನು ಪ್ರಸ್ತಾಪಿಸಿಲ್ಲ. ಬದಲಿಗೆ ಮೇಯರ್‌ಗೆ ಕಾರ್ಯನಿರ್ವಹಣಾ ಅಧಿಕಾರ, ಪಾಲಿಕೆಗೆ ಪ್ರತ್ಯೇಕ ಕಾಯ್ದೆ ರಚನೆ, ಐದು ಪಾಲಿಕೆಗಳ ರಚನೆ, ಮೂರು ಹಂತದ ಆಡಳಿತ ವ್ಯವಸ್ಥೆ, ವಾರ್ಡ್‌ ಸಮಿತಿಗಳಿಗೆ ಅಧಿಕಾರ ಸೇರಿದಂತೆ ಹಲವು ವಿಚಾರಗಳಿವೆ. ಆದರೆ, ಮೊದಲು ಪಾಲಿಕೆ ಸಭೆಯಲ್ಲಿ ವರದಿಯನ್ನು ಮಂಡಿಸಬೇಕಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಕೆ. ಗುಣಶೇಖರ್‌ ತಿಳಿಸಿದರು.

ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಹೊರತು ಪಡಿಸಿದರೆ ವರದಿಯ ಕುರಿತು ಸದಸ್ಯರಿಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಪಾಲಿಕೆಯಲ್ಲಿ ವರದಿ ಮಂಡಿಸುವುದರಿಂದ ಸಾಧಕ-ಬಾಧಕಗಳ ಕುರಿತು ಚರ್ಚಿಸಿ ಸಲಹೆ ನೀಡಬಹುದು. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆದು ಪಾಲಿಕೆಯಲ್ಲಿ ವರದಿ ಮಂಡಿಸುವಂತೆ ಕೋರಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಉತ್ತರಿಸಿದ ಮೇಯರ್‌, ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ವರದಿಯನ್ನು ಪಾಲಿಕೆಯಲ್ಲಿ ಮಂಡಿಸುವಂತೆ ಅನುಮತಿ ಕೋರುವಂತೆ ಆಯುಕ್ತರಿಗೆ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಶಿವರಾಜ್‌, ಮೇಯರ್‌ಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಎಲ್ಲ ಸದಸ್ಯರು ಹಿಂದಿನಿಂದಲೂ ಹೇಳುತ್ತಿದ್ದು, ವರದಿಯ ಮೇಲೆ ಚರ್ಚೆ ನಡೆಸಲು ಒಂದು ವಿಶೇಷ ಸಭೆ ಕರೆಯಬೇಕು ಎಂದು ಕೋರಿದರು. ಐದು ಪಾಲಿಕೆಗಳಿಂದ ವಾರ್ಡ್‌ ಎಂಜಿನಿಯರ್‌, ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ ಹೀಗೆ ಸಿಬ್ಬಂದಿ ಸಂಖ್ಯೆ ಹೆಚ್ಚುವುದರಿಂದ, ಪಾಲಿಕೆಗೆ ಆರ್ಥಿಕ ಹೊರೆಯಾಗಲಿದ್ದು, ನಗರದ ಜನರಿಗೆ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಪದ್ಮನಾಭರೆಡ್ಡಿ ಹೇಳಿದರು.

ಜನರಿಂದಲೇ ನೇರವಾಗಿ ಮೇಯರ್‌ ಆಯ್ಕೆ, ಮೇಯರ್‌ ಅವಧಿ ಐದು ವರ್ಷ, ಮೇಯರ್‌ಗೆ ಹೆಚ್ಚಿನ ಅಧಿಕಾರ ನೀಡುವ ಅಂಶಗಳಿಗೆ ಬಿಜೆಪಿ ಬೆಂಬಲವಿದೆ. ಆದರೆ, ಮೊದಲು ವರದಿಯನ್ನು ಪಾಲಿಕೆಯಲ್ಲಿ ಮಂಡಿಸಿ ಸಲಹೆಗಳನ್ನು ಪಡೆಯುವುದು ಸೂಕ್ತ ಎಂದರು. 

ವರದಿಯಲ್ಲಿ 30 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್‌ ರಚನೆ ಮಾಡಬೇಕು ಎಂಬ ಅಂಶವಿದೆ. ಇದರೊಂದಿಗೆ ಚುನಾವಣೆಗೆ ಸ್ಪರ್ಧಿಸುವ ಒಬ್ಬ ಅಭ್ಯರ್ಥಿ ವಾರ್ಡ್‌ ಸಮಿತಿಗಳಿಗೆ ಮೂವರು ಸದಸ್ಯರನ್ನು ಸೂಚಿಸಬಹುದೆಂದು ಉಲ್ಲೇಖೀಸಲಾಗಿದೆ. ವರದಿಯಂತೆ ಒಟ್ಟು ನಗರದಲ್ಲಿ 400 ವಾರ್ಡ್‌ಗಳು ರಚಿಸಬೇಕಾಗಿದ್ದು, ಇದರಿಂದ ಪಾಲಿಕೆಗಳ ನಡುವೆಯೇ ದಾಯಾದಿ ಕಲಹ ಆರಂಭವಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮೇಯರ್‌ ಸಂಪತ್‌ ರಾಜ್‌, ನೀವು ಶಾಸಕರಾಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪದ್ಮನಾಭರೆಡ್ಡಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಪದ್ಮನಾಭರೆಡ್ಡಿ, ಶಾಸಕನಾಗುವ ಅದೃಷ್ಟ ನನ್ನ ಹಣೆಯಲ್ಲಿಲ್ಲ. ಶಾಸಕನಾಗಿದ್ದರೂ ವಿಭಜನೆಗೆ ಒಪ್ಪುತ್ತಿರಲಿಲ್ಲ. ಎಂಎಲ್‌ಎ, ಎಂಪಿಗಳಿಗಿಂತಲೂ ಪಾಲಿಕೆ ಸದ ಸ್ಯರು ಜನರಿಗೆ ಹತ್ತಿರವಾಗಿ ಕೆಲಸ ಮಾಡುವುದರಿಂದ ಆತ್ಮತೃಪ್ತಿ ದೊರೆಯುತ್ತದೆ ಎಂದಾಗ ಎಲ್ಲ ಪಕ್ಷಗಳ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು

ಅಧಿಕಾರ ವಿಕೇಂದ್ರೀಕರಣ ಬಲಪಡಿಸಿ ಪಾಲಿಕೆಯ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಐದು ಪಾಲಿಕೆಗಳ ರಚನೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಪಾಲಿಕೆಯಲ್ಲಿ ಎಂಟು ವಲಯಗಳ ರಚನೆಯಿಂದ ಈಗಾಗಲೇ ಅಧಿಕಾರ ವಿಕೇಂದ್ರೀಕರಣವಾಗಿದ್ದು, ಎಲ್ಲ ವಲಯಗಳಿಗೆ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ವ್ಯವಸ್ಥೆ ಬಲಪಡಿಸಬೇಕಿದೆ ಎಂದರು. ವಿಭಜನೆಯಿಂದ ಉತ್ತಮ ಆಡಳಿತ ಸಾಧ್ಯ ಎಂದು ವರದಿಯಲ್ಲಿ ತಿಳಿಸಿದ್ದು, ಹಾಗಾದರೆ ಈಗ ಉತ್ತಮ ಆಡಳಿತವಿಲ್ಲವೇ? ಕಳೆದ ಮೂರು ವರ್ಷಗಳಿಂದ ನೀವೇ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದು, ನಿಮ್ಮ ಆಡಳಿತ ತೃಪ್ತಿ ತಂದಿಲ್ಲವೆ ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

Deepvali-MNG

Deepavali Dhamakha: ಓದುಗರ ಸಂತೃಪ್ತಿಯಿಂದ ಸಾರ್ಥಕ್ಯದ ಭಾವ: ಡಾ.ಸಂಧ್ಯಾ ಪೈ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು

Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು

Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್‌ ನಿವೃತ ಅಧಿಕಾರಿ

Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್‌ ನಿವೃತ ಅಧಿಕಾರಿ

Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!

Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!

Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ

Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ

Bengaluru: ಟೆಕಿಯ 1 ತಿಂಗಳು ಡಿಜಿಟಲ್‌ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ

Bengaluru: ಟೆಕಿಯ 1 ತಿಂಗಳು ಡಿಜಿಟಲ್‌ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Deepvali-MNG

Deepavali Dhamakha: ಓದುಗರ ಸಂತೃಪ್ತಿಯಿಂದ ಸಾರ್ಥಕ್ಯದ ಭಾವ: ಡಾ.ಸಂಧ್ಯಾ ಪೈ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.