ನಗರದ ಜನರಿಗೆ ಬೇಡ ನೀರಿನ ಚಿಂತೆ
Team Udayavani, Feb 28, 2017, 12:13 PM IST
ಬೆಂಗಳೂರು: ಸದ್ಯ ಈಗ ಬೆಂಗಳೂರಿಗೆ ಹೇಗೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆಯೋ ಹಾಗೆಯೇ ಏಪ್ರಿಲ್ ಅಂತ್ಯ ದವರೆಗೂ ಪೂರೈಕೆ ಮಾಡಲಾಗುತ್ತದೆ. ಅಂದರೆ, ಈಗಿನ ಬೇಡಿಕೆಯಂತೆಯೇ ನಿತ್ಯ 1,350 ದಶಲಕ್ಷ ಲೀಟರ್ ಕಾವೇರಿ ನೀರು ಪೂರೈಕೆಗೆ ಜಲಮಂಡಳಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ. ಏಪ್ರಿಲ್ ನಂತರ ಏನಾದರೂ, ಪರಿಸ್ಥಿತಿ ವಿಷಮವಾದರೆ, ಅಗತ್ಯ ಸಿದ್ಧತೆಯನ್ನು ಈಗಾಗಲೇ ಮಾಡಿ ಕೊಳ್ಳಲಾಗಿದೆ. ಆದ್ದರಿಂದ ಜನರೇನೂ ಆತಂಕಪಡಬೇಕಿಲ್ಲ ಎಂದು ಬೆಂಗಳೂರು ಜಲಮಂಡಳಿ ಅಭಯ ನೀಡಿದೆ.
ಬೇಸಿಗೆಯಲ್ಲಿ ಪರಿಸ್ಥಿತಿ ನಿರ್ವಹಣೆಗೆ ನಗರಕ್ಕೆ ಅಗತ್ಯವಾದಷ್ಟು ನೀರು ಶೇಖರಿ ಸಿಟ್ಟುಕೊಳ್ಳುವಂತೆ ಈ ಹಿಂದೆಯೇ ಜಲಮಂಡಳಿಯು ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಿತ್ತು. ಅದರಂತೆ ಜಲಾಶ ಯದಲ್ಲಿನ ನೀರಿನ ಸಂಗ್ರಹದಿಂದ ಮೇ ಮಧ್ಯದವರೆಗೆ ನೀರು ಪೂರೈಸಬಹುದು ಎಂದು ನಿಗಮ ತಿಳಿಸಿದೆ. ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರದಂತೆ ಅಗತ್ಯ ವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.
ಸದ್ಯ ನಗರಕ್ಕೆ ನಿತ್ಯ 1,350 ದಶಲಕ್ಷ ಲೀಟರ್ ಕಾವೇರಿ ನೀರು ಪೂರೈಕೆಯಾಗು ತ್ತಿದೆ. ಜನತೆಗೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಲಾಶಯಗಳಲ್ಲಿನ ಸಂಗ್ರಹದಿಂದ ಮೇ ಮಧ್ಯ ಭಾಗದವರೆಗೆ ನೀರು ಪೂರೈಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಮೇ ತಿಂಗಳವರೆಗೆ ಬಹುತೇಕ ಇದೇ ಪ್ರಮಾಣದಲ್ಲಿ ನೀರು ಪೂರೈಕೆಯಾಗಲಿದೆ ಎಂದು ಜಲಮಂಡಳಿ ಮುಖ್ಯ ಎಂಜಿನಿ ಯರ್ (ನಿರ್ವಹಣೆ) ಎಚ್.ಎಂ.ರವೀಂದ್ರ “ಉದಯವಾಣಿ’ಗೆ ತಿಳಿಸಿದರು.
ಒಂದಿಷ್ಟು ಮುನ್ನೆಚ್ಚರಿಕೆ ಕ್ರಮ ಕೈ ಗೊಂಡರೆ ಮೇ 15ರವರೆಗೆ ಕಾವೇರಿ ನೀರನ್ನು ಇದೇ ಪ್ರಮಾಣದಲ್ಲಿ ಬಳಸಲು ಅವಕಾಶವಿದೆ. ನಂತರ ತುರ್ತು ಅಗತ್ಯ ಬಿದ್ದರೆ ಕೃಷ್ಣರಾಜ ಸಾಗರ ಜಲಾಶಯದ ಡೆಡ್ ಸ್ಟೋರೇಜ್ ಬಳಕೆ ಬಗ್ಗೆಯೂ ಚರ್ಚೆ ನಡೆದಿದ್ದು, ಹಿರಿಯ ಅಧಿಕಾರಿಗಳು ಸಕಾಲದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿ ದ್ದಾರೆ ಎಂದು ಹೇಳಿದರು.
ಕೊಳವೆ ಬಾವಿಗಳ ಸಮರ್ಪಕ ಬಳಕೆ: ಕಾವೇರಿ ನೀರು ಪೂರೈಕೆ ಜತೆಗೆ ಇತರೆ ನೀರಿನ ಮೂಲಗಳನ್ನು ಪರಿಣಾಮವಾಗಿ ಬಳಸಿಕೊಂಡು ಬೇಸಿಗೆಯಲ್ಲಿ ನೀರಿನ ಅಭಾವ ತಡೆಗೆ ಪರ್ಯಾಯ ವ್ಯವಸ್ಥೆ ಕಲ್ಪಿ ಸಲಾಗುತ್ತಿದೆ. ನಗರದಲ್ಲಿ ಜಲಮಂಡಳಿಯ 7000 ಕೊಳವೆಬಾವಿಗಳಿದ್ದು, ಇದರಲ್ಲಿ 6994 ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆ. ಅವುಗಳನ್ನೂ ನೀರು ಪೂರೈಕೆಗೆ ಬಳಸಿ ಕೊಳ್ಳಲಾಗುವುದು. ಅಗತ್ಯವಿರುವ ಕಡೆಗೆ ತುರ್ತಾಗಿ ಕೊಳವೆ ಬಾವಿ ಕೊರೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಖಾಸಗಿ ಟ್ಯಾಂಕರ್‌ಗಳು ಸುಪರ್ದಿಗೆ?: ಜಲಮಂಡಳಿಯ ಬಳಿ 68 ಟ್ಯಾಂಕರ್‌ಗಳಿವೆ. ನೀರಿಗೆ ದಿಢೀರ್ ಕೊರತೆ ತಲೆ ದೋರಿದರೆ ಆ ಪ್ರದೇಶಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುವುದು. ಬರ ಘೋಷಣೆ ಹಿನ್ನೆಲೆಯಲ್ಲಿ ಏಪ್ರಿಲ್‌ಗೆ 80 ಹಾಗೂ ಮೇ ತಿಂಗಳಲ್ಲಿ 150 ಖಾಸಗಿ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ನೀಡುವಂತೆ ಈಗಾಗಲೇ ಹಿರಿಯ ಅಧಿಕಾರಿಗಳು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಮಸ್ಯೆ ತಲೆ ದೋರಿದ ಪ್ರದೇಶಗಳಿಗೆ ಆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು ಎಂದು ಹೇಳಿದರು.
ನಗರದಲ್ಲಿ 2000ಕ್ಕೂ ಹೆಚ್ಚು ಮಿನಿ ನೀರಿನ ಟ್ಯಾಂಕ್‌ಗಳಿದ್ದು, ಬಹಳಷ್ಟು ಕಡೆ ಅವುಗಳನ್ನು ವೈಯಕ್ತಿಕವಾಗಿ ಬಳಸಲಾಗುತ್ತಿದೆ. ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗು ವುದು. ಜತೆಗೆ ಬಿಬಿಎಂಪಿ ವತಿಯಿಂದ ಹಾಗೂ ಹಳೆಯ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿದ್ದಾಗ ಕೊರೆದ ಕೊಳವೆ ಬಾವಿಗಳಿದ್ದು, ಅವುಗಳಿಂದಲೂ ಜನ ನೀರು ಬಳಸಲಿದ್ದಾರೆ ಎಂದರು.
ಒಟ್ಟಾರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಗರದ ಜನತೆಯನ್ನು ಕಾಡದಂತೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ತುರ್ತು ಸಂದರ್ಭ ಹೊರತುಪಡಿಸಿ ಏಪ್ರಿಲ್ ಅಂತ್ಯದವರೆಗೆ ಸರಿಸುಮಾರು ಇದೇ ಪ್ರಮಾಣದಲ್ಲಿ ನೀರು ಪೂರೈಕೆಯಾಗಲಿದೆ. ನಂತರವೂ ಸಾಧ್ಯ ವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಸಮಸ್ಯೆ ಉಂಟಾಗದಂತೆ ತಡೆಯಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರಿಗೆ ಈಗ ನಿತ್ಯ 1,350 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿನ ಸಂಗ್ರಹದಿಂದ ಮೇ ಮಧ್ಯ ಭಾಗದವರೆಗೆ ನಗರಕ್ಕೆ ನೀರು ಪೂರೈಸಬಹುದು ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ. ಹಾಗಾಗಿ ಮೇ ತಿಂಗಳವರೆಗೆ ಬಹುತೇಕ ಎಂದಿನಂತೇ ನೀರು ಪೂರೈಕೆಯಾಗಲಿದೆ
-ಎಚ್.ಎಂ.ರವೀಂದ್ರ, ಜಲಮಂಡಳಿ ಮುಖ್ಯ ಎಂಜಿನಿಯರ್ (ನಿರ್ವಹಣೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.