ಸಿಡಿಲಿನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ
Team Udayavani, Jul 16, 2017, 11:22 AM IST
ಬೆಂಗಳೂರು: ಮಳೆಗಾಲದಲ್ಲಿ ರೈತರು ಮತ್ತು ಸಾರ್ವಜನಿಕರು ಸಿಡಿಲಿನಿಂದ ಸಾವೀಗೀಡಾಗುವುದನ್ನು ತಪ್ಪಿಸಲು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಸಲಹೆಗಳನ್ನು ನೀಡಿದೆ.
ಗುಡುಗು ಮಿಂಚು ಬರುವುದು ಗೊತ್ತಾದರೆ, ಬಯಲಿನಲ್ಲಿದ್ದವರು ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ಮರಗಳಿದ್ದರೆ, ಅವುಗಳಿಂದಲೂ ದೂರ ನಿಲ್ಲಬೇಕು. ಸಿಡಿಲು ಮತ್ತು ಗುಡುಗು ಹಸಿ ವಸ್ತುಗಳಿಗೆ ಹೆಚ್ಚು ಆಕರ್ಷಿತಗೊಳ್ಳುತ್ತವೆ. ಹೀಗಾಗಿ ಮರಗಳ ಕೆಳಗೆ ನಿಲ್ಲುವುದು ಸುರಕ್ಷಿತವಲ್ಲ.
ರೈತರು ಕುರಿ ಮಂದೆ ಅಥವಾ ದನಗಳ ಮಧ್ಯ ಇದ್ದರೆ, ಅವುಗಳ ಸಂದಿಯಲ್ಲಿ ಕುಳಿತುಕೊಳ್ಳಬೇಕು. ಎದ್ದು ನಿಂತರೆ ಎತ್ತರ ಇರುವ ಮನುಷ್ಯನಿಗೆ ಮೊದಲು ಸಿಡಿಲು ಬಡಿಯುತ್ತದೆ. ವಿದ್ಯುತ್ ಕಂಬ, ಮೊಬೈಲ್ ಟವರ್, ಟ್ರಾನ್ಸ್‌ಫಾರ್ಮರ್‌ಗಳಿಂದ ದೂರ ಇರಬೇಕು.
ಮನೆಯ ಕಿಟಕಿ ಪಕ್ಕದಲ್ಲಿ ನಿಲ್ಲುವುದರ ಬದಲು ಮನೆಯ ಮಧ್ಯದಲ್ಲಿ ಇರಬೇಕು. ಮೊಬೈಲ್ ಫೋನ್ ಮಾಡಬಾರದು. ಕಾರು ಚಲಾಯಿಸುತ್ತಿದ್ದರೆ, ಗ್ಲಾಸ್ ಹಾಕಿಕೊಳ್ಳಬೇಕು. ಕಾರಿಗೆ ಒರಗಿ ಕೂಡುವ ಬದಲು ಮಧ್ಯದಲ್ಲಿ ಕೂಡಬೇಕು ಎಂದು ಇಲಾಖೆ ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.