ನೀಟ್ ಕಟ್ ಆಫ್ ಮಾರ್ಕ್ಸ್ ಬಳಿಕ ವೈದ್ಯ ಸೀಟು
Team Udayavani, Jun 26, 2017, 3:45 AM IST
ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟಿಗಾಗಿ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ(ನೀಟ್) ಬರೆದ ಅಭ್ಯರ್ಥಿಗಳಲ್ಲಿ ಫಲಿತಾಂಶದ ನಂತರ ಸೃಷ್ಠಿಯಾಗಿರುವ ಹಲವು ಪ್ರಶ್ನೆಗೆ ವಾರದೊಳಗೆ ಉತ್ತರ ಸಿಗಲಿದೆ.
ಕೆಲವರಿಗೆ ಸಾವಿರದ ಒಳಗೆ, ಇನ್ನು ಕೆಲವರಿಗೆ ಹತ್ತು ಸಾವಿರದ ಒಳಗೆ ಮತ್ತೇ ಕೆಲವರಿಗೆ ಲಕ್ಷ, ಎರಡು-ಮೂರು ಲಕ್ಷ ಆಸು-ಪಾಸು ನೀಟ್ ರ್‍ಯಾಂಕ್ ಬಂದಿರಬಹುದು. ಆದರೆ, ನೀಟ್ ತೇರ್ಗಡೆ ಹೊಂದಿ ರ್‍ಯಾಂಕ್ ಪಡೆದ ಬಹುತೇಕ ವಿದ್ಯಾರ್ಥಿಗಳಲ್ಲಿ ತಮಗೆ ಸರಕಾರಿ ಕೋಟಾದಡಿ ಪ್ರವೇಶ ಸಿಗುತ್ತದೆಯೋ ,ಇಲ್ಲವೋ..? ಸೀಟು ಪಡೆಯುವುದು ಹೇಗೆ? ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಇದಕ್ಕೆ ಸೂಕ್ತ ಉತ್ತರ ಜೂನ್ 28 ಅಥವಾ 29ರಂದು ಸಿಗಲಿದೆ.
ನೀಟ್ ಪರೀಕ್ಷೆ ನಡೆಸಿರುವ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್) ವೈದ್ಯಕೀಯ ಸೀಟು ಭರ್ತಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಿಗೂ ಕಟ್ ಆಫ್ ಮಾರ್ಕ್ಸ್ ನೀಡಲಿದೆ. ರಾಜ್ಯಕ್ಕೆ ಸಿಗುವ ಕಟ್‌ಆಫ್ ಮಾರ್ಕ್ಸ್ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಬರಲಿದೆ. ನಂತರ ಕೆಇಎ ಅದನ್ನು ಪ್ರಕಟಿಸಲಿದೆ.
ಸಿಬಿಎಸ್‌ಇ ನೀಡುವ ಕಟ್‌ಆಫ್ ಮಾರ್ಕ್ಸ್ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ, ಸೀಟು ಹಂಚಿಕೆ ಇತ್ಯಾದಿ ಕೆಇಎ ಮೂಲಕ ನಡೆಯಲಿದೆ. ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೀಗೆ ವರ್ಗವಾರು ವಿಂಗಡನೆ ಮಾಡಲಾಗುತ್ತದೆ. ಸರ್ಕಾರಿ ಕೋಟಾದ ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟು ಶೀಘ್ರವೇ ಸರ್ಕಾರ ಪ್ರಕಟಿಸಲಿದೆ. ಆದರೆ, ಖಾಸಗಿ ವಿಶ್ವವಿದ್ಯಾಲಯ, ಡೀಮ್ಡ್ ವಿಶ್ವವಿದ್ಯಾಲಯದ ಹಾಗೂ ಖಾಸಗಿ ಕಾಲೇಜಿನ ವೈದ್ಯಕೀಯ ಸೀಟಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ನೀಟ್‌ನಲ್ಲಿ ಉತ್ತಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸುಲಭವಾಗಿ ಸಿಗುತ್ತದೆ. ಕಡಿಮೆ ರ್‍ಯಾಂಕ್ ಪಡೆದ ಅಭ್ಯರ್ಥಿಗಳು ಸೀಟು ಪಡೆಯಲು ಸ್ವಲ್ಪ ಒದ್ದಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಅರ್ಹತಾ ಪರೀಕ್ಷೆ ಹೊರತುಡಿಸಿ, ವೈದ್ಯಕೀಯ ಕೋರ್ಸ್‌ಗಳ ಶುಲ್ಕನಿಗದಿ, ಸೀಟು ಹಂಚಿಕೆ, ಕಾಲೇಜು ಪ್ರವೇಶ ಹಾಗೂ ದಾಖಲೆ ಪರಿಶೀಲನೆ ಇತ್ಯಾದಿ ಎಲ್ಲಾ ರಾಜ್ಯ ಸರ್ಕಾರದ ಮುಖೇನ ನಡೆಯಲಿದೆ.
ದಾಖಲೆ ಪರಿಶೀಲನೆ:
ಸಿಇಟಿ ಮತ್ತು ನೀಟ್ ಬರೆದಿರುವ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಯ ಸಮಸ್ಯೆ ಇಲ್ಲ. ಸಿಇಟಿ-2017ರ ರ್‍ಯಾಂಕ್ ಆಧಾರದಲ್ಲಿ ಈಗಾಗಲೇ ಕೆಇಎ ದಾಖಲೆ ಪರಿಶೀಲನೆ ನಡೆಸಿದೆ. ನೀಟ್ ಬರೆದು, ಸಿಇಟಿ ಬರೆಯದೇ ಇರುವ ಅಭ್ಯರ್ಥಿಗಳಿಗೆ ಕೆಇಎ ವೆಬ್‌ಸೈಟ್ ಜಠಿಠಿಟ://kಛಿಚ.kಚr.nಜಿc.ಜಿn ನಲ್ಲಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಸಿಬಿಎಸ್‌ಇ ಕಟ್‌ಆಫ್ ಮಾರ್ಕ್ಸ್ ಹಂಚಿಕೆ ಮಾಡಿದ ನಂತರ ನೋಂದಾಯಿತ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ. ಸಂಬಂಧಪಟ್ಟ ಕೇಂದ್ರದಲ್ಲಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು. ನೀಟ್ ಮಾತ್ರ ಬರೆದಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೆಇಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸೀಟು ಹಂಚಿಕೆ ಹೇಗೆ?
ನೀಟ್ ರ್‍ಯಾಂಕ್ ಆಧಾರದಲ್ಲಿ ಸಿಬಿಎಸ್‌ಇ ಎಲ್ಲಾ ರಾಜ್ಯಕ್ಕೂ ಕಟ್‌ಆಫ್ ಮಾರ್ಕ್ಸ್ ನೀಡಲಿದೆ. ಈ ಆಧಾರದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಅವರ ರ್‍ಯಾಂಕ್ ಆಧಾರದಲ್ಲಿ ಸೀಟು ಪಡೆಯಲು ಬೇಕಾದ ಆಯ್ಕೆ ನೀಡಲಿದೆ. ಸಿಬಿಎಸ್‌ಇಯಿಂದ 350 ಅಥವಾ 400 ಕಟ್ ಆಫ್ ಮಾರ್ಕ್ಸ್ ನೀಡಿದರೆ, ಈ ಮಾರ್ಕ್ಸ್ ಆಧಾರದಲ್ಲಿ ಅಧಿಕ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮೊದಲು ಸೀಟಿ ಹಂಚಿಕೆ ನಡೆಯಲಿದೆ. ಇದರಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿನಾಯ್ತಿ ಇರುತ್ತದೆ. ಉಳಿದಂತೆ ಈ ಹಿಂದೆ ನಡೆಯುತ್ತಿದ್ದ ಸೀಟು ಹಂಚಿಕೆ ಪ್ರಕ್ರಿಯೆ ಮುಂದುವರಿಯಲಿದೆ.
ಅಧಿಕಾರಿಗಳ ಸಭೆ:
ವೈದ್ಯಕೀಯ ಸೀಟು ಭರ್ತಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿದ್ದಾರೆ. ನೀಟ್ ತೇರ್ಗಡೆಯಾದ ವಿದ್ಯಾರ್ಥಿಗಳ ಸೀಟು ಹಂಚಿಕೆ, ಕಟ್ ಆಫ್ ಮಾರ್ಕ್ಸ್ ಹಾಗೂ ರಾಜ್ಯಕ್ಕೆ ನೀಟ್‌ಕಟ್ ಆಫ್ ಅಂಕ ನೀಡುವ ಕುರಿತು ಸಿಬಿಎಸ್‌ಇ ಬೋರ್ಡ್‌ಗೆ ಸಲ್ಲಿಸಬೇಕಾದ ಮನವಿಯ ಕುರಿತು ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಿಬಿಎಸ್‌ಇಯಿಂದ ನೀಟ್ ಕಟ್‌ಆಫ್ ಮಾರ್ಕ್ಸ್ ಬಂದ ನಂತರವೇ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಎಷ್ಟು ರ್‍ಯಾಂಕ್ ಮಿತಿಯಲ್ಲಿ ಸೀಟು ಹಂಚಿಕೆ ಆಗಲಿದೆ ಎಂಬಿತ್ಯಾದಿಯನ್ನು ಈಗ ಹೇಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಅಥವಾ ಪಾಲಕರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
– ಗಂಗಾಧರಯ್ಯ, ಕೆಇಎ ಆಡಳಿತಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.