ವೈದ್ಯರ ಬೆದರಿಸಿ ಹಣ ಕೇಳಿದಪತ್ರಕರ್ತ ಪೊಲೀಸ್ ಕಸ್ಟಡಿಗೆ
Team Udayavani, Mar 21, 2019, 7:07 AM IST
ಬೆಂಗಳೂರು: ಸುದ್ದಿ ವಾಹಿನಿಯಲ್ಲಿ “ನಿಮ್ಮ ಖಾಸಗಿ ವಿಡಿಯೋ ಪ್ರಸಾರ ಮಾಡುತ್ತೇನೆ’ ಎಂದು ಪ್ರಖ್ಯಾತ ವೈದ್ಯರೊಬ್ಬರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಪ್ರಕರಣದ ಆರೋಪಿ ಪತ್ರಕರ್ತ ಹೇಮಂತ್ ಕಶ್ಯಪ್‌ನನ್ನು ನ್ಯಾಯಾಲಯವು ಹೆಚ್ಚಿನ ತನಿಖೆ ಸಲುವಾಗಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪದ್ಮಶ್ರೀ ಪುರಸ್ಕೃತ ವೈದ್ಯ ಡಾ.ರಮಣರಾವ್ ಬಿ. ಅವರು ನೀಡಿದ ದೂರಿನ ಅನ್ವಯ ಮಂಗಳವಾರ ಸದಾಶಿವನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದ ಆರೋಪಿ ಹೇಮಂತ್ ಕಶ್ಯಪ್‌ನನ್ನು ಬುಧವಾರ 7ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣ ತನಿಖಾ ಹಂತದಲ್ಲಿದ್ದು, ಕೇಸ್‌ಗೆ ಸಂಬಂಧಿಸಿದಂತೆ ಹಲವು ಮಾಹಿತಿ ಪಡೆಯುವ ಸಂಬಂಧ ಆರೋಪಿಯನ್ನು
ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಬೇಕಿದೆ. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾವಾಗಿರುವ
ವಿಡಿಯೋವನ್ನು ವಶಪಡಿಸಿಕೊಳ್ಳಬೇಕಿದೆ. ಹೀಗಾಗಿ ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿ ಹೇಮಂತ್‌ನನ್ನು ನಾಲ್ಕು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿ ಆದೇಶಿಸಿತು.
ಮತ್ತೂಬ್ಬ ಆರೋಪಿ ಬಂಧನಕ್ಕೆ ಬಲೆ: ಪ್ರಕರಣದ ಮತ್ತೂಬ್ಬ ಆರೋಪಿ, ಖಾಸಗಿ ಸುದ್ದಿವಾಹಿನಿಯ ವರದಿಗಾರ ಮಂಜುನಾಥ್ ಹಾಗೂ ಆತನ ಜತೆಗಿದ್ದ ಕ್ಯಾಮೆರಾಮನ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕ್ರಮವಹಿಸಲಾಗಿದ್ದು, ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು
ತಿಳಿಸಿದರು.
ವಿಡಿಯೋ ಹೆಸರಲ್ಲಿ 50 ಲಕ್ಷ ಡಿಮ್ಯಾಂಡ್: ಮಾರ್ಚ್ 5ರಂದು ದೂರುದಾರ ಡಾ.ರಮಣ್ ರಾವ್ ಅವರಿಗೆ ಕರೆ ಮಾಡಿದ
ಆರೋಪಿ ಹೇಮಂತ್ ಕಶ್ಯಪ್, “ನಿಮ್ಮ ಬಳಿ ತುರ್ತಾಗಿ ಮಾತನಾಡಬೇಕು’ ಎಂದಿದ್ದಾನೆ. ಹೀಗಾಗಿ ರಮಣ್‌ರಾವ್ ತಮ್ಮ ಕ್ಲಿನಿಕ್‌ಗೆ ಬರುವಂತೆ ಸೂಚಿಸಿದ್ದಾರೆ.
ಅದೇ ದಿನ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕ್ಲಿನಿಕ್‌ಗೆ ಹೋದ ಹೇಮಂತ್, “ನಾನು ಪ್ರತಿಷ್ಠಿತ ಸುದ್ದಿವಾಹಿನಿಯ ವರದಿಗಾರ’ ಎಂದು ಪರಿಚಯಿಸಿಕೊಂಡಿದ್ದ. “ನಿಮಗೆ ಸಂಬಂಧಿಸಿದ ಸೆಕ್ಸ್ ವಿಡಿಯೋ ಒಂದು ನನ್ನ ಬಳಿ ಇದೆ. ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡಿದರೆ ನಿಮ್ಮ ಗೌರವ ಹಾಳಾಗುತ್ತದೆ. ಆ ವಿಡಿಯೋ ಈಗಾಗಲೇ ಐದು ಮಂದಿ ವರದಿಗಾರರ ಬಳಿಯಿದೆ. ವಿಡಿಯೋ ಪ್ರಸಾರ ಮಾಡದಿರಲು
ತಲಾ 10 ಲಕ್ಷ ರೂ. ನೀಡಬೇಕು. ಕೊಡದಿದ್ದರೆ ಎಲ್ಲ ವಾಹಿನಿಗಳಲ್ಲಿ ವಿಡಿಯೋ ಪ್ರಸಾರ ಮಾಡುತ್ತೇವೆ’ ಎಂದು ಬೆದರಿಸಿದ್ದಾನೆ.
ಇದಾದ ಬಳಿಕ ಎರಡು ಮೂರು ಬಾರಿ ಕ್ಲಿನಿಕ್ ಗೆ ಹೋದ ಹೇಮಂತ್, ಎಲ್ಲ ವರದಿಗಾರರ ಬಳಿ ಮಾತನಾಡಿದ್ದೇನೆ ಕಡೆಯದಾಗಿ ತಲಾ 1 ಲಕ್ಷ ರೂ.ಗಳಂತೆ ಐದು ಲಕ್ಷ ರೂ. ನೀಡಿ ಎಂದು ಹೇಳಿದ್ದು, ವೈದ್ಯರಿಂದ ಹಂತ ಹಂತವಾಗಿ 5 ಲಕ್ಷ ರೂ. ಪಡೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ಮಂಗಳವಾರ ಸಂಜೆ 4.30ರ ಸುಮಾರಿಗೆ ಮತ್ತೂಂದು ಖಾಸಗಿ ಸುದ್ದಿವಾಹಿನಿಯ ವರದಿಗಾರ ಮಂಜುನಾಥ್ ಹಾಗೂ ಕ್ಯಾಮೆರಾಮನ್, ವೈದ್ಯರ ಕ್ಲಿನಿಕ್‌ಗೆ ತೆರಳಿದ್ದಾರೆ. ಈ ವೇಳೆ ಮಾತು ಆರಂಭಿಸಿದ ಮಂಜುನಾಥ್, “ನಿಮ್ಮ ಕೆಟ್ಟ ವಿಡಿಯೋ ಸಿಕ್ಕಿದೆ. ನಾಳೆ ವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ. ನಿಮ್ಮ ಗೌರವ ಹಾಳಾಗುತ್ತದೆ’ ಎಂದು ವೈದ್ಯರಿಗೆ ಹೆದರಿಸಿದ್ದಾನೆ. ಈ ವೇಳೆ ವೈದ್ಯರು, ನೀವು ಹೇಳಿದಂತೆ ಏನೂ ನಡೆದಿಲ್ಲ ಎಂದು ತರಾಟೆ ತೆಗೆದುಕೊಂಡ ಬಳಿಕ ಮಂಜುನಾಥ್ ಅಲ್ಲಿಂದ ತೆರಳಿದ್ದ.
ಕಡೆಗೆ ವೈದ್ಯರು ಹೇಮಂತ್‌ಗೆ ಕರೆ ಮಾಡಿ ಮತ್ತೂಬ್ಬ ವರದಿಗಾರ ಬಂದು ಹಣ ಕೇಳುತ್ತಿದ್ದಾನೆ. ನೀನು ಬಾ ಉಳಿದ ಹಣ ನೀಡುತ್ತೇನೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಜತೆಗೆ ಸದಾಶಿವನಗರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಹಣ ಪಡೆಯುವ ಆಸೆಯಿಂದ ಕ್ಲಿನಿಕ್‌ಗೆ ಬಂದ ಹೇಮಂತ್‌ನನ್ನು ಮಪ್ತಿಯಲ್ಲಿದ್ದ ಪೊಲೀಸರು ಬಂಧಿಸಿದರು ಎಂದು ಹಿರಿಯ ಅಧಿಕಾರಿ ವಿವರಿಸಿದರು.
ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿ ಹೇಮಂತ್ ಕಶ್ಯಪ್‌ನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ವೈದ್ಯರಿಗೆ ಸಂಬಂಧಿಸಿದ ವಿಡಿಯೋ ಸತ್ಯಾಸ ತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿ ಮಂಜುನಾಥ್ ಬಂಧಿಸಿದರೆ ವಿಡಿಯೋ ಬಗ್ಗೆ ಮಾಹಿತಿ ಸಿಗಲಿದೆ.
● ಡಿ.ದೇವರಾಜ್, ಕೇಂದ್ರವಿಭಾಗದ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.