Copyright: ಸಾಕ್ಷ್ಯಚಿತ್ರ ಕಾಪಿರೈಟ್ ಉಲ್ಲಂಘನೆ; ನಿರ್ದೇಶಕ ಸೇರಿ ಮೂವರ ಮೇಲೆ ಕೇಸು
Team Udayavani, Nov 11, 2023, 5:04 PM IST
ಬೆಂಗಳೂರು: ಕಾಪಿರೈಟ್ಸ್ ಉಲ್ಲಂಘಿಸಿ ಎನ್‌ಜಿಒ ಸಂಸ್ಥೆಗೆ ಆರ್ಥಿಕ ನಷ್ಟವುಂಟು ಮಾಡಿದ ಆರೋಪದಡಿ ಸಿನಿಮಾ ನಿರ್ದೇಶಕ ಜೇಕಬ್ ವರ್ಗೀಸ್ ಸೇರಿ ಮೂವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಸ್ಕೂಲ್ ನ್ಪೋರ್ಟ್ಸ್ ಫೌಂಡೇಷನ್ ಪ್ರತಿನಿಧಿ ಇಲ್ವಿಸ್ ಜೋಸೆಫ್ ನೀಡಿದ ದೂರಿನ ಸಂಬಂಧ ನ್ಯಾಯಾಲಯದ ಸೂಚನೆ ಮೇರೆಗೆ ನಿರ್ದೇಶಕ ಜೇಕಬ್ ವರ್ಗೀಸ್, ದಿನೇಶ್ ರಾಜಕುಮಾರ್ ಹಾಗೂ ಮ್ಯಾಥ್ಯೂ ವರ್ಗೀಸ್ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?: ವಿಕಲಚೇತನ ಮಕ್ಕಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಕೆಲಸ ಮಾಡುತ್ತಿರುವ ಸ್ಕೂಲ್ ನ್ಪೋರ್ಟ್ಸ್ ಫೌಂಡೇಷನ್ ಎಂಬ ಎನ್‌ಜಿಒ ಸಂಸ್ಥೆ “ಚಾಂಪಿಯನ್ ಇನ್ ಮಿ’ ಹೆಸರಿನಲ್ಲಿ ಎಚ್‌ಐವಿ ಪೀಡಿತ ಮಕ್ಕಳಿಗೆ ಮ್ಯಾರಥಾನ್‌ನಲ್ಲಿ ಭಾಗವಹಿಸುವ ತರಬೇತಿ ನೀಡುತ್ತಿತ್ತು. ಅದರ ಭಾಗವಾಗಿ ಜಗತ್ತಿನ ವಿವಿಧೆಡೆ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಇಬ್ಬರು ಕ್ರೀಡಾಪಟುಗಳ ಜೀವನಕ್ರಮದ ಕುರಿತು ಸಾಕ್ಷ್ಯಚಿತ್ರ ಚಿತ್ರೀಕರಣ ಮಾಡುವ ಜವಾಬ್ದಾರಿಯನ್ನು ನಿರ್ದೇಶಕ ಜೇಕಬ್ ವರ್ಗೀಸ್‌ಗೆ ನೀಡಲಾಗಿತ್ತು.
ಇಬ್ಬರು ಕ್ರೀಡಾಪಟುಗಳು ನಾಲ್ಕು ವರ್ಷಗಳಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಕೂಟಗಳ ಚಿತ್ರೀಕರಣದ ವಿಡಿಯೋ ಮತ್ತು ಫೋಟೋಗಳ ಕಾಪಿರೈಟ್ಸ್ ಕೊಟ್ಟು, ಸಾಕ್ಷ್ಯಚಿತ್ರದ ವೆಚ್ಚವನ್ನು ಭರಿಸುವುದಾಗಿ 2020ರ ನವೆಂಬರ್‌ನಲ್ಲಿ ಸಂಸ್ಥೆಯು ಜೇಕಬ್ ವರ್ಗೀಸ್ ನಡುವೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಚಿತ್ರೀಕರಣದ ವೆಚ್ಚವನ್ನು ಸಂಸ್ಥೆಯಿಂದ ಭರಿಸಲಾಗಿತ್ತು. ಆದರೆ, ಚಿತ್ರೀಕರಣದ ನಂತರ ಕಾಪಿರೈಟ್ಸ್ ವರ್ಗಾಯಿಸದೇ ದೆಹಲಿಯ ಅಲಯನ್ಸ್ ಪ್ರಾಂಕೋಯಿಸ್‌ನಲ್ಲಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.