ಲಾಲ್‌ಬಾಗ್‌ನಲ್ಲಿ ಶ್ವಾನಗಳ ಸಾಹಸ ಪ್ರದರ್ಶನ
Team Udayavani, Oct 21, 2019, 3:05 AM IST
ಬೆಂಗಳೂರು: ಲಾಲ್‌ಬಾಗ್‌ನ ಗಾಜಿನ ಮನೆ ಬಳಿ ಭಾನುವಾರ ಸಿಆರ್‌ಪಿಎಫ್ ತಂಡ ಶ್ವಾನಗಳ ಸಾಹಸ ಪ್ರದರ್ಶನ ನಡೆಯಿತು.
ಅ.31ರಂದು ಸರ್ದಾರ್ ವಲ್ಲಬಭಾಯ್ ಪಟೇಲ್ ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಯಲಹಂಕದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವತಿಯಿಂದ ನಗರದಲ್ಲಿ ಶ್ವಾನಗಳ ಸಾಹನ ಪ್ರದರ್ಶನ, ಶಸ್ತ್ರಾಸ್ತ್ರ ಪ್ರದರ್ಶನ, ಬ್ಯಾಂಡ್‌ಗಳ ಪ್ರದರ್ಶನ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿದೆ. ಇದರ ಭಾಗವಾಗಿ ಭಾನುವಾರ ಲಾಲ್‌ಬಾಗ್‌ನಲ್ಲಿ ತರಬೇತಿ ಪಡೆದ ಶ್ವಾನಗಳ ಸಾಹಸ ಪ್ರದರ್ಶನ ನಡೆಯಿತು.
ಮೀಸಲು ಪಡೆ ಪಳಗಿಸಿದ ಶ್ವಾನಗಳು ಬೆಂಕಿ ಹಚ್ಚಿದ ರಿಂಗ್‌ನ ಒಳಗಿಂದ ಜಿಗಿದು ನೆರದಿದ್ದವರ ಬೆರಗಾಗಿಸಿದವು. 10 ಅಡಿ ಎತ್ತರದಿಂದ ಜಿಗಿದು ಅಪರಾಧಿಯನ್ನು ಹಿಡಿಯುವುದನ್ನು ನೋಡಿ ಲ್ಲಿ ನೆರೆದವರು ಚಪ್ಪಾಳೆ ತಟ್ಟಿ ಶ್ವಾನಗಳನ್ನು ಪ್ರೋತ್ಸಾಹಿಸಿದರು. ಜತೆಗೆ ಶ್ವಾನಗಳು ಉಗ್ರರಿಂದ ತನ್ನ ಮಾಲೀಕನನ್ನು ಕಾಪಾಡುವುದು, ಮಾಲೀಕನು ಮಾತು ಬಿಟ್ಟರೆ ಅಪರಿಚಿತರ ಆಜ್ಞೆಯನ್ನುಪಾಲಿಸದಿರುವುದು ಹಾಗೂ ಶ್ವಾನಗಳ ಚುರುಕು ತನದ ಪ್ರದರ್ಶನ ನಡೆಯಿತು.
ಬಳಿಕ ಶ್ವಾನಗಳಿಗೆ ಯಾವ ರೀತಿ ತರಬೇತಿ ನೀಡಲಾಗುತ್ತದೆ ಎಂದು ಮೀಸಲು ಪಡೆ ಸಿಬ್ಬಂದಿ ಮಾಹಿತಿ ನೀಡಿದರು. “ಶ್ವಾನ 5 ತಿಂಗಳು ಇರುವಾಗಲೇ ಅದರ ತರಬೇತಿ ಆರಂಭಿಸಲಾಗುತ್ತದೆ. ಆ ಶ್ವಾನ ಬೆಳೆದು ದೊಡ್ಡದಾದ ನಂತರ ಯುದ್ಧದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ’ ಎಂದು ಸಿಆರ್‌ಪಿಎಫ್ನ ಡಿಐಜಿ ರವೀಂದ್ರ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.