ಸೇನೆಗೆ ಸ್ವದೇಶಿ ನಿರ್ಮಿತ ಪ್ಯಾರಚೂಟ್ ಬೆಲ್ಟ್
Team Udayavani, Feb 23, 2019, 6:23 AM IST
ಬೆಂಗಳೂರು: ರಕ್ಷಣಾ ಇಲಾಖೆಯ ದೆಹಲಿಯ ನೋಡಲ್ ತಂತ್ರಜ್ಞಾನ ಕೇಂದ್ರವು ಹರ್ನೆಸ್ ಅಸೆಂಬಲ್ ಎಸ್‌ಯು 30 ಎಂಕೆಐ ಬೆಲ್ಟ್ ಸಿದ್ಧಪಡಿಸುವ ಮೂಲಕ ಸೇನಾ ಪ್ಯಾರಚೂಟ್ ತಯಾರಿಕೆಯಲ್ಲಿ ದೇಶಕ್ಕೆ ಕೋಟ್ಯಾಂತರ ರೂ. ಉಳಿತಾಯ ಮಾಡುತ್ತಿದೆ.
ಈ ಹಿಂದೆ ಭಾರತೀಯ ಸೈನಿಕರಿಗೆ ಅಗತ್ಯವಿರುವ ಪ್ಯಾರಚೂಟ್‌ಗಳನ್ನು ಸಿದ್ಧಪಡಿಸಲು ವಿದೇಶಗಳಿಂದ ದುಬಾರಿ ಹಣ ನೀಡಿ, ಹರ್ನೆಸ್ ಅಸೆಂಬಲ್ ಎಸ್‌ಯು 30 ಎಂಕೆಐ ಬೆಲ್ಟ್‌ಗಳನ್ನು ಆಮದು ಮಾಡಿಕೊಂಡು, ನಂತರ ಅಸೆಂಬಲ್ ಮಾಡಬೇಕಿತ್ತು.
ಅದು ಕೂಡ ವಿಶ್ವಾಸಾರ್ಹ ದೇಶಗಳಿಂದ ಮಾತ್ರ ಖರೀದಿಸಲು ಸಾಧ್ಯ. ಬೆಲ್ಟ್‌ಗಳು ಬಲಿಷ್ಠವಾಗಿಲ್ಲದೇ ಇದ್ದರೆ ಪ್ಯಾರಚೂಟ್‌ನಲ್ಲಿ ಹೋಗುವ ಸಂದರ್ಭದಲ್ಲೇ ಆಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಪ್ಯಾರಚೂಟಗಳನ್ನು ದೇಶದಲ್ಲೇ ನಿರ್ಮಿಸಲಾಗುತ್ತಿದೆಯಾದರೂ, ಅದಕ್ಕೆ ಅಗತ್ಯವಿರುವ ಹರ್ನೆಸ್ ಅಸೆಂಬಲ್ ಎಸ್‌ಯು 30 ಎಂಕೆಐ ಬೆಲ್ಟ್ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತಿತ್ತು.
ಈಗ ದೆಹಲಿಯ ನೋಡಲ್ ತಂತ್ರಜ್ಞಾನ ಕೇಂದ್ರದಲ್ಲೇ ಸಿದ್ಧಪಡಿಸುತ್ತಿದ್ದೇವೆ ಎಂದು ಕೇಂದ್ರದ ಹಿರಿಯ ಎಂಜಿನಿಯರ್ ಮಾಹಿತಿ ನೀಡಿದರು. ಒಂದು ಹರ್ನೆಸ್ ಅಸೆಂಬಲ್ ಎಸ್‌ಯು 30 ಎಂಕೆಐ ಬೆಲ್ಟ್ಗೆ ವಿದೇಶದಿಂದ 2.10 ಲಕ್ಷ ರೂ. ನೀಡಿ ಖರೀದಿ ಮಾಡಬೇಕಿತ್ತು. ಈಗ ನಾವೇ ಇದನ್ನು 19,464 ರೂ.ಗಳಿಗೆ ಸಿದ್ಧಪಡಿಸುತ್ತಿದ್ದೇವೆ.
ಇದರಿಂದ ಒಂದು ಪ್ಯಾರಚೂಟ್ ಬೆಲ್ಟ್ ತಯಾರಿಕೆಯಲ್ಲಿ 1,90,536 ರೂ.ಗಳನ್ನು ಉಳಿಸುತ್ತಿದ್ದೇವೆ. ಅಷ್ಟು ಮಾತ್ರವಲ್ಲದೇ ಉತ್ಕೃಷ್ಟ ತಂತ್ರಜ್ಞಾನ ಬಳಸಿ ಅತ್ಯಂತ ಬಲಿಷ್ಠ ಬೆಲ್ಟ್ ತಯಾರಿಸುತ್ತಿದ್ದೇವೆ. ವಾಯುಸೇನೆ, ಭೂ ಸೇನೆ ಹಾಗೂ ನೌಕ ಸೇನೆಯ ಬೇಡಿಕೆಯಂತೆ ಇದನ್ನು ಉತ್ಪಾದನೆ ಮಾಡುತ್ತಿದ್ದೇವೆ ಎಂದು ವಿವರ ನೀಡಿದರು.
ಯುದ್ಧ ವಿಮಾನ ಅಥವಾ ಸೇನಾ ವಿಮಾನ ಆಕಸ್ಮಿಕವಾಗಿ ಅಪಘಾತ ಸಂಭವಿಸಿದಲ್ಲಿ ಪೈಲೆಟ್ ವಿಮಾನದ ಸೀಟು ಸೇಮತವಾಗಿ ಹೊರಗಡೆ ಬರಬಹುದಾದ ವ್ಯವಸ್ಥೆಯಿದೆ. ಪ್ಯಾರಚೂಟ್ ಮತ್ತು ಪೈಲೆಟ್‌ಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಅಪಘಾತದ ಸಂದರ್ಭದಲ್ಲಿ ಪ್ಯಾರಚೂಟ್ ನೇರವಾಗಿ ಹೊರಗೆ ಬರುವ ಸಾಮರ್ಥ್ಯ ಹೊಂದಿದೆ.
ಇದು 44 ಎಂ.ಎಂ. ಅಗಲ ಇದೆ. ನೈಲಾನ್ ಮೆಟಿರಿಯಲ್ ಬಳಸಿ ತಯಾರಿಸುತ್ತಿದ್ದೇವೆ. ಸ್ಟೀಲ್ ಗ್ರೇ ಬಣ್ಣ ಹೊಂದಿದೆ. ಐದು ವರ್ಷ ಬಾಳಿಕೆಗೆ ಬರುತ್ತದೆ ಎಂದು ಹೇಳಿದರು. ರಕ್ಷಣಾ ಇಲಾಖೆಯ ಭಾಗವಾಗಿ ನಾವೇ ಇದನ್ನು ಸಿದ್ಧಪಡಿಸುವುದರಿಂದ ವಾರ್ಷಿಕವಾಗಿ ಕೋಟ್ಯಾಂತರ ರೂ. ಉಳಿತಾಯವಾಗಲಿದೆ.
ಉತ್ಪಾದನ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದೇವೆ. ವಾಯುಸೇನೆಗೆ ಹೆಚ್ಚಿನ ಪ್ಯಾರಚೂಟ್ ಅಗತ್ಯವಿದೆ. ಹಾಗೆಯೇ ಭೂ ಸೇನೆಯ ಕೆಲವು ರೆಜಮೆಂಟ್‌ಗಳಿಗೂ ಇದರ ಅವಶ್ಯಕತೆ ಇದೆ. ತುರ್ತು ಅಪಘಾತದ ಸಂದರ್ಭದಲ್ಲಿ ಆಧುನಿಕ ಪ್ಯಾರಚೂಟ್ ಪೈಲೆಟ್‌ಗಳ ಜೀವ ಉಳಿಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.