Bengaluru: “ಅಕ್ರಮ ಬ್ಯಾನರ್, ಹೋರ್ಡಿಂಗ್‌ಗಳ ಹಾವಳಿ ಹಗುರವಾಗಿ ಪರಿಗಣಿಸಬೇಡಿ’
Team Udayavani, Dec 14, 2024, 11:02 AM IST
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ವಾಗಿ ಫ್ಲೆಕ್ಸ್, ಹೋರ್ಡಿಂಗ್ ಅಥವಾ ಬ್ಯಾನರ್ ಹಾಕು ವವರನ್ನು ದಂಡಿಸಲು ಜಾರಿಗೆ ತರಲು ಉದ್ದೇಶಿ ಸಲಾಗಿರುವ ಬೈಲಾದಲ್ಲಿ ಯಾವುದೇ ಅವಕಾಶ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ನಗರದಲ್ಲಿನ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್, ವಿಚಾರವನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಎಚ್ಚರಿಕೆ ನೀಡಿದೆ.
ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಹೋರ್ಡಿಂಗ್ ಹಾವಳಿ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ 2024ರ ಜುಲೈ ತಿಂಗಳಲ್ಲಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಸಮಾಧಾನವನ್ನು ಹೊರಹಾಕಿ ಎಚ್ಚರಿಕೆ ನೀಡಿತು.
ಬೆಂಗಳೂರಿನ ಅಕ್ರಮ ಫ್ಲೆಕ್ಸ್ ಮತ್ತು ಹೋರ್ಡಿಂಗ್ ಸಮಸ್ಯೆ ಅತಿ ಗಂಭೀರವಾಗಿದ್ದು, ಅದು ಎಲ್ಲ ನಗರವಾಸಿಗಳಿಗೂ ಹಲವು ವರ್ಷಗಳಿಂದ ತೊಂದರೆ ನೀಡುತ್ತಲೇ ಇದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಉದ್ದೇಶಿತ ಬೈಲಾದಲ್ಲಿ ಆ ರೀತಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ಹಾಕುವವರನ್ನು ಶಿಕ್ಷಿಸುವ ಅಂಶವೇ ಇಲ್ಲ ಎಂದು ನ್ಯಾಯಪೀಠ ಹೇಳಿದೆ. ಈ ವಿಚಾರವಾಗಿ 2017ರಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಂಬಂಧ ಹೈಕೋರ್ಟ್, ಸಿಲಿಕಾನ್ ಸಿಟಿ ಬೆಂಗಳೂ ರಿನ ಅಂದಹಾಳುಗೆಡವುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಥವಾ ಹೋರ್ಡಿಂಗ್‌ಗಳನ್ನು ನಿಯಂತ್ರಿ ಸಲು ಹಲವು ನಿರ್ದೇಶನಗಳನ್ನು ನೀಡಿದ್ದರೂ, ನಗರದಲ್ಲಿ ಅವುಗಳ ಹಾವಳಿ ಮೀತಿಮೀರಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು. ಅಲ್ಲದೆ, ಈ ವಿಚಾರದ ಬಗ್ಗೆ ಮುಂದಿನ ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಬೇಕು ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು 2025ರ ಜ.16ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಹಣ ಕಳ್ಳತನ: ಓಜಿಕುಪ್ಪಂ ಗ್ಯಾಂಗ್ ಸದಸ್ಯರ ಸೆರೆ
Drug Selling Case: 1 ತಿಂಗಳಲ್ಲಿ 85 ಆರೋಪಿಗಳ ಬಂಧನ
Arrested: ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್ ಮಹಿಳೆ ಸೆರೆ
Lalbagh Flower Show: ಲಾಲ್‌ಬಾಗ್ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧ
Lalbagh Flower Show: ಲಾಲ್‌ಬಾಗ್‌ನಲ್ಲಿ ಇಂದಿನಿಂದ 11 ದಿನ ಫಲಪುಷ್ಪ ಮೇಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.