ಚಿಂತೆ ಬಿಡಿ: ರಿಯಲ್‌ ಟೈಮ್‌ ನೋಡಿ 


Team Udayavani, Oct 23, 2017, 12:07 PM IST

flatform-bmtc-sunil.jpg

ಬೆಂಗಳೂರು: ಪ್ರಯಾಣಿಕರು ಬಸ್‌ಗಾಗಿ ಅನಗತ್ಯವಾಗಿ ಕಾಯುವುದನ್ನು ತಪ್ಪಿಸಲು ಹಾಗೂ ಬಸ್‌ ಆಗಮನದ ನಿಶ್ಚಿತ ಸಮಯದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲು ಮುಂದಾಗಿರುವ ಬಿಎಂಟಿಸಿ, ಬಸ್‌ಗಳ ಆಗಮನ-ನಿರ್ಗಮನ ಮಾಹಿತಿ ನೀಡುವ “ರಿಯಲ್‌ ಟೈಮ್‌’ ಬಸ್‌ ಮಾಹಿತಿ ಫ‌ಲಕಗಳ ಅಳವಡಿಕೆಗೆ ತೀರ್ಮಾನಿಸಿದೆ. |

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪೇಗೌಡ ಬಸ್‌ ನಿಲ್ದಾಣ, ಯಶವಂತಪುರ, ಶಾಂತಿನಗರ, ಶಿವಾಜಿನಗರ, ಕಾರ್ಪೋರೇಷನ್‌, ಮಾರ್ಕೇಟ್‌ ಪ್ರಮುಖ ನಿಲ್ದಾಣಗಳು ಸೇರಿ ನಗರದ 251 ಕಡೆ ಡಿಜಿಟಲ್‌ ಫ‌ಲಕಗಳನ್ನು ಅಳವಡಿಸಲು ಬಿಎಂಟಿಸಿ ಯೋಜನೆ ರೂಪಿಸಿದೆ. ಈ ಸಂಬಂಧ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಮುಂದಿನ ಎರಡೂವರೆ ತಿಂಗಳಲ್ಲಿ ಡಿಜಿಟಲ್‌ ಫ‌ಲಕಗಳು ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ರಾರಾಜಿಸಲಿವೆ.

ದೈನಂದಿನ ಸುದ್ದಿಯೂ ಲಭ್ಯ: ಬಸ್‌ ನಿಲ್ದಾಣಗಳಲ್ಲಿ ಅಳವಡಿಸುವ ಡಿಜಿಟಲ್‌ ಮಾಹಿತಿ ಫ‌ಲಕಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಬಸ್‌ ನಿಲ್ದಾಣದಿಂದ ಬಸ್‌ ನಿರ್ಗಮಿಸಿದ ಸಮಯ, ಆಗಮಿಸುವ ಸಮಯದ ಮಾಹಿತಿ ನೀಡಲಿದೆ. ಅಷ್ಟೇ ಅಲ್ಲ, ಆಯಾ ದಿನದ ಹವಾಮಾನ ವರದಿ, ದೈನಂದಿನ ಸುದ್ದಿಯೂ ಡಿಜಿಟಲ್‌ ಫ‌ಲಕಗಳ ಮೇಲೆ ಬಿತ್ತರವಾಗಲಿದೆ. 

ಡಿಜಿಟಲ್‌ ಫ‌ಲಕಗಳಲ್ಲಿ ಉದಾಹರಣೆಗೆ, ಪ್ರಯಾಣಿಕರು ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೋಗಲು ಶಿವಾಜಿನಗರ, ಶಾಂತಿನಗರ, ಮಾರ್ಕೆಟ್‌ ಬಳಿಯ ನಿಲ್ದಾಣದಲ್ಲಿ ನಿಂತಿದ್ದರೆ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೋಗುವ ಬಸ್‌ಗಳು ಎಷ್ಟು ಹೊತ್ತಿಗೆ ಬರಲಿವೆ ಎಂಬ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಈ ಫ‌ಲಕಗಳ ಅಳವಡಿಕೆಯಿಂದ ಯಾವ ಮಾರ್ಗದ ಬಸ್‌ ಎಲ್ಲಿದೆ? ಎಂಬುದರ ಮಾಹಿತಿಯೂ ಗೊತ್ತಾಗಲಿದೆ. ತಡವಾಗುತ್ತದೆ ಎಂದಾದರೆ ಪ್ರಯಾಣಿಕರು ಕಾಯುವ ಬದಲು ಪರ್ಯಾಯ ವ್ಯವಸ್ಥೆ ಅಥವಾ ಬೇರೆ ಕೆಲಸ ಇದ್ದಲ್ಲಿ ಮಾಡಿಕೊಂಡು ನಂತರ ಬಸ್‌ ಹಿಡಿಯಲು ಅನುಕೂಲವಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ನಗರದ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಸಾರ್ವಜನಿಕ ಮಾಹಿತಿ ಕೇಂದ್ರಗಳ (ಪಿಐಎಸ್‌) ಸ್ಥಾಪಿಸಿದ ಬಿಎಂಟಿಸಿ, ಅದೇ ಮಾದರಿಯಲ್ಲಿ 251 ಕಡೆ ನಿರಂತರ ಬಸ್‌ಗಳ ಮಾಹಿತಿ ನೀಡುವ ಡಿಜಿಟಲ್‌ ಮಾಹಿತಿ ಫ‌ಲಕಗಳ ಅಳವಡಿಸಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.

ಪಿಪಿಪಿ ಮಾದರಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ಕಡೆ ಸಾರ್ವಜನಿಕ ಮಾಹಿತಿ ಕೇಂದ್ರಗಳನ್ನು ಬಿಎಂಟಿಸಿ ಸ್ಥಾಪಿಸಿತ್ತು. ಆದರೆ, ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಡಿಜಿಟಲ್‌ ಮಾಹಿತಿ ಫ‌ಲಕಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. 

ಶೇ.50ರಷ್ಟು ಜಾಹೀರಾತಿಗೆ ಅವಕಾಶ: ಡಿಜಿಟಲ್‌ ಫ‌ಲಕಗಳು ಬೆಳಗ್ಗೆ 5 ರಿಂದ ರಾತ್ರಿ 11ವರೆಗೆ ಕಾರ್ಯನಿರ್ವಹಿಸಲಿವೆ. ಫ‌ಲಕಗಳ ಅಳವಡಿಕೆ ಗುತ್ತಿಗೆ ಪಡೆಯುವ ಸಂಸ್ಥೆಯವರು ಒಟ್ಟಾರೆ ಸಮಯದ ಶೇ.50ರಷ್ಟು ಸಮಯ ಜಾಹೀರಾತು ಪ್ರಕಟಿಸಲು ಅವಕಾಶ ನೀಡಲಾಗಿದೆ. 

ಕೆಲ ಜಾಹೀರಾತು ನಿಷೇಧ: ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಜಾಹೀರಾತು, ಧೂಮಪಾನ, ಮದ್ಯಪಾನ, ಮಾದಕದ್ರವ್ಯ ಸೇರಿದಂತೆ ಪ್ರಚೋದನಾಕಾರಿ ಹಾಗೂ ಅಶ್ಲೀಲ ಸಂದೇಶ ಸಾರುವ ಜಾಹೀರಾತುಗಳಿಗೆ ಬಿಎಂಟಿಸಿ ನಿಷೇಧ ಹೇರಿದೆ. ನಿಯಮ ಮೀರಿದರೆ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಜಿಪಿಎಸ್‌ ಮೂಲಕ ಬಸ್‌ಗಳ ಮಾಹಿತಿ: ನಿಗಮದಲ್ಲಿನ ಸುಮಾರು 6 ಸಾವಿರ ಬಸ್‌ಗಳ ಪೈಕಿ 2,200ಕ್ಕೂ ಹೆಚ್ಚು ಬಸ್‌ಗಳಲ್ಲಿ ಈಗಾಗಲೇ ಜಿಪಿಎಸ್‌ ಅಳವಡಿಸಲಾಗಿದೆ. ಅದರ ಆಧಾರದಲ್ಲಿ ಬಸ್‌ಗಳು ಎಲ್ಲಿ ಹೋಗುತ್ತಿವೆ. ಎಲ್ಲಿ ನಿಂತಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪಡೆಯುತ್ತಿದ್ದು ಅದೇ ಮಾಹಿತಿ ಆಧರಿಸಿ ಡಿಜಿಟಲ್‌ ಫ‌ಲಕಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿಂದೆಯೇ ಬಿಎಂಟಿಸಿ ಅಧಿಕಾರಿಗಳು ಈ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದರಾದರೂ ಅದು ಸಮರ್ಪಕವಾಗಿ ಜಾರಿಯಾಗಿರಲಿಲ್ಲ.

ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೊಂದು ಬಸ್‌ನಿಲ್ದಾಣಗಳಲ್ಲಿ ಸ್ಥಾಪಿಸಿದ ಸಾರ್ವಜನಿಕ ಮಾಹಿತಿ ಕೇಂದ್ರಗಳು ಕೆಲ ಕಾರಣಗಳಿಂದ ಸಮರ್ಪಕವಾಗಿ ಜಾರಿಯಾಗಲಿಲ್ಲ. ಇದೀಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 251 ಕಡೆ ನಿರಂತರ ಬಸ್‌ ಸಂಚಾರ ಮಾಹಿತಿ ನೀಡುವ ಡಿಜಿಟಲ್‌ ಫ‌ಲಕಗಳ ಅಳವಡಿಕೆಗೆ ಮುಂದಾಗಿದ್ದೇವೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 
-ವಿ.ಪೊನ್ನುರಾಜು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ

ಡಿಜಿಟಲ್‌ ಫ‌ಲಕ ಅಳವಡಿಸುವ ಪ್ರಮುಖ ನಿಲ್ದಾಣಗಳ ವಿವರ
ನಿಲ್ದಾಣ    ಫ‌ಲಕಗಳ ಸಂಖ್ಯೆ

-ಕೆಂಪೇಗೌಡ    71
-ಶಾಂತಿನಗರ    20
-ಯಶವಂತಪುರ    15
-ಶಿವಾಜಿನಗರ    20
-ಕೆಂಗೇರಿ    10
-ಬನಶಂಕರಿ    5
-ವಿಜಯನಗರ    5
-ವೈಟ್‌ಫೀಲ್ಡ್‌    5
-ಜಯನಗರ 4ನೇ ಬ್ಲಾಕ್‌    5
-ದೊಮ್ಮಲೂರು    5
-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ    7
-ಬನ್ನೇರುಘಟ್ಟ ಟಿಟಿಎಂಸಿ    3

* ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.