ದರ್ಶನ್ ವನ್ಯಜೀವಿ ಸಪ್ತಾಹಕ್ಕೆ ಬರುವುದು ಅನುಮಾನ?
Team Udayavani, Sep 30, 2018, 12:28 PM IST
ಆನೇಕಲ್: ಬೆಂಗಳೂರಿನ ಕಬ್ಬನ್ ಪಾರ್ಕ್ ದ್ವಾರದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಅ. 2 ರಂದು ಆಯೋಜಿಸಿರುವ ವನ್ಯಜೀವಿ ಸಪ್ತಾಹ ಕಾರ್ಯಕ್ರಮಕ್ಕೆ ಭಾಗವಹಿಸಿ ಬೇಕಿದ್ದ ನಟ, ಹಾಗೂ ಕರ್ನಾಟಕ ಅರಣ್ಯ ಇಲಾಖೆ ರಾಯಬಾರಿ ದರ್ಶನ್ ಆಗಮಿಸುವುದು ಅನುಮಾನ ವ್ಯಕ್ತವಾಗಿದೆ.
ಕಾರು ಅಪಘಾತದಿಂದ ದರ್ಶನ್ ಕೈಗೆ ಪೆಟ್ಟಾಗಿ ಶಸ್ತ್ರಚಿಕಿತ್ಸೆಯಾಗಿರುವ ಕಾರಣ ಸಪ್ತಾಹದಲ್ಲಿ ಭಾಗವಹಿಸುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್ ಕರ್ನಾಟಕ ಅರಣ್ಯ ಇಲಾಖೆಗೆ ಕಳೆದ ಮೂರು ತಿಂಗಳ ಹಿಂದೆಯಷ್ಠೆ ರಾಯಬಾರಿಯಾಗಿ ನೇಮಕವಾಗಿದ್ದರು.
ಬಳಿಕ ವಿಶ್ವಪರಿಸರ ದಿನಾಚರಣೆ, ವನಮಹೋತ್ಸವ ಕುರಿತು, ಅರಣ್ಯ ಸಂರಕ್ಷಣೆ ವಿಚಾರವಾಗಿ ವಿಡಿಯೋ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ರಾಜ್ಯದ ಹಲವು ಅರಣ್ಯಗಳಿಗೆ ಬೇಟಿ ನೀಡಿ ಅಲ್ಲಿನ ಅರಣ್ಯ ಸಿಬ್ಬಂದಿಗಳನ್ನು ಉತ್ತೇಜಿಸಿದ್ದರು.
ಹೀಗಾಗಿ ಅರಣ್ಯ ಇಲಾಖೆ ಈ ಬಾರಿಯ ವನ್ಯಜೀವ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಯಾಗಿ ಆಹ್ವಾನಿಸಿತ್ತು. ವಿಧಾನಸೌಧದಿಂದ ಲಾಲ್‌ಬಾಗ್‌ವರೆಗೂ ಕಾಲ್ನಡಿಗೆ ಜಾಥಾದಲ್ಲಿ ದರ್ಶನ್ ಅವರು ಭಾಗವಹಿಸುತ್ತಾರೆ. ಸಪ್ತಾಹ ಅದ್ದೂರಿಯಾಗಿ ಯಶಸ್ವಿಯಾಗುತ್ತದೆ ಎಂದು ಅಧಿಕಾರಿಗಳು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಅವರ ಕೈ ಗಾಯವಾಗಿರುವುದರಿಂದ ಅವರು ಬರುತ್ತಾರೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ.
ಗುಣಮುಖರಾಗಲಿ: ಕಳೆದ ಹತ್ತು ವರ್ಷಗಳಿಂದ ಅರಣ್ಯ ಇಲಾಖೆ ವನ್ಯಜೀವಿಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಬಂದಿದ್ದೆನೆ, ಈ ಬಾರಿ ಅರಣ್ಯ ಇಲಾಖೆಯ ರಾಯಬಾರಿಯಾಗಿ ನಟ ದರ್ಶನ್ ಬರಲಿದ್ದಾರೆಂಬ ಸಂಗತಿ ಸಂತಸ ಮೂಡಿಸಿತ್ತು.
ಆದರೆ, ಅವರು ಅಪಘಾತದಿಂದ ಗಾಯಗೊಂಡಿರುವ ಕಾರಣ ಜಾಥಾದಲ್ಲಿ ಭಾಗವಹಿಸುವುದಿಲ್ಲ ಎಂಬುದು ನಿರಾಸೆ ತಂದಿದೆ. ನಟ ದರ್ಶನ್ ಅವರು ಬೇಗ ಗುಣಮುಖರಾಗಲಿ ಆರೋಗ್ಯವೂ ಮುಖ್ಯ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿಯ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಬಿ ಗೌಡ ತಿಳಿಸಿದ್ದಾರೆ.
ಕಲಾವಿದರ ಕಾಳಜಿ: ಅರಣ್ಯ ಇಲಾಖೆ ಪ್ರತಿ ವರ್ಷ ಆಯೋಜಿಸುವ ವನ್ಯಜೀವಿ ಸಪ್ತಾಹದಲ್ಲಿ ಅರಣ್ಯ ಸಚಿವರು, ಮೇಯರ್, ಹಲವು ಶಾಸಕರು, ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗುವ ಸಪ್ತಾಹದಲ್ಲಿ ಸಿನಿಮಾ ಕಲಾವಿದರು ಆಗಮಿಸಿ ಮತ್ತಷ್ಟು ಮೆರಗು ನೀಡುತ್ತ ಬಂದಿದ್ದಾರೆ. ಈ ಹಿಂದೆ ನಟ ಪುನೀತ್, ಪ್ರಕಾಶ್‌ರಾಜ್, ವಿಜಯ ರಾಘವೇಂದ್ರ, ಮುರಳಿ, ಮಾಜಿ ಕ್ರಿಕೆಟ್ ಆಟಗಾರ ಅನಿಲ್‌ಕುಂಬ್ಳೆ ಹೀಗೆ ಅನೇಕರು ಸಪ್ತಾಹದಲ್ಲಿ ಭಾಗವಹಿಸಿ ತಮ್ಮ ಪರಿಸರ ಕಾಳಜಿ ತೋರುತ್ತಾ ಬಂದಿದ್ದಾರೆ.
ಆಗಮನದ ನಿರೀಕ್ಷೆ: ವನ್ಯಜೀವಿ ಸಪ್ತಾಹ ಅ. 2 ರಿಂದ 7 ವರೆಗೂ ನಡೆಯಲಿದೆ, ದರ್ಶನ್ ಇಲಾಖೆ ರಾಯಭಾರಿಯಾಗಿರುವುದರಿಂದ ಅವರ ಆಹ್ವಾನಿಸುವುದು ನಮ್ಮ ಶಿಷ್ಠಾಚಾರ. ಸಪ್ತಾಹ ಉದ್ಘಾಟನ ಸಮಾರಂಭದಲ್ಲಿ ಅವರು ಭಾಗವಹಿಸಬಹುದು ಎಂಬ ನಿರೀಕ್ಷೆ ಇದೆ ಎಂದು ಕಾರ್ಯಕ್ರಮ ನೇತೃತ್ವ ವಹಿಸಿ ಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.