ರಮಣಶ್ರೀ ಶರಣ ಜೀವಮಾನ ಸಾಧಕ ಸನ್ಮಾನಕ್ಕೆ ಡಾ.ಗುರುರಾಜ ಕರ್ಜಗಿ ಆಯ್ಕೆ
Team Udayavani, Nov 15, 2021, 12:24 PM IST
ಬೆಂಗಳೂರು: “ರಮಣಶ್ರೀ ಶರಣ ಜೀವಮಾನ ಸಾಧಕ ಸನ್ಮಾನ’ಕ್ಕೆ ಡಾ. ಗುರುರಾಜ ಕರ್ಜಗಿ ಆಯ್ಕೆಯಾಗಿದ್ದಾರೆ ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಗೊ.ರು. ಚನ್ನಬಸಪ್ಪ ಮತ್ತು ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ ಹೇಳಿದರು. ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ನ.17 ಬುಧವಾರದಂದು ರಿಚರ್ಡ್ ಸರ್ಕಲ್ ಬಳಿಯ ರಮಣಶ್ರೀ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪರಿಷತ್ತಿನ ಅಧ್ಯಕ್ಷ ಡಾ. ಗೊ.ರು. ಚನ್ನಬಸಪ್ಪ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಶರಣ ಸಂಸ್ಕೃತಿ ಕ್ಷೇತ್ರದ ಒಬ್ಬ ಹಿರಿಯ ಸಾಧಕರಿಗೆ ರಮಣಶ್ರೀ ಶರಣ ಜೀವಮಾನ ಸಾಧಕ ಸನ್ಮಾನ ಮಾಡಲಾಗುವುದು. ಈ ಸನ್ಮಾನವು 30,000 ರೂ. ಗೌರವ ಧನವನ್ನು ಒಳಗೊಂಡಿರುತ್ತದೆ. ಪ್ರತಿ ಬಾರಿಯು ಒಂಭತ್ತು ಹಿರಿಯ ಸಾಧಕರಿಗೆ ರಮಣಶ್ರೀ ಶರಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು.
ಇದನ್ನೂ ಓದಿ:- ಹೊನಗುಂಟಾಕೆ ಸಮರ್ಪಕ ಬಸ್ ಕಲ್ಪಿಸಿ
ಆದರೆ, ಈ ಬಾರಿ ಎಂಟು ಜನ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು. ವಚನ ಸಾಹಿತ್ಯ ಸಂಶೋಧನೆಯಲ್ಲಿ ಡಾ. ಶಾಂತಾ ಇಮ್ರಾಪೂರ, ಆಧುನಿಕ ವಚನ ರಚನೆಯಲ್ಲಿ ಡಾ. ಪ್ರದೀಪ ಕುಮಾರ ಹೆಬ್ರಿ, ವಚನ ಸಂಗೀತ ಕ್ಷೇತ್ರದಲ್ಲಿ ಡಾ.ನಂದಾ ಪಾಟೀಲ ಹಾಗೂ ಪಾವಗಡದ ಶರಣ ಸಂಸ್ಕೃತಿ ಪ್ರಸಾರ ಕ್ಷೇತ್ರದಲ್ಲಿ ಸ್ವಾಮಿ ವಿವೇಕಾನಂದ ಇಂಟಿಗ್ರೇ ಟೆಡ್ ಗ್ರಾಮೀಣ ಆರೋಗ್ಯ ಕೇಂದ್ರ ಇವರಿಗೆ ತಲಾ 25,000 ರೂ. ಗೌರವಧನ ಜೊತೆಗೆ ರಮಣಶ್ರೀ ಶರಣ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.
ವಚನ ಸಾಹಿತ್ಯ ಸಂಶೋಧನೆಯಲ್ಲಿ ಡಾ. ಜಿ. ಭಾಗ್ಯಮ್ಮ, ವಚನ ಸಂಗೀತದಲ್ಲಿ ಸ್ಮಿತಾತಾವ್ ಬೆಳ್ಳೂರ್ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿ ಇವರಿಗೆ ತಲಾ 10,000 ರೂ. ಗೌರವ ಧನ ಮತ್ತು ರಮಣಶ್ರೀ ಉತ್ತೇಜನ ಪ್ರಶಸ್ತಿಯನ್ನು ನೀಡಲು ಸಮಿತಿ ನಿರ್ಧರಿಸಿದೆ ಎಂದು ಹೇಳಿದರು. ಸಚಿವ ವಿ.ಸೋಮಣ್ಣ, ಎಸ್. ಷಡಕ್ಷರಿ, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಡಾ. ಸಿ. ಸೋಮಶೇಖರ್, ಡಾ. ಮನುಬಳಿಗಾರ್, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ ಮತ್ತು ರವಿಹೆಗ್ಡೆ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಸ್. ಷಡಕ್ಷರಿ ಅವರ ಕ್ಷಣ ಹೊತ್ತು- ಆಣಿಮುತ್ತು ಭಾಗ-9 ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.