ಡಾ. ಎಚ್‌ಎನ್ ಅವರದ್ದು ಸರಳ ವ್ಯಕ್ತಿತ್ವ
Team Udayavani, Jul 17, 2019, 3:04 AM IST
ಬೆಂಗಳೂರು: ವೈಚಾರಿಕತೆ, ಸರಳತೆ ಜೊತೆಗೆ ವಾಸ್ತುಶಿಲ್ಪಿ ಕಲ್ಪನೆಗಳನ್ನು ಹೊಂದಿದ್ದ ಡಾ. ಎಚ್ ನರಸಿಂಹಯ್ಯ ಅವರದು ಸರಳ ವ್ಯಕ್ತಿತ್ವ ಎಂದು ಲೇಖಕ ಡಾ.ಬಿ.ಆರ್.ಮಂಜುನಾಥ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಅಯೋಜಿಸಿದ್ದ ಡಾ.ಎಚ್.ಎನ್.ಅವರ ವೈಚಾರಿಕ ಚಿಂತನೆಗಳು ಎಂಬ ಚಿಂತನಗೋಷ್ಠಿಯಲ್ಲಿ ಮಾತನಾಡಿದರು.
ನೈತಿಕ ನಾಯಕತ್ವ ಹೊಂದಿದ್ದ ಅವರು ವೈಚಾರಿಕತೆ ಹಾಗೂ ವಿಜ್ಞಾನದಲ್ಲಿ ನಂಬಿಕೆ ಉಳ್ಳವರಾಗಿದ್ದರು. ಮೂಡನಂಬಿಕೆ, ಪವಾಡ, ಜ್ಯೋತಿಷ್ಯಗಳನ್ನು ವಿರೋಧಿಸುತ್ತಿದ್ದ, ಅವರು ಅಂತಹ ಪವಾಡ ಪರುಷ ನಿಜ ಬಯಲು ಮಾಡಲು ಸತ್ಯಶೋಧನೆ ಎಂಬ ಸಮಿತಿ ರಚಿಸಿಕೊಂಡಿದ್ದರು ಎಂದರು.
ಧೈರ್ಯ ಹಾಗೂ ನೇರವಂತಿಕೆ ಅವರು ಖ್ಯಾತಿ ಪಡೆದ ನರಸಿಂಹಯ್ಯ, ಪುಟ್ಟಪರ್ತಿ ಸಾಯಿಬಾಬಾ ಅವರಿಗೆ ಮೂರು ಬಾರಿ ಪತ್ರ ಬರೆದು ಪವಾಡವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕೆಂದು ಕೇಳಿಕೊಂಡರು. ಕೆಲ ವಿಜ್ಞಾನಿಗಳೊಂದಿಗೆ ಪುಟ್ಟಪರ್ತಿ ಆಶ್ರಮಕ್ಕೆ ಹೋಗಿದ್ದರು, ಅಲ್ಲಿ ಪ್ರವೇಶ ನೀಡದಿದ್ದರಿಂದ ವಾಪಸ್ಸಾದರು ಎಂದು ತಿಳಿಸಿದರು.
ಡಾ. ನರಸಿಂಹಯ್ಯ, ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂರವರ ಸಿದ್ಧಾಂತಗಳಿಗೆ ಮನಸೋತಿದ್ದರು. ನೆಹರೂ ಅವರ ಸ್ನೇಹಶೀಲತೆ ವೈಜ್ಞಾನಿಕ ಮನೋಭಾವನೆಯಂತ ಅಂಶಗಳನ್ನು ಮೆಚ್ಚಿಕೊಂಡಿದ್ದರು ಎಂದರು.
ವಿಶ್ವವಿದ್ಯಾಲಯಗಳು ವಿಶ್ವದ ಜ್ಞಾನವನ್ನು ಪ್ರಸರಿಸುವ ಕೆಲಸ ಮಾಡುತ್ತವೆ. ಕಟ್ಟಡದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಉತ್ತಮ ವಿಚಾರ, ಜ್ಞಾನ ನೀಡದೆ, ಇಡೀ ದೇಶ, ರಾಜ್ಯದ ಜನತೆಗೆ ಅದು ತಲುಪಿಸುವ ಕಾರ್ಯವನ್ನು ವಿಶ್ವವಿದ್ಯಾಲಯಗಳು ಮಾಡಬೇಕೆಂದು ಹೇಳುತ್ತಿದ್ದರು ಎಂದರು.
ನರಸಿಂಹಯ್ಯ ಉಪಕುಲಪತಿಯಾದ ಸಂದರ್ಭದಲ್ಲಿ ಜಾತ್ಯಾತೀತವಾಗಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಹೊಂದುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಶಿಕ್ಷಣ ಸಂಸ್ಥೆಗಳಿಗಾಗಿ ಹಗಲಿರುಳೂ ಶ್ರಮಿಸಿ ಶಿಕ್ಷಣ ಕ್ರಾಂತಿ ಮಾಡಿದರು ಎಂದು ಹೇಳಿದರು. ಎಂ.ತಿಮ್ಮಯ್ಯ, ಶ್ರೀಧರ ಆರ್.ರಾಮಸ್ವಾಮಿ, ಸಿದ್ದಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.