ಡಾ.ಕಾಮಿನಿ ರಾವ್ ಮನೆ, ಆಸ್ಪತ್ರೆಗಳ ಮೇಲೆ ಐಟಿ ರೈಡ್
Team Udayavani, Nov 30, 2017, 11:43 AM IST
ಬೆಂಗಳೂರು: ತೆರಿಗೆ ವಂಚಕರ ವಿರುದ್ಧ ಸಮರ ಸಾರಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಂಗಳೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಕಾಮಿನಿ ಎ. ರಾವ್ ಒಡೆತನದ ಆಸ್ಪತ್ರೆಗಳು, ಡಯಾಗ್ನೊಸ್ಟಿಕ್ ಕೇಂದ್ರಗಳು, ಕೆಲ ಬಿಲ್ಡರ್‌ಗಳು ಸೇರಿದಂತೆ ರಾಜ್ಯದ 29 ಕಡೆ ದಾಳಿ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ 10 ಇನೋವಾ ಕಾರುಗಳಲ್ಲಿ 30ಕ್ಕೂ ಅಧಿಕಾರಿಗಳ ತಂಡ ಏಕಕಾಲಕ್ಕೆ ವಿವಿಧೆಡೆ ದಾಳಿ ನಡೆಸಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.
ಶಿವಾನಂದ ವೃತ್ತದಲ್ಲಿರುವ ಡಾ. ಕಾಮಿನಿ ರಾವ್ ಒಡೆತನದ ನಿವಾಸ, ಮಿಲನ್ ಆಸ್ಪತ್ರೆ, ಚಿಕ್ಕಪೇಟೆ, ಕಾಟನ್‌ಪೇಟೆಯಲ್ಲಿರುವ ಔಷಧಿ ವಿತರಕ ಸಂಸ್ಥೆ, ಡಯೋಗ್ನೊàಸ್ಟಿಕ್ ಸೆಂಟರ್, ಮೆಡಿಕಲ… ಗೂಡ್ಸ್ ಡಿಸ್ಟ್ರಿಬ್ಯೂಷನ್ ಸೇರಿದಂತೆ ಬೆಂಗಳೂರಿನ 7 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಈ ವೇಳೆ ಔಷಧಿ ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದ ಅನೇಕ ದಾಖಲೆ, ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಕಾಮಿನಿ ರಾವ್ ಅವರು ಕೋಟ್ಯಂತರ ರೂ. ತೆರಿಗೆ ವಂಚಿಸಿರುವುದು ಕಂಡು ಬಂದಿದ್ದು, ದಾಖಲೆಗಳ ಪರಿಶೀಲನೆ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಇನ್ನು ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ 21 ಫಾರ್ಮಸಿ ಸಂಸ್ಥೆಗಳ ಮೇಲೂ ದಾಳಿ ನಡೆಸಿದ್ದು, ಇಲ್ಲಿಯೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಟು ಅಮಾನ್ಯದ ಬಳಿಕ ಈ ಸಂಸ್ಥೆಗಳು ನಡೆಸಿರುವ ಕೋಟ್ಯಂತರ ರೂ. ವ್ಯವಹಾರದ ದಾಖಲೆಗಳು, ಕುಟುಂಬ ಸದಸ್ಯರ ಹೆಸರಿನಲ್ಲಿರುವ ಆಸ್ತಿ ಪತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪುತ್ರ, ಸೊಸೆ ವಿಚಾರಣೆ: ಬೆಳಗ್ಗೆ 8 ಗಂಟೆ ಸುಮಾರಿಗೆ ಡಾ. ಕಾಮಿನಿ ರಾವ್ ಅವರ ನಿವಾಸಕ್ಕೆ ಐದು ಇನ್ನೋವಾ ಕಾರುಗಳಲ್ಲಿ ಬಂದ 15 ಮಂದಿ ಐಟಿ ಅಧಿಕಾರಿಗಳು ತೆರಿಗೆ ವಂಚನೆ ಕುರಿತ ದಾಖಲೆಗಳನ್ನು ವಶಪಡಿಸಿಕೊಂಡು ಕಾಮಿನಿ ರಾವ್ ಅವರನ್ನು ವಿಚಾರಣೆ ನಡೆಸಿದರು.
ಬಳಿಕ 10.30ರ ಸುಮಾರಿಗೆ ಕಾಮಿನಿರಾವ್ ಪುತ್ರ ಸಿದ್ದಾರ್ಥ್ ಅವರನ್ನು ಇನೋವಾ ಕಾರಿನಲ್ಲಿ ಕರೆದೊಯ್ದ ಅಧಿಕಾರಿಗಳು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ವಾಪಸ್ ಮನೆಗೆ ಕರೆತಂದರು. ಇದಾದ ನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸೊಸೆಯನ್ನು ಕರೆದೊಯ್ದ ಅಧಿಕಾರಿಗಳು ಒಂದು ಗಂಟೆ ವಿಚಾರಣೆ ನಡೆಸಿ ವಾಪಸ್ ಕರೆತಂದರು.
ಡಾ. ಕಾಮಿನಿ ರಾವ್ ಅವರು ಬಂಜೆತನ ನಿವಾರಣಾ ಆಸ್ಪತ್ರೆ ಆರಂಭಿಸಿದ್ದರು. ಈ ಆಸ್ಪತ್ರೆ ಇತರೆ ಆಸ್ಪತ್ರೆ, ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ. ಇನ್ನೂ ಎಷ್ಟು ಮಂದಿ ಈ ವ್ಯವಹಾರದಲ್ಲಿ ಕೈಜೋಡಿಸಿದ್ದಾರೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಗತ್ಯಬಿದ್ದರೆ ಅವರ ಮನೆಗಳ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಐಟಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.