ಡಾ.ಕೃಷ್ಣಪ್ಪ ಅವರಿಗೆ ಫ್ಲೋರಿಡಾವಿವಿಯಿಂದ ಗೌರವ ಡಾಕ್ಟರೇಟ್
Team Udayavani, Apr 5, 2018, 12:02 PM IST
ಬೆಂಗಳೂರು: ನಗರದ ಮಾಗಡಿ ರಸ್ತೆಯ ವಿದ್ಯಾರಣ್ಯನಗರ ಹಾಗೂ ವಿಜಯನಗರದ ಸಿಎಚ್‌ಬಿಎಸ್ ಲೇಔಟ್‌ನಲ್ಲಿರುವ ಸೇಂಟ್ ಫ್ಲವರ್ ಶಾಲೆಯ ಸಂಸ್ಥಾಪಕ ಡಾ.ಜಿ.ಆರ್.ಕೃಷ್ಣಪ್ಪ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಸಾಧನೆಗಾಗಿ ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ನುರಿತ ಶಿಕ್ಷಣ ತಜ್ಞರಾದ ಜಿ.ಆರ್.ಕೃಷ್ಣಪ್ಪ ಅವರು ದಕ್ಷ ಶಿಕ್ಷಣ ಆಡಳಿತಗಾರರಾಗಿದ್ದಾರೆ. ಸಾಕಷ್ಟು ಮುತುವರ್ಜಿಯಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದರಿಂದ ಶಾಲಾ ಮಕ್ಕಳ ಸಂಖ್ಯೆ 57ರಿಂದ 3500ಕ್ಕೆ ಏರಿಕೆಯಾಗಿದೆ. ಶಾಲೆಯ ಪ್ರಾಂಶುಪಾಲರಾದ ಸಿ.ರೂಪಾ ಅವರು ಶಿಕ್ಷಕ ವೃಂದ ಹಾಗೂ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಶಾಲೆಯ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಶೈಕ್ಷಣಿಕ, ಶಾರೀರಿಕ ಹಾಗೂ ಬೌದ್ಧಿಕ ವಿಕಸನಕ್ಕೂ ನೆರವಾಗುತ್ತಿದ್ದಾರೆ.
ಸೇಂಟ್ ಫ್ಲವರ್ ಇಂಗ್ಲಿಷ್ ಶಾಲೆ 1991ರಲ್ಲಿ ಆರಂಭವಾಗಿದ್ದು, ಸದ್ಯ ಮಾಗಡಿ ರಸ್ತೆಯ ವಿದ್ಯಾರಣ್ಯನಗರ ಹಾಗೂ ವಿಜಯನಗರದ ಸಿಎಚ್‌ಬಿಎಸ್ ಲೇಔಟ್‌ನಲ್ಲಿ ಶಾಲೆಗಳು ನಡೆಯುತ್ತಿವೆ. 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಧುನಿಕ ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ವಿಭಾಗ ಹೊಂದಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತವೆನಿಸಿದೆ.
ನುರಿತ ಶಿಕ್ಷಕ ವರ್ಗವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ.
ಪ್ರತಿ ವರ್ಷ ಮೇ ತಿಂಗಳಲ್ಲಿ ತಜ್ಞರಿಂದ ವಿಶೇಷ ತರಬೇತಿ ಕೊಡಿಸುವ ವ್ಯವಸ್ಥೆಯನ್ನು ಶಾಲೆ ಕಲ್ಪಿಸಿದೆ. ಪ್ರತಿ ತಿಂಗಳು ಶಿಕ್ಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿಯ ಪರಾಮರ್ಶೆ ಕೂಡ ನಡೆಯುತ್ತದೆ. ವರ್ಷದಲ್ಲಿ ಆರು ಬಾರಿ ಪೋಷಕರ ಜೊತೆಗೆ ಚರ್ಚಿಸುವ ವ್ಯವಸ್ಥೆ ಇದೆ. ಜತೆಗೆ ಪೋಷಕರ ಸಲಹೆ, ಅಭಿಪ್ರಾಯವನ್ನು ಪಡೆಯುತ್ತದೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಪ್ರತಿಶತ ಶೇ.95ಕ್ಕಿಂತ ಹೆಚ್ಚು ಗರಿಷ್ಠ ಅಂಕ ಗಳಿಸುತ್ತಿರುವುದು ಶಾಲೆಯ ಹಿರಿಮೆ ಹೆಚ್ಚಿಸಿದೆ.
ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನದಲ್ಲಿರುವ ಹಿರಿಯ ವಿದ್ಯಾರ್ಥಿಗಳನ್ನು ಶಾಲೆಯ ಸಭೆ, ಸಮಾರಂಭಗಳಿಗೆ ಆಹ್ವಾನಿಸಿ ಸನ್ಮಾನಿಸುವ ಪದ್ಧತಿಯನ್ನು ಶಾಲೆ ರೂಢಿಸಿಕೊಂಡಿದೆ. ಒಟ್ಟಾರೆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಶಾಲೆ
ಮೊದಲ ಆದ್ಯತೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.