ಡಾ.ಸುಧಾ ಮೂರ್ತಿ ವರ್ಷದ ವ್ಯಕ್ತಿ


Team Udayavani, Jan 1, 2019, 6:42 AM IST

dr-sudha.jpg

ಬೆಂಗಳೂರು: ಪತ್ರಕರ್ತರ ಬರಹಗಳಿಗೆ ಮೌಲ್ಯ ಹೆಚ್ಚಿದ್ದು, ಅವರ ವಿಶ್ಲೇಷಣೆಗಳು ಸದಾ ಸಮಾಜ ಮುಖೀಯಾಗಿರಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ಪ್ರಸ್‌ಕ್ಲಬ್‌ನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರಿಗೆ 2018ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ಮತ್ತು 13 ಮಂದಿ ಹಿರಿಯ ಪತ್ರಕರ್ತರಿಗೆ ಪ್ರಸ್‌ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಾಧ್ಯಮದ ಯಾವಗಲೂ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಪತ್ರಕರ್ತರು ಇತರರಿಗೆ ಮಾದರಿಯಾಗಿದ್ದು, ಅವರ ನಡೆಯನ್ನು ಸಮಾಜ ಗಮನಿಸುತ್ತಿರುತ್ತದೆ. ಆದರೆ, ಇತ್ತಿಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಕಲಬೆರೆಕೆಯಾಗುತ್ತಿದ್ದು ನೈಜತೆ ಮಾಯಾವಾಗುತ್ತಿದೆ. ಒಳ್ಳೆಯದನ್ನು ತೋರುವ ಪ್ರವೃತ್ತಿಗಿಂತಲೂ ಕೆಟ್ಟದನ್ನೆ  ಹೆಚ್ಚಾಗಿ ಬಿಂಬಿಸಲಾಗುತ್ತಿದೆ.

ಸಮಾಜದ ಅಭಿಪ್ರಾಯವನ್ನು ಪ್ರತಿಬಿಂಬಿಸುವ ಕೆಲಸವನ್ನು ಮಾಧ್ಯಮಗಳು ಇನ್ನಷ್ಟು ಪ್ರಬಲವಾಗಿ ಮಾಡಬೇಕಿದೆ. ಕೆಲ ವಿಚಾರಗಳನ್ನು ಸಮಾಜಕ್ಕೆ ಮುಟ್ಟಿಸುವುದರಲ್ಲಿ ಹಿಂದೇಟು ಹಾಕುತ್ತಿದ್ದಿ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿವಿಮಾತು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಪ್ರಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶಣೈ, ಪ್ರಸ್‌ಕ್ಲಬ್‌ ನೂತನ ಕಟ್ಟಡ ಅಡಿಪಾಯ ಕಾಮಗಾರಿಗೆ ಸರ್ಕಾರವು ವಾರ್ತಾ ಇಲಾಖೆಯಿಂದ 5 ಕೋಟಿ ರೂ. ನೀಡಿದೆ. ಹೀಗಾಗಿ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು. ಬೆಂಗಳೂರು ಪ್ರಸ್‌ಕ್ಲಬ್‌ಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಇಎಸ್‌ ಕಾಲೇಜು ಸಮೀಪ ಒಂದು ಎಕರೆ ಜಮೀನು ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಕಟ್ಟಡದ ಅಡಿಪಾಯ ಕಾರ್ಯ ನಡೆಯಲಿದೆ ಎಂದರು.

ಹಿರಿಯ  ಪತ್ರಕರ್ತರಾದ ತಿಮ್ಮಪ್ಪ ಭಟ್‌, ರವಿ ಹೆಗಡೆ, ವೆಂಕಟನಾರಾಯಣ್‌, ಕೆ.ವಿ.ಪ್ರಭಾಕರ್‌, ರಾಮಣ್ಣ ಎಚ್‌.ಕೋಡಿಹೊಸಹಳ್ಳಿ, ಎ.ಬಾಲಚಂದ್ರ, ಶಿವಾಜಿ ಗಣೇಶನ್‌, ತುಂಗರೇಣುಕ, ಡಾ.ರಾಜಶೇಖರ ಹತಗುಂದಿ, ಡಿ.ಸಿ.ಗಣೇಶ್‌, ವೇದಂ ಜಯಶಂಕರ್‌, ರಾಜಶೇಖರ ಅಬ್ಬೂರು, ಕೆ.ಬದ್ರುದ್ದೀನ್‌ ಮಾಣಿ ಅವರಿಗೆ ಪ್ರಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ವೇಳೆ ಪ್ರಸ್‌ಕ್ಲಬ್‌ನಲ್ಲಿ 30 ವರ್ಷ ಗಳ ಕಾಲ ಸೇವೆ ಸಲ್ಲಿಸಿದ ಶಿವರುದ್ರಪ್ಪ ಮತ್ತು ಭೈರಗೌಡ ಅವರನ್ನು ಪ್ರಸ್‌ಕ್ಲಬ್‌ ವತಿಯಿಂದ ಸನ್ಮಾನಿಸಲಾಯಿತು

ಪ್ರಶಸ್ತಿಗಳು ಜವಬ್ದಾರಿ ಹೆಚ್ಚಿಸುತ್ತವೆ – ಡಾ.ಸುಧಾಮೂರ್ತಿ: ಪ್ರಸ್‌ಕ್ಲಬ್‌ ಬೆಂಗಳೂರು ನೀಡುವ 2018ನೇ ಸಾಲಿನ “ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇನ್ಫೋಸಿಸ್‌ ಪ್ರತಿಪಾuನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು, ಪ್ರಶಸ್ತಿಗಳು ಸಾಮಾಜಿಕ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಯಾರೋ ಗಳಿಸಿದ್ದನ್ನು ನಾನು ಸಾಮಾಜ ಸೇವೆಗೆ ಉಪಯೋಗಿಸುತ್ತಿದ್ದೇನೆ. ಈ ಪ್ರಶಸ್ತಿ ನನಗೆ ಸಂದ ಪ್ರಶಸ್ತಿ ಅಲ್ಲ ಸಮಾಜ ಸೇವೆಗೆ ಸಂದ ಪುರಸ್ಕಾರ. ಮಾಧ್ಯಮಗಳು ನನ್ನ ಮೇಲೆ ತಾಯಿಗೆ ಮಕ್ಕಳು ನೀಡುವ ಅಕ್ಕರೆ ತೋರುತ್ತಿವೆ. ಇದಕ್ಕೆ ನಾನು ಚಿರಋಣಿಯಾಗಿದ್ದು, ನನ್ನ ಸಮಾಜ ಸೇವೆ ಹೀಗೆ ಮುಂದುವರಿಯಲಿದೆ ಎಂದು ಹೇಳಿದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.