Sewage water: ನಿರ್ವಹಣೆಯಿಲ್ಲದೆ ವ್ಯರ್ಥವಾಗುತ್ತಿದೆ ಒಳಚರಂಡಿ ನೀರು
Team Udayavani, Oct 10, 2023, 10:46 AM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಳಚರಂಡಿಗಳ ನಿರ್ವಹಣೆ ಇಲ್ಲದೆ ಕೆಲವು ಕಡೆ ಕೊಳಚೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ಇದಕ್ಕೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ನಾಗರಿಕರ ಆರೋಪವಾಗಿದೆ.
ಬೆಂಗಳೂರು ಮಹಾ ನಗರದ ಪ್ರಮುಖ ಕೊರತೆಗಳಲ್ಲಿ ಒಳಚರಂಡಿ ಸಮಸ್ಯೆಯೂ ಒಂದು. ಐಟಿ-ಬಿಟಿ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಮಳೆ ಬಂದರೆ ಒಳಚರಂಡಿಗಳಿಂದ ನೀರು ಉಕ್ಕಿ ರಸ್ತೆಗೆ ಹರಿದು ವ್ಯರ್ಥವಾಗುತ್ತದೆ. ಉದ್ಯಾನ ನಗರಿಯಲ್ಲಿ ಪ್ರತಿನಿತ್ಯ 1,440 ಎಂಎಲ್ ಡಿಗೂ ಹೆಚ್ಚಿನ ಕೊಳಚೆ ನೀರು ಉತ್ಪಾದನೆ ಆಗುತ್ತಿದೆ. ಆದರೆ, ಸಂಸ್ಕರಣಾ ಸಾಮರ್ಥ್ಯ ಇರುವುದು 1,372.5 ಎಂಎಲ್‌ಡಿ ಮಾತ್ರ. ಉಳಿದ ನೀರು ವ್ಯರ್ಥವಾಗಿ ನಗರದ ಹೊರಭಾಗಕ್ಕೆ ಹರಿದು ಹೋಗುತ್ತದೆ. ಈ ನೀರನ್ನು ಶುದ್ಧೀಕರಿಸಿ ಬಳಕೆ ಉಪಯೋಗಿಸಿಕೊಂಡರೆ ಅನುಕೂಲವಾಗುತ್ತದೆ. ವರ್ಷದಿಂದ ವರ್ಷಕ್ಕೆ ಕೊಳಚೆ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಇದರ ನಿರ್ವಹಣೆಯೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇದರ ನಿರ್ವಹಣೆಯಲ್ಲಿ ವೈಫಲ್ಯ ಹೊಂದಿದೆ ಎಂಬುದು ಸಾರ್ವಜನಿಕರ ಆರೋಪ.
ಶುದ್ಧೀಕರಣ ಘಟಕಕ್ಕೆ ನೀರು ಹೋಗುತ್ತಿಲ್ಲ: ಬೆಂಗಳೂರಿನಲ್ಲಿ ಒಳಚರಂಡಿ ಮೂಲಕ ಕೊಳಚೆ ನೀರು ಸಾಗಿಸಲು 3,300 ಕಿ.ಮೀ. ಉದ್ದದ ಪೈಪ್ ಲೈನ್ ಹಾಕಲಾಗಿದೆ. ಆದರೆ, ಶುದ್ಧೀಕರಣ ಘಟಕಗಳಿಗೆ ಸಂಪರ್ಕ ಕಲ್ಪಿಸುವ ಪೈಪ್‌ಗ್ಳು 40 ರಿಂದ 50 ವರ್ಷ ಹಳೆಯದಾಗಿವೆ. ಬಹುತೇಕ ಕಡೆಗಳಲ್ಲಿ ಒಳಚರಂಡಿಗಳ ಅತಿಕ್ರಮಣವಾಗಿದೆ. ಜೊತೆಗೆ ನಿರ್ವಹಣೆಯಿಲ್ಲದೇ ಒಳಚರಂಡಿ ಪೈಪ್ ಒಡೆದು ಹೋಗಿರುವುದು, ತುಕ್ಕು ಹಿಡಿದಿರು ವುದು ಕಂಡು ಬಂದಿದೆ.
ಮತ್ತೂಂದೆಡೆ ಈ ತ್ಯಾಜ್ಯ ನೀರು ನೇರ ಕೆರೆ ಸೇರಿ ಸಂಪೂರ್ಣ ಕಲ್ಮಶವಾಗುತ್ತಿದೆ. ಬೆಂಗಳೂರಿನ ಮೈಸೂ ರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆಗಳ ಅಡ್ಡ ರಸ್ತೆಗಳಲ್ಲಿ ಅಲ್ಲಲ್ಲಿ ಒಳಚರಂಡಿ ಮ್ಯಾನ್‌ಹೋಲ್ ತೆರೆದಿದ್ದು, ಕೊಳಚೆ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಇನ್ನು ಒಳಚರಂಡಿ ಮಾರ್ಗಕ್ಕೆ ಮಳೆ ನೀರಿನ ಸಂಪರ್ಕ ನಿಷೇಧಿಸಲಾಗಿದೆ. ಆದರೂ, ಕಟ್ಟಡ, ಮನೆಗಳ ಮಳೆನೀರು, ಕಸವನ್ನು ಒಳಚರಂಡಿಗೆ ಹಾಕುತ್ತಿರುವುದು ಮಂಡಳಿ ಗಮನಕ್ಕೆ ಬಂದಿದೆ. ಅಕ್ರಮವಾಗಿ ಮಳೆನೀರು ಒಳಚರಂಡಿಗೆ ಹರಿಯಬಿಡುವುದರಿಂದ ಮ್ಯಾನ್ ಹೋಲ್‌ಗಳಲ್ಲಿ ತ್ಯಾಜ್ಯ ನೀರಿನ ಸಾಮರ್ಥ್ಯ ಹೆಚ್ಚಾಗಿ ಉಕ್ಕಿ ಹರಿದು ರಸ್ತೆಗೆ ಬರುತ್ತಿವೆ. ಇತ್ತೀಚೆಗೆ ಇಂತಹ 9 ಸಾವಿರ ಕಟ್ಟಡಗಳ ಸಂಪರ್ಕ ಕಡಿತಗೊಳಿಸಲಾಗಿದೆ.
1,400 ಎಂಎಲ್‌ಡಿ ವ್ಯರ್ಥ ನೀರು: ಜಲಮಂಡಳಿ ಸಿಬ್ಬಂದಿಗೆ ಇಂತಿಷ್ಟೆ ಸಮಯಕ್ಕೆ ಒಳಚರಂಡಿ ಶುಚಿಗೊಳಿಸಬೇ ಕೆಂಬ ನಿಯ ಮಗಳಿಲ್ಲ. ಹೀಗಾಗಿ ಅವರೂ ಈ ಬಗ್ಗೆ ತಲೆಕೆಡಿಸಿ ಕೊಳ್ಳದೇ ಹಲವು ವರ್ಷಗಳಿಗೊಮ್ಮೆ ನಿರ್ವಹಣೆ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಇದಲ್ಲದೇ, ಕೋರಮಂಗಲ, ಚಳ್ಳ ಘಟ್ಟ, ಹೆಬ್ಟಾಳ ಮತ್ತು ವೃಷಭಾವತಿ ಕಣಿವೆಗಳಲ್ಲಿ 1,400 ಎಂಎಲ್ ಡಿ ವ್ಯರ್ಥ ನೀರು ಹರಿದು ಹೋಗುತ್ತಿದೆ. ಬೆಂಗಳೂರಿ ನಲ್ಲಿ ಸಾಕಷ್ಟು ಕೊಳವೆ ಬಾವಿ ಗಳಿದ್ದು, ಇವುಗಳಿಂದ ಎಷ್ಟು ನೀರು ಪಡೆಯಲಾಗುತ್ತದೆ ಎಂಬ ವೈಜ್ಞಾನಿಕ ಅಂದಾಜು ಇಲ್ಲದಿರುವುದರಿಂದ ಕೊಳಚೆ ನೀರಿನ ಪ್ರಮಾಣ ನಿಖರವಾಗಿ ಅಳತೆಮಾಡಲು ಸಾಧ್ಯವಾ ಗುತ್ತಿಲ್ಲ ಎಂಬುದು ಜಲಮಂಡಳಿ ಅಧಿಕಾರಿಗಳ ವಾದ.
33 ಕೊಳಚೆ ನೀರು ಸಂಸ್ಕರಣ ಘಟಕ : ಬೆಂಗಳೂರಿನಲ್ಲಿ ಒಟ್ಟು 8,387 ಕಿ.ಮೀ.ಉದ್ದದ ಒಳ ಚರಂಡಿ ವ್ಯವಸ್ಥೆ ಇದೆ. 2.69 ಲಕ್ಷ ಮ್ಯಾನ್ ಹೋಲ್‌ಗಳಿವೆ. 10 ಲಕ್ಷ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಒದಗಿಸಲಾಗಿದೆ. ವ್ಯವಸ್ಥೆ ನೋಡಿಕೊಳ್ಳುವ 175 ಯಂತ್ರಗಳಿವೆ. 40 ಶೋಧನಾ ಯಂತ್ರ (ಡಿಸ್ಟಿಲಿಂಗ್ ಮೆಷಿನ್)ಗಳಿವೆ. ಇನ್ನು ಒಳಚರಂಡಿ ವ್ಯವಸ್ಥೆಯ ಲ್ಯಾಟರಲ್‌ಗಳು (300 ಮಿಲಿ ಮೀ. ವ್ಯಾಸಕ್ಕೂ ಚಿಕ್ಕದಾದ) 6905.7 ಕಿ.ಮೀ. ಇದೆ. 1,481 ಕಿ.ಮೀ.ಒಳಚರಂಡಿ ಕೊಳವೆಗಳು (300 ಮಿ.ಮೀ ವ್ಯಾಸಕ್ಕಿಂತ ಹೆಚ್ಚಿನದ್ದು) ನಿರ್ಮಿಸಲಾಗಿದೆ. ಒಳಚರಂಡಿ ನೀರು ಸಂಸ್ಕರಿಸಲೆಂದೇ 33 ಘಟಕಗಳಿವೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.
–ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.