ಗಮನ ಸೆಳೆದ “ಕಾಂಪೋಸ್ಟ್ ಸಂತೆ’
Team Udayavani, Feb 27, 2017, 12:20 PM IST
ಬೆಂಗಳೂರು: ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ, ವಿಲೇವಾರಿ ಸೇರಿದಂತೆ ಕಸದ ಜನ ಜಾಗೃತಿ ಮೂಡಿಸುವ ಸಂಬಂಧ ಪ್ರಕಾಶ್‌ನಗರದ ಗಾಯತ್ರಿದೇವಿ ಉದ್ಯಾನ ದಲ್ಲಿ ಭಾನುವಾರ ಬಿಬಿಎಂಪಿಯಿಂದ ಎರಡನೇ “ಕಾಂಪೋಸ್ಟ್ ಸಂತೆ’ಗೆ ಚಾಲನೆ ನೀಡಲಾಯಿತು.
ಕಳೆದ ವಾರ ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನಲ್ಲಿ ಈ ವಿಶಿಷ್ಟ ಸಂತೆ ನಡೆದಿತ್ತು. ಸಾವಿರಾರು ಜನ ಇದಕ್ಕೆ ಸಾಕ್ಷಿಯಾಗಿದ್ದರು. ಈ ಬಾರಿ ಪ್ರಕಾಶ್‌ನಗರದಲ್ಲಿ ಮತ್ತಷ್ಟು ವಿನೂತನ ಪ್ರಯೋಗಗಳ ಮಾದರಿಗಳಿಂದ ಸಂತೆ ಗಮನಸೆಳೆಯಿತು.
ನಿತ್ಯ ತಲೆನೋವಾಗಿ ಪರಿಣಮಿಸಿ ರುವ ಕಸವನ್ನು ರಸವಾಗಿ ಪರಿವರ್ತಿ ಸುವುದು ಹೇಗೆ? ಹೀಗೆ ಕಸದಿಂದ ತಯಾರಿಸಿದ ಗೊಬ್ಬರಕ್ಕೆ ಮಾರುಕಟ್ಟೆ ಎಲ್ಲಿದೆ? ಕಡಿಮೆ ಖರ್ಚಿನಲ್ಲಿ ಗೊಬ್ಬರ ತಯಾರಿಕೆ ಹೇಗೆ ಇಂತಹ ಹತ್ತುಹಲವು ಗೊಂದಲಗಳನ್ನು ಈ ಸಂತೆ ನಿವಾರಿಸಿತು.
ಈ ವೇಳೆ ತಜ್ಞರಾದ ವಾಣಿ ಮೂರ್ತಿ, ಮೀನಾಕ್ಷಿ ಭರತ್ ಮತ್ತಿತರರು ಕಸದಿಂದ ಕಾಂಪೋಸ್ಟ್ ಹಾಗೂ ಜೈವಿಕ ಅನಿಲ ಉತ್ಪಾದಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ದರು. ಈ ಸಂದರ್ಭದಲ್ಲಿ ಸ್ಮಾರ್ಟ್ ಯಂತ್ರಗಳು, ಕಸದಲ್ಲೇ ಅರಳಿದ ಹೂವುಗಳು, ಕಸದಿಂದ ತಯಾರಿಸಿದ ಗೊಬ್ಬರ ಬಳಸಿ ಟೆರೇಸ್ ಗಾರ್ಡನ್, ತರಕಾರಿ ಬೆಳೆಯುವ ಪದ್ಧತಿಯನ್ನು ತಿಳಿಸಿಕೊಡಲಾಯಿತು.
ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಿ, ಆ ಕಸದಿಂದ ಅಡಿಗೆ ಅನಿಲ ಅಥವಾ ವಿದ್ಯುತ್ ತಯಾರಿ ಸಬಹುದು ಎಂದು ಜನರಿಗೆ ಮಾಹಿತಿ ನೀಡಲಾಯಿತು. ಸಂತೆಗೆ ಬೆಳಿಗ್ಗೆ 7.30ರ ಸುಮಾರಿಗೆ ಮೇಯರ್ ಮೇಯರ್ ಜಿ. ಪದ್ಮಾವತಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮನೆಯಲ್ಲಿ ಉತ್ಪಾದನೆಯಾಗುವ ಕಸವನ್ನು ಸುಲಭವಾಗಿ ಕಾಂಪೋಸ್ಟ್ ಆಗಿ ಪರಿವರ್ತಿಸಬಹುದು. ಈ ಗೊಬ್ಬರವನ್ನು ಮನೆ ಮುಂದಿನ ಗಿಡ, ಉದ್ಯಾನಗಳಿಗೆ ಹಾಕಬ ಹುದು. ಅಷ್ಟೇ ಅಲ್ಲ, ಗೊಬ್ಬರವನ್ನು ಮಾರಾಟ ಮಾಡಬಹುದು.
ಈ ರೀತಿ ಬಹುಪಯೋಗಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ತ್ಯಾಜ್ಯ ಸಮಸ್ಯೆ ಸೃಷ್ಟಿಸುವ ಬದಲು ವೈಜ್ಞಾನಿಕ ವಾಗಿ ವಿಲೇವಾರಿ ಮಾಡಲು ಸಾರ್ವಜನಿಕರು ಮುಂದಾಗಬೇಕು ಎಂದು ಹೇಳಿದರು. ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.