ನಾಣ್ಯ ಬೇಕಿಲ್ಲ, ಸ್ಕ್ಯಾನ್‌ ಮಾಡಿದರೆ ನೀರು ಬರುತ್ತೆ

Team Udayavani, Jul 6, 2023, 2:17 PM IST

ನಾಣ್ಯ ಬೇಕಿಲ್ಲ, ಸ್ಕ್ಯಾನ್‌ ಮಾಡಿದರೆ ನೀರು ಬರುತ್ತೆ

ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 5 ರೂ. ನಾಣ್ಯ ಹಾಕಿಯೇ ನೀರು ಪಡೆಯುವುದು ದೊಡ್ಡ ತಲೆನೋವಾಗಿತ್ತು. ಆದರೆ, ಇನ್ನು ಮುಂದೆ ಕಾಯಿನ್‌ಗಾಗಿ ಹುಡುಕಬೇಕಿಲ್ಲ. ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿ ಕ್ಷಣಮಾತ್ರದಲ್ಲಿ ನೀರು ಪಡೆಯಬಹುದು!

ಬೆಂಗಳೂರು ಸೇರಿದಂತೆ ರಾಜ್ಯದ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಸಹಸ್ರಾರು ಶುದ್ಧ ಕುಡಿಯುವ ನೀರಿನ ಘಟಕವಿದೆ. ಪ್ರತಿದಿನ ನೂರಾರು ಗ್ರಾಹಕರು ಇಲ್ಲಿಗೆ ಭೇಟಿ ನೀಡಿ 5 ರೂ. ಕಾಯಿನ್‌ ಹಾಕಿಯೇ ನೀರು ಪಡೆಯಬೇಕಿತ್ತು. 5 ರೂ. ಕಾಯಿನ್‌ ಇಲ್ಲದೇ ಕುಡಿಯುವ ನೀರಿಗಾಗಿ ಪರದಾಡಿದ ಹಲವು ಉದಾಹರಣೆಗಳಿವೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡಲೆಂದು ಗ್ರಾಹಕ ಸ್ನೇಹಿ ಸ್ಕ್ಯಾನಿಂಗ್‌ ವ್ಯವಸ್ಥೆ ಜಾರಿಗೆ ಬಂದಿದೆ.

ಬೆಂಗಳೂರಿನ ರಾಘವನಗರ, ಮನೋರಾಯನಪಾಳ್ಯ, ಜಕ್ಕೂರು, ಮಲ್ಲತ್ತಹಳ್ಳಿ, ಬೆಳಗಾವಿಯ ಗೋಕಾಕ್‌ ಸೇರಿ 10 ಕಡೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ರುವ 10 ಸಾವಿರಕ್ಕೂ ಅಧಿಕ ಶುದ್ದ ಕುಡಿಯುವ ನೀರಿನ ಘಟಕದ ಮಾಲೀಕರು ತಮ್ಮ ಘಟಕಗಳಿಗೆ ಈ ವ್ಯವಸ್ಥೆ ಅಳವಡಿಸಲು ಮುಂದಾಗಿದ್ದಾರೆ.

ಸ್ಕ್ಯಾನ್‌ ಮಾಡಿ ನೀರು ಪಡೆಯುವುದು ಹೇಗೆ ?: ಶುದ್ಧ ನೀರಿನ ಘಟಕದ ಮುಂದೆ ಕ್ಯೂ ಆರ್‌ ಕೋಡ್‌ ಅಳವಡಿಸಲಾಗಿದೆ. ಅದರ ಕೆಳಗಿರುವ ಪೈಪಿನ ಕೆಳಗೆ ನೀರಿನ ಕ್ಯಾನ್‌ ಇಟ್ಟು ಮೊಬೈಲ್‌ನಲ್ಲಿ ಗೂಗಲ್‌ ಪೇ, ಫೋನ್‌ ಪೇ ಸೇರಿ ಯಾವುದೇ ಯುಪಿಐ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ಆಗ ಮೊಬೈಲ್‌ನಲ್ಲಿ ತೋರಿಸುವ 5 ರೂ. ಅನ್ನು ಪೇ ಮಾಡಿದರೆ ಸಾಕು. ತಕ್ಷಣ ಕ್ಯಾನ್‌ಗೆ ನೀರು ತುಂಬಲಿದೆ. ಅಂಗಡಿಗಳಲ್ಲಿ ಪೇಟಿಎಂನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ವ್ಯಾಲೆಟ್‌ಗೆ ದುಡ್ಡು ಜಮೆಯಾದ ತಕ್ಷಣ ವಾಯಿಸ್‌ ನೋಟಿಫಿಕೇಶನ್‌ ಬರುವ ಮಾದರಿಯಲ್ಲಿ ಇಲ್ಲೂ ತಂತ್ರಜ್ಞಾನ ಅಳವಡಿಸಲಾಗಿದೆ.

ಒಂದೂವರೆ ವರ್ಷದ ಸಂಶೋಧನೆಯ ಫ‌ಲ: ಡಿಪ್ಲೊಮಾ ಎಂಜಿನಿಯರಿಂಗ್‌, ಬಿಸಿಎ ವ್ಯಾಸಂಗ ಮುಗಿದ ಬಳಿಕ ಹೊಸ ತಂತ್ರಜ್ಞಾನ ಸಂಶೋಧಿಸುವ ಹಂಬಲ ವಿತ್ತು. ಒಂದೂವರೆ ವರ್ಷ ಗಳಿಂದ ನಡೆಸಿದ ಸಂಶೋಧನೆಯ ಫ‌ಲವಾಗಿ ನೀರಿನ ಘಟಕದ ಸ್ಕ್ಯಾನಿಂಗ್‌ ತಂತ್ರಜ್ಞಾನ ಕಂಡು ಹಿಡಿದಿದ್ದೇನೆ. 1 ವರ್ಷ ಗ್ಯಾರಂಟಿ ನೀಡುತ್ತೇವೆ. ದೇಶದಲ್ಲಿ ಈ ಹಿಂದೆ ಕೆಲವು ಸಂಸ್ಥೆಗಳು ಇಂತಹ ವ್ಯವಸ್ಥೆ ಜಾರಿಗೆ ತರಲು ವಿಫ‌ಲ ಯತ್ನ ನಡೆಸಿದೆ ಎನ್ನುತ್ತಾರೆ ಈ ತಂತ್ರಜ್ಞಾನದ ಸಂಶೋಧಕ ಮೋಹನ್‌.

ನೀರಿನ ಘಟಕದ ಯಂತ್ರಕ್ಕೆ ಸಾಫ್ಟ್ವೇರ್‌ ಅಳವಡಿಕೆ : ಸ್ಪೀಕರ್‌ ಬಾಕ್ಸ್‌ಗಳನ್ನು ಪೇಟಿಎಂನವರು ಪೂರೈ ಸುತ್ತಾರೆ. ಇದಕ್ಕೆ ಹೆಚ್ಚುವರಿ ಮಾರ್ಪಾಡು ಮಾಡಿ ಸ್ಪೀಕರ್‌ ಬಾಕ್ಸ್‌ನೊಳಗೆ ಸಿಮ್‌ಕಾರ್ಡ್‌, ಮೈನ್‌ ಬೋರ್ಡ್‌, ಇಂಟರ್‌ನೆಟ್‌ ಪ್ಯಾಕ್‌ ನಂತಹ ವ್ಯವಸ್ಥೆ ಅಳವಡಿಸಲಾಗಿದೆ. ಅದರಿಂದ ಡೇಟಾ ತೆಗೆದುಕೊಳ್ಳುತ್ತೇವೆ. ಇನ್ನು ಕ್ಯೂಆರ್‌ ಕೋಡ್‌ ಅನ್ನು ಕೊಂಚ ಮಾರ್ಪಾಡು ಮಾಡಿ ಅದಕ್ಕೆ ಮುಂಗಡ ದುಡ್ಡು ಹಾಕುತ್ತೇವೆ. ಗ್ರಾಹಕರು 5 ರೂ. ಕಾಯಿನ್‌ ಅನ್ನು ಯಂತ್ರದೊಳಗೆ ಹಾಕಿದಾಗ ನೀರು ಬರುವ ತಂತ್ರಜ್ಞಾನಕ್ಕೆ ಈ ಸಾಫ್ಟ್ವೇರ್‌ ಅನ್ನು ಲಿಂಕ್‌ ಮಾಡಲಾಗಿದೆ. ಕನೆಕ್ಟರ್‌, ಅಡಾಪ್ಟರ್‌ನಂತಹ ಹಲವು ಉಪಕರಣ ಬಳಸಿ ಅಳವಡಿಸಲಾಗುತ್ತದೆ.

ಈ ಹಿಂದೆ ನೀರಿನ ಘಟಕದ ಮುಂದೆ ಜನ 5 ರೂ. ನಾಣ್ಯ ಸಿಗದೇ ಆಗಾಗ ನಮ್ಮಲ್ಲಿ ಚಿಲ್ಲರೆ ಕೇಳುತ್ತಿದ್ದರು. ಇದೀಗ ನಮ್ಮ ಘಟಕದಲ್ಲಿ ಸ್ಕ್ಯಾನರ್‌ ವ್ಯವಸ್ಥೆ ಅಳವಡಿಸಿದ ಮೇಲೆ ಈ ಸಮಸ್ಯೆ ಇಲ್ಲ. ಗ್ರಾಹಕರೂ ಖುಷಿಯಿಂದ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. – ಯೋಗೇಶ್‌, ನೀರಿನ ಘಟಕದ ಮಾಲೀಕ, ರಾಘವನಗರ

 ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.