ತಿಂಗಳೊಳಗೆ ಮನೆ ಮನೆಗೂ ಕುಡಿಯುವ ನೀರು
Team Udayavani, Jul 25, 2017, 11:18 AM IST
ಕೆಂಗೇರಿ: ಜನ ಸಾಮಾನ್ಯರಲ್ಲಿ ಗುಡಿ ಕೈಗಾರಿಕೆಯ ಬಗ್ಗೆ ಆಸಕ್ತಿ ಮೂಡಿಸಿ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲೆಂದು ಪ್ರೋತ್ಸಾಹಿಸಲಾಗುತ್ತಿದೆ ನಾಗರಿಕರು ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನಕ್ಕೆ ಮುಂದಾಗಿ ಶಾಸಕ ಮುನಿರತ್ನ ಹೇಳಿದರು.
ಎಚ್‌ಎಂಟಿ ವಾರ್ಡ್‌ನ ಬಡ ಮಹಿಳೆಯರಿಗೆ ವಿವಿಧ ಯೋಜನೆಯಡಿಯಲ್ಲಿ ಗುಡಿ ಕೈಗಾರಿಕೆ ಪ್ರಾರಂಭಿಸಲು ಚೆಕ್ ವಿತರಿಸಿ ಮಾತನಾಡಿ, 500 ಕುಟುಂಬಗಳಿಗೆ ವಿವಿಧ ಇಲಾಖೆ ವತಿಯಿಂದ ಸಹಾಯಧನದ ಚೆಕ್‌ಗಳನ್ನು ನೀಡಲಾಗುತ್ತಿದ್ದು, ಯೋಜನೆ ಲಾಭ ಪಡೆದು ಪ್ರತಿಯೊಬ್ಬರೂ ಆರ್ಥಿಕವಾಗಿ ಮುಂದೆ ಬರಬೇಕು ಎಂದರು.
ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಸಾವಿರ ಕುಟುಂಬಗಳು ಗುಡಿ ಕೈಗಾರಿಕೆ ಕೈಗೊಳ್ಳಲು ಸಾಲ ಸೌಲಭ್ಯ ನೀಡಲಾಗುವುದು. ಎಲ್ಲ ಜಾತಿಯ ಬಡವರು ವಸತಿಯಿಂದ ವಂಚಿತರಾಗಬಾರದೆಂದು ದೂರದೃಷ್ಟಿಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 4 ಸಾವಿರ ಒಂಟಿ ಮನೆ, ಸಮುದಾಯ, ಮಹಡಿ ಮನೆ ನಿರ್ಮಿಸಿಕೊಡಲಾತ್ತಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಆಶ್ವಾಸನೆ ಈಡೇರಿಸಲಾಗಿದೆ.
ಒಂದು ತಿಂಗಳೊಳಗಾಗಿ ಎಚ್‌ಎಂಟಿ ವಾರ್ಡ್‌ನ ಪ್ರತಿಯೊಂದು ಮನೆ ಮನೆಗೂ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ರಾಜ್‌ಕುಮಾರ್ ಮಾತನಾಡಿ, ವಿಧಾನಸೌಧದಿಂದ ಕೇವಲ 10 ಕಿ.ಮೀ ದೂರದ ಬಂಗಾರಪ್ಪನಗರ, ಚನ್ನಸಂದ್ರ, ಬಡಾವಣೆ ಜನರು ಹಕ್ಕುಪತ್ರ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದರು.
ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಎಲ್ಲ ಬೇಡಿಕೆ ಈಡೇರಿಸಿ ರಾಜ್ಯ ಸರ್ಕಾರ ಬಡವರ, ನೊಂದವರ ರೈತರ ಪರ ಎಂಬುದನ್ನು ತೋರಿಸಿದೆ ಎಂದರು. ಸಮಾಜ ಸೇವಕ ರಮೇಶ್ ಪಟೇಲ್, ಬಿಬಿಎಂಪಿ ಸದಸ್ಯರಾದ ಜಿ.ಮೋಹನ್‌ಕುಮಾರ್, ವೇಲು ನಾಯ್ಕರ್, ಶ್ರೀನಿವಾಸಮೂರ್ತಿ, ಜಿ.ಕೆ.ವೆಂಕಟೇಶ್, ಸಿದ್ದೇಗೌಡ, ವಾರ್ಡ್ ಅಧ್ಯಕÏ ಎಂ.ಮನೋಹರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ