ಹವ್ಯಕ ಮಹಾಸಭಾದ “ಅಮೃತ ಘಳಿಗೆ’
Team Udayavani, Dec 29, 2018, 12:30 AM IST
ಬೆಂಗಳೂರು: ಅಖೀಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರೆಯಿತು. ಅರಮನೆ ಮೈದಾನದಲ್ಲಿ ನಡೆದ ಈ “ಅಮೃತ ಘಳಿಗೆ’ಗೆ ಸಹಸ್ರಾರು ಹವ್ಯಕರು ಸಾಕ್ಷಿಯಾದರು. ಮೂರು ದಿನಗಳ ಕಾಲ ನಡೆಯಲಿರುವ ಈ ಹವ್ಯಕರ ಜಾತ್ರೆಯಲ್ಲಿ ಸಮುದಾಯದ ಕಲೆ-ಸಂಸ್ಕೃತಿ, ಪರಂಪರೆ ಅನಾವರಣಗೊಂಡಿದೆ. ಇದನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಹವ್ಯಕ ಸಮುದಾಯ ಅರಮನೆ ಮೈದಾನಕ್ಕೆ ಹರಿದುಬರುತ್ತಿದೆ. ಈ ಅಪರೂಪದ ಉತ್ಸವವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉದ್ಘಾಟಿಸಿದರು. ಇದೇ ವೇಳೆ ಒಂದೇ ಪ್ರಕಾಶನದಿಂದ ಏಕಕಾಲದಲ್ಲಿ ನೂರು ಪುಸ್ತಕಗಳನ್ನು ಪ್ರಕಟಿಸಿ ಒಮ್ಮೆಲೆ ಬಿಡುಗಡೆಗೊಳಿಸುವ ಮೂಲಕ ಲಿಮ್ಕಾ ದಾಖಲೆಗೂ ಈ ವೇದಿಕೆ ಸಾಕ್ಷಿಯಾಯಿತು.
ಭವಿಷ್ಯದ ಚಿಂತನೆ ಇರಲಿ; ಶಿವರಾಜ್ ಪಾಟೀಲ್
ಉತ್ಸವ ಉದ್ಘಾಟಿಸಿ ಮಾತನಾಡಿದ ನ್ಯಾ.ಶಿವರಾಜ್ ಪಾಟೀಲ್, “75 ಸಂವತ್ಸರಗಳನ್ನು ಪೂರೈಸಿರುವ ಸಮಾಜದ ಸಂಭ್ರಮದ ಕ್ಷಣಗಳಿವು. ಈವರೆಗಿನ ಸಾಧನೆ ಬಗ್ಗೆ ಸಮಾಜ ಸಂಭ್ರಮಾಚರಣೆ ಮಾಡಲಿ. ಇದರ ಬೆನ್ನಲ್ಲೇ ಭವಿಷ್ಯದ ಪರಿಕಲ್ಪನೆಯ ಬಗ್ಗೆಯೂ ಗಂಭೀರ ಚಿಂತನೆ ಮಾಡುವ ಅವಶ್ಯಕತೆ ಇದೆ. ನೂರಕ್ಕೆ ನೂರರಷ್ಟು ಸಾಕ್ಷರತೆಯನ್ನು ಹೊಂದಿದ ಹವ್ಯಕರು ಇತರೆ ಸಮಾಜಗಳಿಗೂ ಅದನ್ನು ವಿಸ್ತರಿಸಬೇಕು ಎಂದು ಕಿವಿಮಾತು ಹೇಳಿದರು. “ಎಲ್ಲ ಸಮಾಜಗಳೂ ಸಂಘಟನೆಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಕುಚಿತ ಮನೋಭಾವ ಬೇಡ. ಸಮಾಜಗಳು ಬೆಳೆದರೆ, ದೇಶಗಳ ಬೆಳೆಯುತ್ತದೆ. ಆದರೆ, ಆ ಸಂಘಟನೆ ಮತ್ತೂಂದು ಸಮಾಜದ ಬೆಳವಣಿಗೆಗೆ ಅಡ್ಡಿಯಾಗಬಾರದು. ಜನರ ಮಧ್ಯೆ ಪ್ರೀತಿ, ಸಹಿಷ್ಣುತೆಯ ಸೇತುವೆ ಕಟ್ಟುವಂತಾಗಬೇಕೆ ಹೊರತು, ದ್ವೇಷದ ಗುಡಿಗಳನ್ನು ಕಟ್ಟುವುದು ಬೇಡ’ ಎಂದರು.
“ಸಮಾಜಕ್ಕೆ ನಾನು ಋಣಿ’
ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಯಾವೊಂದು ಸಮುದಾಯಕ್ಕೆ ಸಂಘಟನೆ ಮುಖ್ಯ. ಹಾಗೂ ಈ ಎಲ್ಲ ಸಂಘಟನೆಗಳ ಗುರಿ ರಾಷ್ಟ್ರದ ಅಭಿವೃದ್ಧಿ ಆಗಿರಬೇಕು. ಈ ನಿಟ್ಟಿನಲ್ಲಿ ಹವ್ಯಕ ಸಮುದಾಯ ಕೆಲಸ ಮಾಡಿಕೊಂಡು ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ಹವ್ಯಕ ಸಮಾಜದ ಪಾತ್ರ ದೊಡ್ಡದು. ಯಾವಾಗಲು ನನ್ನನ್ನು ಬೆಂಬಲಿಸುತ್ತ ಬಂದ ಈ ಸಮಾಜಕ್ಕೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.
ಮಾಜಿ ಸಚಿವ ಪಿಜಿಆರ್ ಸಿಂಧ್ಯ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಹತ್ತಾರು ಖಾತೆಗಳನ್ನು ನಿಭಾಯಿಸಿದ್ದೇನೆ. ಅದು ರಾಮಕೃಷ್ಣ ಹೆಗಡೆ ಅವರ ಕೃಪೆ. ಕಾಂಗ್ರೆಸ್ ಅನ್ನು ಒಪ್ಪದ ಏಕೈಕ ಕಾರಣಕ್ಕೆ ಅರ್ಹತೆ ಇದ್ದರೂ ರಾಮಕೃಷ್ಣ ಹೆಗಡೆ ಅವರು ಪ್ರಧಾನಿ ಹುದ್ದೆ ಏರಲು ಸಾಧ್ಯವಾಗಲಿಲ್ಲ. ಇವರಂತಹ ಅನೇಕ ಅನಘ ರತ್ನಗಳನ್ನು ಹವ್ಯಕ ಸಮುದಾಯ ಕೊಡುಗೆ ನೀಡಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪ್ರತಿಭೆಗಳನ್ನು ಗುರುತಿಸಿ, ರಾಜಕೀಯ ಶಕ್ತಿ ತುಂಬುವ ಕೆಲಸ ಸಮಾಜದಲ್ಲಿ ಆಗಬೇಕಾಗಿದೆ ಎಂದು ತಿಳಿಸಿದರು. ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನನ್ನ ಜೀವಮಾನದಲ್ಲಿ ವಿವಿಧ ಉನ್ನತ ಹುದ್ದೆಗಳು ನನಗೆ ಒದಗಿಬಂದವು. ಅದರ ಹಿಂದೆ ಹವ್ಯಕರ ಕೊಡುಗೆ ಇದೆ. ಸಹಕಾರ ಚಳವಳಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯಲು ಹವ್ಯಕರು ಕಾರಣ. ಅಪರಾಧರಹಿತ ಸಮುದಾಯ ಹವ್ಯಕರದ್ದು ಎಂದು ಶ್ಲಾಘಿಸಿದರು.
ಬ್ರಾಹ್ಮಣರನ್ನು ಬಯ್ಯುವುದು ಕೆಲವರಿಗೆ ಶೋಕಿ ಆಗಿ ಬಿಟ್ಟಿದೆ. ಈ ಪ್ರವೃತ್ತಿ ಸರಿ ಅಲ್ಲ. ರಾಜಕೀಯ ಉದ್ದೇಶಕ್ಕಾಗಿ ಹಾಗೂ ಪ್ರಚಾರಕ್ಕಾಗಿ
ಬ್ರಾಹ್ಮಣರನ್ನು ಅನಗತ್ಯವಾಗಿ ಬೈಯ್ಯುತ್ತಾರೆ. ಆದರೆ, ನಾನು ಸಂಕಷ್ಟದಲ್ಲಿದ್ದಾಗ ನನ್ನ ನೆರವಿಗೆ ಬಂದಿದ್ದೇ ಹವ್ಯಕ ಸಮಾಜ. ಆತ್ಮಹತ್ಯೆ
ಮಾಡಿಕೊಳ್ಳಬೇಕೆಂಬ ಸ್ಥಿತಿಯಲ್ಲಿದ್ದ ನನ್ನನ್ನು ಇಂದು ಬದುಕಿಸಿದವರೇ ಹವ್ಯಕರು.
● ಹರತಾಳು ಹಾಲಪ್ಪ, ಮಾಜಿ ಸಚಿವ.
ನಾವು ಜಾತಿವಾದಿಗಳಾಗಬಾರದು. ಇದು ಸಮಾಜದ ಸಮಷ್ಟೀಕರಣದ ದೃಷ್ಟಿಯಿಂದ ಒಳ್ಳೆಯದೂ ಅಲ್ಲ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಇದು ಅನಿವಾರ್ಯ ಆಗುತ್ತಿದೆ. ಆದ್ದರಿಂದ ಬುದ್ಧಿವಂತರಾದ ಬ್ರಾಹ್ಮಣರು ಬುದ್ಧಿವಂತಿಕೆಯಿಂದ ಬದುಕುವುದನ್ನು ಕಲಿಯಬೇಕು.
ಶಿವರಾಮ ಎಂ. ಹೆಬ್ಟಾರ್ ಯಲ್ಲಾಪುರ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ
ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.