ಇನ್‌ಲ್ಯಾಂಡ್ ಪ್ರಾಪರ್ಟಿ ಮೇಳಕ್ಕೆ ಚಾಲನೆ
Team Udayavani, Aug 9, 2018, 1:07 PM IST
ಮಂಗಳೂರು: ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇನ್‌ಲ್ಯಾಂಡ್ ನೇತೃತ್ವದಲ್ಲಿ ಕಾರ್ಪೋರೇಷನ್ ಬ್ಯಾಂಕ್ ಸಹಯೋಗದೊಂದಿಗೆ ನಗರದ ನವಭಾರತ್ ವೃತ್ತ ಬಳಿ ಇರುವ ಇನ್‌ಲ್ಯಾಂಡ್ ಆರೆ°ಟ್‌ನಲ್ಲಿ ಆಯೋಜಿಸಲಾದ ಪ್ರಾಪರ್ಟಿ ಮೇಳಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಯೇನಪೊಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ ವೈ. ಅಬ್ದುಲ್ಲ ಕುಂಞಿ ಮಾತನಾಡಿ, ಸ್ಮಾರ್ಟ್ ಸಿಟಿಯಾಗಿ ಗುರುತಿಸಿಕೊಂಡಿರುವ ಮಂಗಳೂರಿಗೆ ಇನ್‌ಲ್ಯಾಂಡ್ ಸಂಸ್ಥೆಯು ಕೊಡುಗೆ ನೀಡುತ್ತಿದೆ. ಅನಿವಾಸಿ ಭಾರತೀಯರು ಇತ್ತೀಚಿನ ದಿನಗಳಲ್ಲಿ ತವರಿಗೆ ಮರಳುತ್ತಿದ್ದು, ಈ ಸಮಯದಲ್ಲಿ ಪ್ರಾಪರ್ಟಿ ಮೇಳ ಆಯೋಜನೆ ಸಂತಸ ತಂದಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದೈಜಿವರ್ಲ್ಡ್ಸಂ ಸ್ಥೆಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತನಾಡಿ, ಮಂಗಳೂರು ನಗರದಲ್ಲಿ ಮೊದಲ ಬಾರಿಗೆ 25 ಅಂತಸ್ತಿನ ವಸತಿ ಸಮುತ್ಛಯ ಪೂರ್ಣಗೊಳಿಸಿದ ಕೀರ್ತಿ ಇನ್‌ಲ್ಯಾಂಡ್ ಸಂಸ್ಥೆಗೆ ಸಲ್ಲುತ್ತದೆ. ಹೊಸತಾಗಿ ಅಪಾರ್ಟ್‌ಮೆಂಟ್ ಕೊಂಡುಕೊಳ್ಳುವವರಿಗೆ ಈ ರೀತಿಯ ಪ್ರಾಪರ್ಟಿ ಮೇಳ ಉಪಯೋಗವಾಗಲಿದೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಮೇಳ ಆಯೋಜನೆ ಮಾಡುವಂತೆ ಸಲಹೆ ನೀಡಿದರು.
ಇನ್‌ಲ್ಯಾಂಡ್ ಬಿಲ್ಡರ್ ಮತ್ತು ಡೆವಲಫರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮದ್ ಮಾತನಾಡಿ, ಗ್ರಾಹಕರ ಬಜೆಟ್ ತಕ್ಕಂತೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೌಲಭ್ಯವಿರುವ, ಗುಣಮಟ್ಟದ ಅಪಾರ್ಟ್‌ಮೆಂಟ್‌ಗಳನ್ನು ಒದಗಿಸುತ್ತಿದ್ದೇವೆ ಎಂದರು.
ಹಿರಿಯ ನ್ಯಾಯವಾದಿ ಎಂ.ಪಿ. ಶೆಣೈ, ಕಾರ್ಪೋರೇಷನ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಎ.ಕೆ. ವಿನೋದ್, ಇನ್‌ಲ್ಯಾಂಡ್ ಬಿಲ್ಡರ್ ಮತ್ತು ಡೆವಲಪರ್ ಸಂಸ್ಥೆಯ ನಿರ್ದೇಶಕ ಮೆಹ್‌ರಾಜ್ ಯೂಸೂಫ್, ಸಂಸ್ಥೆಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಉಲ್ಲಾಸ್ ಕದ್ರಿ ಸಹಿತ ಮತ್ತಿತರರು ಉಪಸ್ಥಿತರಿದ್ದರು. ಬೆಂಗಳೂರಿನ ಯಲಹಂಕ, ಉಳ್ಳಾಲ,
ಮಂಗಳೂರು, ಪುತ್ತೂರಿನಲ್ಲಿನ ಇನ್‌ಲ್ಯಾಂಡ್ ಸಂಸ್ಥೆಯ ಪ್ರಾಜೆಕ್ಟ್ಗಳನ್ನು ಪ್ರಾಪರ್ಟಿ ಮೇಳದಲ್ಲಿ ಪ್ರದರ್ಶಿಸಲಾಗಿ¨
ಆ.26ರವರೆಗೆ ಪ್ರಾಪರ್ಟಿ ಮೇಳ
ಇನ್‌ಲ್ಯಾಂಡ್ ಪ್ರಾಪರ್ಟಿ ಮೇಳವು ನಗರದ ನವಭಾರತ್ ವೃತ್ತದ ಬಳಿ ಇರುವ ಇನ್‌ಲ್ಯಾಂಡ್ ಆರೆಟ್‌ನ ಮೂರನೇ ಅಂತಸ್ತಿನಲ್ಲಿ ಆ.26ರವರೆಗೆ ನಡೆಯಲಿದೆ. ಪ್ರತೀ ದಿನ ಬೆಳಗ್ಗೆ 9.30 ರಿಂದ ಸಂಜೆ 7.30ರವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ [email protected] ಮೈಲ್ ಮಾಡಬಹುದು. ಅಥವಾ www.inlandbuilders.net ಜಾಲತಾಣ ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.