ವೃದ್ಧೆಗೆ ಡ್ರಾಪ್ ನೀಡಿ ಸರ ಕದ್ದು ಪರಾರಿ
Team Udayavani, Mar 7, 2019, 6:23 AM IST
ಬೆಂಗಳೂರು: ಅಂಚೆ ಕಚೇರಿಗೆ ನಡೆದು ಹೋಗುತ್ತಿದ್ದ ವೃದ್ಧೆ ಒಬ್ಬರಿಗೆ ಬೈಕ್‌ನಲ್ಲಿ ಡ್ರಾಪ್ ನೀಡಿದ ದುಷ್ಕರ್ಮಿ, ಡಿಸೈನ್ ನೋಡಿ ಕೊಡುವುದಾಗಿ ಅವರ ಚಿನ್ನದ ಸರ ಪಡೆದು ಪರಾರಿಯಾದ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಸರ ಕಳೆದುಕೊಂಡ
ಪ್ರಮೀ ಳಾ ಬಾಯಿ (72) ಎಂಬುವವರು ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಕ್ಷ್ಮೀಪುರ ನಿವಾಸಿ ಪ್ರಮೀಳಾಬಾಯಿ, ಮಂಗಳವಾರ (ಮಾ.5) ಬೆಳಗ್ಗೆ 10.30ರ ಸುಮಾರಿಗೆ ತಮ್ಮ ವೃದ್ಧಾಪ್ಯ ವೇತನ ಪಡೆಯುವ ಸಂಬಂಧ ಅಶೋಕನಗರ ಅಂಚೆಕಚೇರಿಗೆ ನಡೆದು ಹೋಗುತ್ತಿದ್ದರು.
ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿ, “ಎಲ್ಲಿಗೆ ನಡೆದುಕೊಂಡು ಹೋಗುತ್ತೀದ್ದೀರಿ, ಸಾಕಷ್ಟು ಬಿಸಿಲಿದೆ. ನಾನು ಹನುಮಂತನಗರದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದೇನೆ’ ಎಂದು ಮಾತನಾಡಿಸಿದ್ದಾನೆ. ಬಳಿಕ ನಿಮ್ಮನ್ನು ಅಂಚೆ ಕಚೇರಿಗೆ ಬಿಡುತ್ತೇನೆ ಬನ್ನಿ ಎಂದಿದ್ದಾನೆ. ಆತನ ಮಾತು ನಂಬಿದ ಪ್ರಮೀಳಾ ಬಾಯಿ ಬೈಕ್‌ನಲ್ಲಿ ಕುಳಿತುಕೊಂಡಿದ್ದಾರೆ. ಗಣಪತಿ ದೇವಾಲಯ ಸಮೀಪದ 8ನೇ ಕ್ರಾಸ್‌ನಲ್ಲಿ ಬೈಕ್ ನಿಲ್ಲಿಸಿದ ಆರೋಪಿ, ಪ್ರಮೀಳಾ
ಅವರನ್ನು ಇಳಿಸಿದ್ದಾನೆ. ಬಳಿಕ ನೀವು ಹಾಕಿಕೊಂಡಿರುವ ಚಿನ್ನದ ಸರದ ಡಿಸೈನ್ ಚೆನ್ನಾಗಿದೆ. ನಮ್ಮ ಅಂಗಡಿಗೆ ಬರುವ ಗ್ರಾಹಕರಿಗೂ ಇದೇ ರೀ ತಿ ಮಾಡಿಸಿಕೊಡಬೇಕು. ಸರ ಕೊಡಿ ನೋಡಿಕೊಡು ತ್ತೇನೆ ಎಂದು ಹೇಳಿ ಅವರಿಂದ ಸರ ಪಡೆದಿದ್ದಾನೆ. ಬಳಿಕ ಮಾತನಾಡುತ್ತಲೇ ತನ್ನಮೊಬೈಲ್‌ನಲ್ಲಿ ಸರದ ಫೋಟೋ ತೆಗೆಯುವಂತೆ ನಾಟಕವಾಡಿದ ಆರೋಪಿ, ಇದ್ದಕ್ಕಿದ್ದಂತೆ ಬೈಕ್ ಸ್ಟಾರ್ಟ್ ಮಾಡಿ ಕೊಂಡು ಪರಾರಿಯಾಗಿದ್ದಾನೆ. ಆರೋಪಿಯ ವರ್ತನೆಯಿಂದ ಕಂಗಾಲದ ಪ್ರಮೀಳಾ ಅವರು ಕೂಗಿ ಕೊಂಡಿದ್ದು, ಸಾರ್ವಜನಿಕರು ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Kollywood: ಲೇಡಿ ಸೂಪರ್ ಸ್ಟಾರ್ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್ ದಾಖಲು
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.