ಪಿಡುಗಾಗಿ ಬಾಧಿಸುತ್ತಿದೆ ಡ್ರಗ್ಸ್ ದಂಧೆ : ಚಂದನವನದಲ್ಲಿಯೂ ಮಾದಕ “ಅಮಲು’ ಜೋರಾಗಿದೆ

ಉಚಿತವಾಗಿ ತಿನ್ನಿಸಿ ದಾಸರಾಗಿಸುವ ಜಾಲ

Team Udayavani, Sep 7, 2020, 11:31 AM IST

bng-tdy-1

ಸಾಂದರ್ಭಿಕ ಚಿತ್ರ

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪದ ಟೀ ಅಂಗಡಿಯೊಂದರ ಬಳಿ ನೀಡಿದ ಗಾಂಜಾ, ಮಾದಕ ವಸ್ತುವಿನ ಘಮಲು.. ಝಗಮಗಿಸುವ ಪಬ್‌ಗಳಲ್ಲಿಯೋ, ಬಾನೆತ್ತರದ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿಯೋ… ಪಂಚತಾರಾ ಹೋಟೆಲ್‌ನ ಕೊಠಡಿಗಳಲ್ಲೋ.. ಇಲ್ಲವೇ ಕಾಲೇಜು ವಿದ್ಯಾರ್ಥಿಗಳು ಎಳೆಯುವ ಸಿಗರೇಟ್‌ ದಮ್ಮಿನ ಹೊಗೆಯಲ್ಲಿಯೋ.. ಹೊರ ಸೂಸುತ್ತಿರುತ್ತದೆ’ ರಾಜಧಾನಿ ಬೆಂಗಳೂರಲ್ಲಿ ದಶಕಗಳಿಂದ ಆಳವಾಗಿ ಬೇರೂರಿರುವ “ಮತ್ತೇರಿಸುವ ಮಾದಕ ಲೋಕದ’ ಚಿತ್ರಣವಿದು.

ಬೆಂಗಳೂರು: ಈಗ ದಕ್ಷಿಣ ಭಾರತದಲ್ಲಿಯೇ ಸ್ವತ್ಛಂದ ಸಿನಿಮಾ ಕ್ಷೇತ್ರ ಎಂದು ಖ್ಯಾತಿ ಗಳಿಸಿದ್ದ ಚಂದನವನದಲ್ಲಿಯೂ ಮಾದಕ “ಅಮಲು’ ಜೋರಾಗಿದೆ. ಸಿನಿಮಾಗಳಲ್ಲಿ ಮದ್ಯ, ಮಾದಕ ವಸ್ತು ಸೇವಿಸಿದಂತೆ ನಟಿಸುತ್ತಿದ್ದ ನಟ-ನಟಿಯರು, ಮಾದಕ ಹಾಡುಗಳಿಗೆ ಧ್ವನಿಯಾಗುತ್ತಿದ್ದ ಸಂಗೀತಗಾರರು, ಸಿನಿಮಾ ನಿರ್ಮಾಪಕರು “ಡ್ರಗ್ಸ್‌ ದಂಧೆ’ಯಲ್ಲಿ ತೊಡಗಿರುವುದು ಇಡೀ ಸ್ಯಾಂಡಲ್‌ ವುಡ್‌ ಅನ್ನು ದಿಗ್ಭ್ರಮೆಗೊಳಿಸಿದೆ. ವರನಟ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ರಂತಹ ನಟರು ಗಾಂಧಿನಗರದಲ್ಲಿ ಬಿಟ್ಟು ಹೋಗಿದ್ದ ಹೆಜ್ಜೆ ಗುರುತುಗಳ ಮೇಲೆ ಈಗ ಡ್ರಗ್ಸ್‌ ಕಮಟು ಆವರಿಸಿದೆ. ಒಂದಿಬ್ಬರು ನಟ-ನಟಿಯರು ಮೋಜಿನ ಜೀವನಕ್ಕಾಗಿ ಆಯ್ದುಕೊಂಡ ಮಾರ್ಗಕ್ಕೆ ಇಡೀ ಚಿತ್ರರಂಗವೇ ತಲೆತಗ್ಗಿಸುವಂತಾಗಿದೆ.

ಹಲವು ವರ್ಷಗಳಿಂದ ಡ್ರಗ್ಸ್‌ ದಂಧೆಯಲ್ಲಿ ಸಿಕ್ಕಿಬೀಳುತ್ತಿದ್ದವರನ್ನು ಬಂಧಿಸಿ ಕೈ ತೊಳೆದುಕೊಳ್ಳುತ್ತಿದ್ದ ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು, ಇದೇ ಮೊದಲ ಬಾರಿಗೆ ಮೂಲ ಜಾಲದ ಬೇರುಗಳನ್ನು ಅಗೆಯಲು ಶುರು ಮಾಡಿದ್ದಾರೆ. ತನಿಖೆ ಜಾಡು ಸೆಲೆಬ್ರಿಟಿಗಳ ಬುಡಕ್ಕೆ ಬಂದು ನಟಿಯೊಬ್ಬರ ಬಂಧನವಾಗಿ ಇನ್ನೂ ಹಲವರಿಗೆ ಬಂಧನದ ಭೀತಿ ಆವರಿಸಿದೆ. ಜತೆಗೆ, ಸೆಲೆಬ್ರೆಟಿಗಳ ಜತೆ ದಂಧೆಯಲ್ಲಿ ಶಾಮೀಲಾಗಿರಬಹುದಾದ ನಿರ್ಮಾಪಕರು, ಉದ್ಯಮಿಗಳು, ಸರ್ಕಾರಿ ಉದ್ಯೋಗಿಗಳು, ರಾಜಕಾರಣಿ ಗಳ ಮಕ್ಕಳಿಗೂ ಆಕಾಶ- ನೆಲ ಒಂದೇ ಆಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ತನಿಖೆ ಅಂತಿಮ ಕೊಡಲಿ ಪೆಟ್ಟು ಯಾರ ಬುಡಕ್ಕೆ ಬೀಳಲಿದೆ ಎಂಬುದು ಉಳಿದಿರುವ ಸದ್ಯದ ಕುತೂಹಲ..!

ಈ ಕೂಪದೊಳಗೆ ಕೂಲಿ ಮಾಡುವ ಕಾರ್ಮಿಕರು, ಹದಿ ಹರೆ ಯದ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಸೆಲೆಬ್ರೆಟಿಗಳು, ಟೆಕ್ಕಿಗಳು, ವೈದ್ಯರು, ಆಡಳಿತ ವರ್ಗದ ಮಕ್ಕಳು, ರಾಜಕಾರಣಿಗಳು ಸೇರಿ ಗಣ್ಯರು ಎಂದೆನಿಸಿ ಕೊಳ್ಳುವವರ ಮಕ್ಕಳು ಸಿಲುಕಿದ್ದಾರೆ. ಜತೆಗೆ, ಈ ಪಿಡುಗಿನ ಕೂಪದಲ್ಲಿ ಶೇ.25ರಷ್ಟು ಹೆಣ್ಣುಮಕ್ಕಳೂ ಸೇರಿದ್ದಾರೆ . ಮಧ್ಯವರ್ತಿಗಳಾಗಿ (ಪೆಡ್ಲರ್‌)ಗಳಾಗಿದ್ದವರು ದಂಧೆ ನಡೆಸಿ ಕೋಟ್ಯಂತರ ರೂ. ದುಡಿದು ಇದನ್ನೇ ವೃತ್ತಿಯನ್ನಾಗಿ ಮುಂದುವರಿಸಿದ್ದಾರೆ ಎಂದು “ಮಾದಕ ಜಾಲ’ ಸೃಷ್ಟಿಸಿರುವ ಕೆಡುಕನ್ನು ಬಿಚ್ಚಿಟ್ಟಿದ್ದಾರೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು.

ಉಚಿತವಾಗಿ ತಿನ್ನಿಸಿ ದಾಸರನ್ನಾಗಿಸುವ ಜಾಲ! : ಮಾದಕ ವಸ್ತು ಜಾಲ ದಿನದ 24 ಗಂಟೆಯೂ ಸಕ್ರಿಯವಾಗಿರುತ್ತದೆ. ಮೊದಲಿಗೆ ದಂಧೆಯಲ್ಲಿ ಪೆಡ್ಲರ್‌ ಆದವನು ತನ್ನ ಸ್ನೇಹಿತರ ಬಳಗ ಇಲ್ಲವೇ ತೀರಾ ಪರಿಚಿತರಿಗೆ ಸ್ವಲ್ಪ ಪ್ರಮಾಣದಲ್ಲಿ ಮಾದಕ ವಸ್ತುವನ್ನು ಉಚಿತವಾಗಿ ನೀಡಿ ರುಚಿ ಹತ್ತಿಸುತ್ತಾನೆ. ಆ ದಿನ ರುಚಿ ಹತ್ತಿಸಿಕೊಂಡವರು ಕ್ರಮೇಣ ಆತನಿಗೆ ಗ್ರಾಹಕರಾಗಿ ಬದಲಾಗಿ ಬಿಡುತ್ತಾರೆ. ಕೆಲವೊಂದು ಶಾಲಾ ಕಾಲೇಜುಗಳ ಬಳಿ ಮಕ್ಕಳಿಗೆ ದಂಧೆಕೋರರು ಜೆಲ್‌ ಚಾಕೋಲೆಟ್‌ ರೂಪದ ಮಾದಕ ವಸ್ತು ಉಚಿತ ವಾಗಿ ಹಂಚಿ ರೂಢಿ ಮಾಡಿಸಿರುವ ಸಂಗತಿಗಳು ಹಲವು ಬಾರಿ ತನಿಖೆ ವೇಳೆ ಕಂಡು ಬಂದಿವೆ ಎನ್ನುತ್ತಾರೆ ಅಧಿಕಾರಿ.

ಪೊಲೀಸರಿಗಿರುವ ಸವಾಲು ಗಳು ಏನು? : ಬಹುತೇಕ ಮಾದಕ ವಸ್ತುಗಳ ಮಾರಾಟ ಸಂಬಂಧ ಪ್ರಕರಣಗಳು ದಂಧೆಯ ಕಿಂಗ್‌ ಪಿನ್‌ಗಳ ಬಳಿ ಏಕೆ ಸುಳಿಯುವುದಿಲ್ಲ ಎಂಬ ಪ್ರಶ್ನೆಯನ್ನು ಪೊಲೀಸ್‌ ಅಧಿಕಾರಿಯೊಬ್ಬರ ಮುಂದಿಟ್ಟಾಗ, ದಂಧೆ ಸ್ವರೂಪದಲ್ಲಿ ಅಡಗಿರುವ ಸವಾಲುಗಳ ಬಗ್ಗೆ ವಿವರಿಸುತ್ತಾರೆ. ನಗರದಲ್ಲಿ ಮಾದಕ ವಸ್ತು ಮಾರಾಟದ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನಗೆ ಮಾದಕ ವಸ್ತು ತಂದು ಕೊಟ್ಟವನ ವಿವರ ನೀಡುತ್ತಾನೆ. ಆದರೆ, ಆತನನ್ನು ಬಂಧಿಸಿ ವಿಚಾರಣೆ ನಡೆಸಿದರೆ, ಮೂಲ ಸರಬರಾಜುದಾರನ ಸುಳಿವು ಹಲವು ವರ್ಷ ಕಳೆದರೂ ಲಭ್ಯವಾಗುವುದಿಲ್ಲ ಎನ್ನುತ್ತಾರೆ.­

ರಾಜಕೀಯದಲ್ಲೂ ಡ್ರಗ್ಸ್‌!: ಈ ಹಿಂದೆ ಹಲವು ಬಾರಿ ರಾಜಕೀಯ ಮುಖಂಡರ ಮಕ್ಕಳೂ ಡ್ರಗ್ಸ್‌ ಸೇವನೆ ಮತ್ತು ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಸೂಕ್ತ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಇದೀಗ ಸ್ಯಾಂಡಲ್‌ ವುಡ್‌ ಡ್ರಗ್ಸ್‌ ದಂಧೆಯಲ್ಲಿ ಮಾಜಿ ಸಚಿವ ಜೀವರಾಜ್‌ ಆಳ್ವಾ ಪುತ್ರ ಆದಿತ್ಯಾ ಆಳ್ವಾರ ಹೆಸರು ಕೇಳಿ ಬಂದಿದ್ದು, ರಾಜಕೀಯ ಕ್ಷೇತ್ರದಲ್ಲೂ ತಲ್ಲಣ ಉಂಟು ಮಾಡಿದೆ

ಕಮಿಷನರ್‌ ಏನೆನ್ನುತ್ತಾರೆ? :  “ಡ್ರಗ್ಸ್‌ ದಂಧೆ’ ಮಟ್ಟ ಹಾಕಲು ಪೊಲೀಸ್‌ ಇಲಾಖೆ ಸದಾ ಶ್ರಮಿಸುತ್ತಿದೆ. ಇಂತಹದ್ದೊಂದು ಜಾಲಕ್ಕೆ ಕಡಿವಾಣ ಹಾಕಲು ನಾಗರೀಕರು ಪೊಲೀಸರ ಜತೆ ಕೈ ಜೋಡಿಸ ಬೇಕು. ಮಕ್ಕಳ ಮೇಲೆ ಶಾಲೆಗಳು ವಿಶೇಷ ನಿಗಾ ಇಡಬೇಕು. ಪ್ರತಿ ಯೊಬ್ಬ ನಾಗರಿಕನೂ ಈ ಜಾಲದ ಬಗ್ಗೆ ಮಾಹಿತಿ ಗೊತ್ತಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ಒದಗಿಸಬೇಕು’ ಎಂದು ನಗರ ಪೊಲೀಸ್‌ ಆಯುಕ್ತರಾದ ಕಮಲ್‌ಪಂಥ್‌ ತಿಳಿಸಿದ್ದಾರೆ.

ಎಲ್ಲೆಲ್ಲಿಂದ ಬರುತ್ತೆ ಮಾದಕ ವಸ್ತು? :  ನಗರದಲ್ಲಿ ಸಕ್ರಿಯವಾಗಿರುವ 3 ಹಂತದಲ್ಲಿ ದಂಧೆ ನಡೆಯುತ್ತದೆ. ತೀರಾ ಚಿಕ್ಕವಯಸ್ಸಿಗೆ ಪೋಷಕರ ಆಸರೆ ಇಲ್ಲದೆ ಕೊಳೆಗೇರಿಗಳಲ್ಲಿ ಬೆಳೆಯುವ ಮಕ್ಕಳು ಯುವಕರು ಮಾದಕ ವಸ್ತು ಕೊಳ್ಳಲು ದುಡ್ಡಿಲ್ಲದೆ ಸಲ್ಯೂಷನ್‌, ವೈಟ್ನರ್‌, ಪೆಟ್ರೋಲ್‌ ವಾಸನೆಯಿಂದ ನಶೆ ಏರಿಸಿಕೊಳ್ಳುವ ವರ್ಗಕ್ಕೆ ಸೇರುತ್ತಾರೆ. ಎರಡನೇಯದು ಗಾಂಜಾ. ಇದು ದುಡ್ಡಿದ್ದವರಿಗೆ ಅತ್ಯಂತ ಸುಲಭವಾಗಿ ಸಿಗುವ ಅಮಲು ಪದಾರ್ಥ. ಮೂರನೇಯದ್ದು ಹೈಟೆಕ್‌ ಡ್ರಗ್ಸ್‌ ಪಟ್ಟಿಗೆ ಸೇರುವ ಕೊಕೇನ್‌, ಎಂಡಿಎಂಎಂ, ಚರಸ್‌, ಹಾಶೀಶ್‌ ಆಯಿಲ್‌ ಇತ್ಯಾದಿ ಇವುಗಳು. ಇದು ವಿದೇಶ, ಹೊರರಾಜ್ಯಗಳಿಂದ ವಿಮಾನ ಪ್ರಯಾಣ, ಸಮುದ್ರ ಯಾನದ ಮೂಲಕ ಸೀದಾ ನಗರದ ಪ್ರಮುಖ ಕಿಂಗ್‌ಪಿನ್‌ ಗಳಿಗೆ ಬಂದು ತಲುಪುತ್ತದೆ. ತಮಿಳುನಾಡು ಆಂಧ್ರಪ್ರದೇಶದ ವಿಶಾಖಪಟ್ಟಣಂ ಅರಕು ಕಣಿವೆ ಪ್ರದೇಶ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಅರಣ್ಯ ಪ್ರದೇಶ , ಕೇರಳ ಈ ಮೂರು ಜಿಲ್ಲೆಗಳಿಂದ ನಗರಕ್ಕೆ ಹೇರಳವಾಗಿ ಗಾಂಜಾ ಸರಬರಾಜಾಗುತ್ತದೆ. ಜತೆಗೆ, ಗಡಿಭಾಗಗಲ್ಲಿಯೂ ಕೆಲವೆಡೆ ಇನ್ನು ಕೊಕೇನ್‌ ಸೇರಿದಂತೆ ಉಳಿದ ಹೈಟೆಕ್‌ ಡ್ರಗ್ಸ್‌ ಎಲ್ಲವೂ ವಿಮಾನಯಾನ ಹಾಗೂ ಸಮುದ್ರಯಾನದ ಮೂಲಕ ವಿಚಕ್ಷಣದಳಗಳ ಕಣ್ತಪ್ಪಿಸಿ ನಗರಕ್ಕೆ ಬರುತ್ತವೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ವಿಚಕ್ಷಣ ದಳಗಳ ಲೋಪವೂ ಅಡಗಿರುತ್ತದೆ ಎಂಬುದು ಸುಳ್ಳೇನಲ್ಲ.

ಪೇಜ್‌ ಥ್ರೀ ಪಾರ್ಟಿಗಳ ಹಾವಳಿ! : ಎರಡು ದಶಕಗಳ ಹಿಂದೆ ಪೇಜ್‌ ಥ್ರೀ ಪಾರ್ಟಿಗಳು ಆಯೋಜನೆಗೊಂಡವು. ಸಿನಿಮಾ ಕ್ಷೇತ್ರದಲ್ಲಿದ್ದವರೇ ಈ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಕೇವಲ ಗಾಂಧಿನಗರಕ್ಕಷ್ಟೇ ಸೀಮಿತವಾಗಿದ್ದ ಈ ಕಾರ್ಯಕ್ರಮಗಳು ಕ್ರಮೇಣ ಎಲ್ಲೆಡೆ ವಿಸ್ತಾರಗೊಂಡವು. ಪೇಜ್‌ಥ್ರಿà ಪಾರ್ಟಿಗಳ ಬಳಿಕ ರೇವ್‌ ಪಾರ್ಟಿಗಳು, ಪ್ರೈವೇಟ್‌ ಪಾರ್ಟಿಗಳು ಶುರುವಾದವು. ಈ ಪಾರ್ಟಿಗಳಲ್ಲಿ ಕೇವಲ ಸಿನಿಮಾ ಕ್ಷೇತ್ರದವರು ಮಾತ್ರವಲ್ಲ, ಉದ್ಯಮಿಗಳು, ರಾಜಕೀಯ ಮುಖಂಡರ ಪುತ್ರರು ಭಾಗಿಯಾಗುತ್ತಿದ್ದರು. ಆಯೋಜಕರು, ಡ್ರಗ್ಸ್‌ ಪೆಡ್ಲರ್‌ಗಳ ಮೂಲಕ ಡ್ರಗ್ಸ್‌ ಸೇವನೆಗೆ ಪ್ರಚೋದನೆ ನೀಡುತ್ತಿದ್ದರು. ಅವರ ಮೂಲಕ ಇತರರಿಗೂ ವಿತರಿಸುತ್ತಿದ್ದರು. ಕ್ರಮೇಣ ಆನ್‌ಲೈನ್‌ ವಹಿವಾಟಿನಲ್ಲಿ ನೇರವಾಗಿ ಮನೆಗೆ ಡ್ರಗ್ಸ್‌ ಪೂರೈಕೆಯಾಗುತ್ತಿತ್ತು. ಸ್ಯಾಂಡಲ್‌ ವುಡ್‌ ದಂಧೆಯಲ್ಲಿ ಸಿನಿಮಾ ಮಾತ್ರವಲ್ಲ, ಕಿರುತೆರೆ ಕಲಾವಿದರೂ ವ್ಯಸನಿಗಳಾಗಿದ್ದಾರೆ ಎಂಬುದು ಸದ್ಯದ ವಿಚಾರ.

ಡಾರ್ಕ್‌ ನೆಟ್‌ ರಹಸ್ಯ ತಾಣ! : ಕೆಲ ವರ್ಷಗಳಿಂದ ವಿದೇಶಿ ದಂಧೆಕೋರರು “ಡಾರ್ಕ್‌ನೆಟ್‌’ ಎಂಬ ರಹಸ್ಯ ತಾಣವನ್ನು ತಮ್ಮ ವ್ಯವಹಾರದ ತಾಣವನ್ನಾಗಿ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಮಾದಕ ವಸ್ತು ಖರೀದಿಸುವವನು ಡಾರ್ಕ್‌ ನೆಟ್‌ನಲ್ಲಿ ನಕಲಿ ಅಕೌಂಟ್‌ವೊಂದನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದರ ಮುಖೇನ ವಿದೇಶಿ ದಂಧೆಕೋರರನ್ನು ಸಂಪರ್ಕಿಸಿ ತನಗೆ ಅಗತ್ಯವಿರುವ ಪ್ರಮಾಣದ ಮಾದಕ ವಸ್ತುಗಳನ್ನು ಆನ್‌ಲೈನ್‌ ಮೂಲಕವೇ ಬಿಟ್‌ ಕಾಯಿನ್‌ ಮೂಲಕ ಹಣ ಪಾವತಿಸುತ್ತಾನೆ. ಅಷ್ಟಕ್ಕೆ ದಂಧೆಕೋರರು ಕೊರಿಯರ್‌ಗಳ ಮೂಲಕ ಸೀದಾ ಹೇಳಿದ ವಿಳಾಸಕ್ಕೆ ಮಾದಕ ವಸ್ತು ಪೂರೈಸಿರುತ್ತಾರೆ. ಕೆಲ ತಿಂಗಳ ಹಿಂದೆ ಕೆನಡಾ, ನೆದರ್‌ಲ್ಯಾಂಡ್‌ ಮೂಲಕ ಕೊರಿಯರ್‌, ಮದುವೆ ಆಮಂತ್ರಣಗಳಲ್ಲಿ ಮಾದಕ ವಸ್ತು ಬಂದು ನಗರದ ಅಂಚೆ ಕಚೇರಿಗೆ ತಲುಪಿದ್ದ ಪ್ರಕರಣವನ್ನು ಸಿಸಿಬಿ ಬಯಲಿಗೆಳೆದು ಹಲವರನ್ನು ಬಂಧಿಸಿದ್ದನ್ನು ಸ್ಮರಿಸಬಹುದು. ಈ ದಂಧೆಯಲ್ಲಿ ಕಿಂಗ್‌ಪಿನ್‌ಗಳು ಸಿಗುವುದೇ ಅನುಮಾನ ಎಂದು ಜಾಲದ ರಹಸ್ಯ ವ್ಯವಹಾರದ ಬಗ್ಗೆ ವಿವರಿಸುತ್ತಾರೆ ಅಧಿಕಾರಿಗಳು.

ಪೋಷಕರು, ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಜವಾಬ್ದಾರಿ? : ಮಾದಕ ವಸ್ತುಗಳ ಜಾಲದಿಂದ ಮಕ್ಕಳನ್ನು ಸಂಪೂರ್ಣ ದೂರವಿರಿಸುವ ಜವಾಬ್ದಾರಿ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳ ಮೇಲಿದೆ. ಈ ಹಿಂದೆ ಆಯಾ ಠಾಣಾ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಮಾದಕ ವಸ್ತುಗಳ ಮಾರಾಟ ತಡೆ ಜಾಗೃತಿಗಾಗಿ ಶಾಲಾ ಆಡಳಿತ ಮಂಡಳಿಯನ್ನೊಳಗೊಂಡ ವಿಶೇಷ ಸಮಿತಿ ರಚನೆಗೊಂಡಿವೆ. ಆದರೆ, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿ ಮಾದಕ ವಸ್ತು ವ್ಯಸನಿಯಾಗಿದ್ದರೆ ತಕ್ಷಣ ಪೋಷಕರನ್ನು ಸಂಪರ್ಕಿಸಿ ಕೌನ್ಸಿಲಿಂಗ್‌ ಮಾಡಬೇಕು. ಆದರೆ, ಬಹುತೇಕ ಶಾಲೆಗಳು ಪ್ರತಿಷ್ಠೆಗೆ ಧಕ್ಕೆಯಾಗಲಿದೆ ಎಂದು ಸುಮ್ಮನಾಗದೇ ಈ ಪಿಡುಗಿನ ವಿರುದ್ಧ ಹೋರಾಟ ಮಾಡಬೇಕು.

ಮೋಹನ್‌ ಭದ್ರಾವತಿ/ ಮಂಜುನಾಥ ಲಘುಮೇನಹಳ್ಳಿ

ಟಾಪ್ ನ್ಯೂಸ್

Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ

Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Belagavi: ಲಕ್ಷ್ಮೀ ‌ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

Belagavi: ಲಕ್ಷ್ಮೀ ‌ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ

Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ

Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Belagavi: ಲಕ್ಷ್ಮೀ ‌ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

Belagavi: ಲಕ್ಷ್ಮೀ ‌ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.