![supreme-Court](https://www.udayavani.com/wp-content/uploads/2025/02/supreme-Court-5-415x249.jpg)
![supreme-Court](https://www.udayavani.com/wp-content/uploads/2025/02/supreme-Court-5-415x249.jpg)
Team Udayavani, Jan 29, 2025, 11:03 AM IST
ಬೆಂಗಳೂರು: ಸ್ನೇಹಿತನ ಮಾತು ಕೇಳಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣಗಳಿಸಲು ಡ್ರಗ್ಸ್ ಪೆಡ್ಲಿಂಗ್‌ಗೆ ಇಳಿದಿದ್ದ ಎಂಬಿಎ ವಿದ್ಯಾರ್ಥಿ ಆರೋಪಿ ಸಿಸಿಬಿ ಬಲೆಗೆ ಬಿದ್ದಿದ್ದು, 10 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶದ ಆನಂತಪುರ ಮೂಲದ ಲಿಂಗಧೀರನಹಳ್ಳಿಯ ಡಿ ಗ್ರೂಪ್ ಲೇಔಟ್ ನಿವಾಸಿ ಅರುಣ್ ಎಂ.ಜಾಕೋಬ್ (27) ಬಂಧಿತ. 10 ಲಕ್ಷ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್ಸ್ , ಎಂಡಿಎಂಎಮಾತ್ರೆಗಳು, ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ತಲೆಮರೆಸಿ ಕೊಂಡಿರುವ ಪ್ರಮುಖ ಆರೋಪಿ ಅರುಣ್ ಸ್ನೇಹಿತ, ಡ್ರಗ್ಸ್ ಪೆಡ್ಲರ್ ಪ್ರತ್ಯೂಷ್‌ಗಾಗಿ ಶೋಧ
ನಡೆಸಲಾಗುತ್ತಿದೆ.
ಅರುಣ್ ಹಾಗೂ ಪ್ರತ್ಯೂಷ್ ನಗರದ ಕಾಲೇಜೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಊರಿಗೆ ಹಿಂತಿರುಗಿದ್ದ ಅರುಣ್, 2022ರಲ್ಲಿ ನಗರಕ್ಕೆ ವಾಪಸ್ ನಗರಕ್ಕೆ ಬಂದಿದ್ದ. ಆಗಾಗ್ಗೆ ಸ್ನೇಹಿತ ಪ್ರತ್ಯೂಷ್‌ನನ್ನು ಭೇಟಿ ಮಾಡುತ್ತಿದ್ದ.
ನಗರದ ಕಾಲೇಜೊಂದರಲ್ಲಿ 2023ರಲ್ಲಿ ಎಂಬಿಎ ಕೋರ್ಸ್‌ಗೆ ಸೇರಿದ ಅರುಣ್‌ಗೆ ಡ್ರಗ್ಸ್ ಪೆಡ್ಲಿಂಗ್‌ನಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣಗಳಿಸಬಹುದು ಎಂಬ ಆಮೀಷ ವೊಡ್ಡಿದ್ದ. ಹಣದ ಆಮೀಷಕ್ಕೊಳಗಾಗಿ ಆತ ಕಳುಹಿಸುತ್ತಿದ್ದ ಡ್ರಗ್ಸ್ ಅನ್ನು ಕಾಲೇಜು ವಿದ್ಯಾರ್ಥಿಗಳು, ಐ.ಟಿ. ಉದ್ಯೋಗಿಗಳು, ಉದ್ಯಮಿಗಳಿಗೆ ಪೂರೈಸುತ್ತಿದ್ದ.
ಗ್ರಾಹಕರ ಹೆಸರು, ಮೊಬೈಲ್ ನಂಬರ್‌ಗಳನ್ನು ವ್ಯಾಟ್ಸ್‌ಆ್ಯಪ್‌ನಲ್ಲಿ ಅರುಣ್‌ಗೆ ಪ್ರತ್ಯೂಷ್ ಕಳುಹಿಸುತ್ತಿದ್ದ. ಆತನ ಸೂಚನೆ ಯಂತೆ ಗ್ರಾಹಕರಿಗೆ ಅರುಣ್ ಡ್ರಗ್ಸ್ ತಲುಪಿಸುತ್ತಿದ್ದ. ಬಂದ ಹಣದಲ್ಲಿ ಅರುಣ್‌ಗೆ ಕಮಿಷನ್ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಈತನಿಂದ ಡ್ರಗ್ಸ್ ಖರೀದಿಸಿದವರು ಡಿಜಿಟಲ್ ಆ್ಯಪ್ ಮೂಲಕ ಹಣ ಪಾವತಿಸುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಅರುಣ್ ನಿವಾಸದ ಮೇಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ವೇಳೆ 52 ಗ್ರಾಂ ಎಂಡಿಎಂಎ ಮಾತ್ರೆ , 98 ಗ್ರಾಂ ಹೈಡ್ರೋ ಗಾಂಜಾ, ತೂಕದ ಯಂತ್ರ ಪತ್ತೆಯಾಗಿದೆ. ಆರೋಪಿ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂಕೋರ್ಟ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
You seem to have an Ad Blocker on.
To continue reading, please turn it off or whitelist Udayavani.