Drug sell: ದುಬೈನಿಂದಲೇ ಡ್ರಗ್ಸ್‌ ಮಾರಾಟ ದಂಧೆ; ತಾಯಿ-ಮಗಳ ವಿರುದ್ಧ ಬೆಂಗ್ಳೂರಲ್ಲಿ ಕೇಸ್‌

Team Udayavani, Jul 7, 2024, 11:04 AM IST

Drug sell: ದುಬೈನಿಂದಲೇ ಡ್ರಗ್ಸ್‌ ಮಾರಾಟ ದಂಧೆ; ತಾಯಿ-ಮಗಳ ವಿರುದ್ಧ ಬೆಂಗ್ಳೂರಲ್ಲಿ ಕೇಸ್‌

ಬೆಂಗಳೂರು: ವಿದೇಶದಲ್ಲೇ ಕುಳಿತು ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆ ನಡೆಸುತ್ತಿದ್ದ ತಾಯಿ, ಮಗಳು ಸೇರಿ ಮೂವರ ವಿರುದ್ಧ ಬೆಂಗಳೂರು ಕೇಂದ್ರ ಅಪರಾಧ ದಳದ(ಸಿಸಿಬಿ) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲಹಂಕ ನಿವಾಸಿ ಆಯಾಜ್‌ ಮೊಹಮ್ಮದ್‌ ಎಂಬುವರು ನೀಡಿದ ದೂರಿನ ಮೇರೆಗೆ ದುಬೈನಲ್ಲಿ ವಾಸವಾಗಿರುವ ಲೀನಾ ವೀರ್ವಾನಿ ಮತ್ತು ಆಕೆಯ ಪುತ್ರಿ ನಥಾಲಿಯಾ ವಿರ್‌ವಾನಿ  ಹಾಗೂ ಬೆಂಗಳೂರಿನ ರಂಜನ್‌ ಎಂಬುವರ ವಿರುದ್ಧ ಸಿಸಿಬಿ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

ದೂರುದಾರ ಆಯಾಜ್‌ ಮೊಹಮ್ಮದ್‌, ತನ್ನ 23 ವರ್ಷದ ಪುತ್ರ ಆಯಾನ್‌ ಮೊಹಮ್ಮದ್‌ ಮಾದಕ ವಸ್ತು ವ್ಯಸನಿಯಾಗುವಂತೆ ರಂಜನ್‌ ಕುಮಾರ್‌ ಮೂಲಕ ತಾಯಿ-ಮಗಳು ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಅದನ್ನು ತಿಳಿದು ವಿಚಾರ ಮಾಡಿದಾಗ, ತಾಯಿ, ಮಗಳ ದಂಧೆ ವಿಚಾರ ಗೊತ್ತಾಗಿದೆ. ಹೀಗಾಗಿ ತಾಯಿ-ಮಗಳು ಹಾಗೂ ಈ ಇಬ್ಬರಿಗೂ ಸಹಾಯ ಮಾಡುತ್ತಿರುವ ರಂಜನ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಯಾಜ್‌ ಮೊಹಮ್ಮದ್‌ ದೂರಿನಲ್ಲಿ ಕೋರಿದ್ದಾರೆ.

ದುಬೈನಲ್ಲಿರುವ ನಥಾಲಿಯಾ ವಿರ್‌ವಾನಿ, ಆಕೆಯ ತಾಯಿ ಲೀನಾ, ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್‌ ಸೇರಿ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಿದೇಶದಿಂದಲೇ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದಾರೆ. ನಥಾಲಿಯ ತನ್ನ ಬ್ಯಾಂಕ್‌ ಖಾತೆಗೆ ಯುವಕರಿಂದ ಹಣ ವರ್ಗಾವಣೆ ಮಾಡಿಸಿಕೊಂಡು, ರಂಜನ್‌ ಮೂಲಕ ಮಾದಕ ವಸ್ತು ಪೂರೈಸುತ್ತಿದ್ದಾಳೆ. ಅದಕ್ಕೆ ಆಕೆಯ ತಾಯಿ ಕೂಡ ಸಹಕಾರ ನೀಡುತ್ತಿದ್ದಾಳೆ. ಇನ್ನು ರಂಜನ್‌, ನಗರದಲ್ಲಿರುವ ಕೆಲ ವಿದ್ಯಾರ್ಥಿಗಳು ಹಾಗೂ ಇತರೆ ಗ್ರಾಹಕರಿಗೆ ಬೇಕಾದ ಡ್ರಗ್ಸ್‌ ಅನ್ನು ಪೂರೈಕೆ ಮಾಡುತ್ತಿದ್ದಾನೆ ಎಂಬುದು ಗೊತ್ತಾಗಿದೆ.

ಮತ್ತೂಂದೆಡೆ ನಥಾಲಿಯ, ಆಗಾಗ್ಗೆ ಬೆಂಗಳೂರಿನಿಂದ ದುಬೈ, ದುಬೈನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾಳೆ ಎಂದು ಆಯಾಜ್‌ ಮೊಹಮ್ಮದ್‌ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ರಂಜನ್‌ ವಿಳಾಸ ಪತ್ತೆಯಾಗಿದ್ದು, ಆತ ನಾಪತ್ತೆಯಾಗಿದ್ದಾನೆ. ವಿದೇಶದಲ್ಲಿರುವ ತಾಯಿ-ಮಗಳಿಗೆ ನಗರದ ಸಂಪರ್ಕ ಹೇಗೆ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Ullal: ಕೊರಗಜ್ಜ ಆದಿ ಕ್ಷೇತ್ರಕ್ಕೆ ಭೇಟಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Mangaluru: ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾದ ಕೇಂದ್ರ ಸರಕಾರ

Nithin-gadkari

Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kidnap Case: ವ್ಯಕ್ತಿ ಅಪಹರಿಸಿ, 15 ಲಕ್ಷ ರೂ. ಸುಲಿಗೆ

Kidnap Case: ವ್ಯಕ್ತಿ ಅಪಹರಿಸಿ, 15 ಲಕ್ಷ ರೂ. ಸುಲಿಗೆ

6

CCB: ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀಗೆ 7 ತಾಸು ಸಿಸಿಬಿ ಗ್ರಿಲ್‌

Suspension: ಯುವತಿಗೆ ಕಿರುಕುಳ; ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಅಮಾನತು

Suspension: ಯುವತಿಗೆ ಕಿರುಕುಳ; ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಅಮಾನತು

Head Constable: ಅಪಘಾತದಲಿ ಗಾಯಗೊಂಡಿದ್ಲ ಪೊಲೀಸ್‌ ಸಾವು

Head Constable: ಅಪಘಾತದಲಿ ಗಾಯಗೊಂಡಿದ್ಲ ಪೊಲೀಸ್‌ ಸಾವು

Bengaluru: ಬೆಕ್ಕಿನ ಮೇಲೆ ಹಲ್ಲೆ: ರೂಮ್‌ಮೇಟ್‌ ವಿರುದ್ದ ಕೇಸ್‌

Bengaluru: ಬೆಕ್ಕಿನ ಮೇಲೆ ಹಲ್ಲೆ: ರೂಮ್‌ಮೇಟ್‌ ವಿರುದ್ದ ಕೇಸ್‌

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

Kasaragod: ಕಾರು-ಕೆಎಸ್ಸಾರ್ಟಿಸಿ ಬಸ್‌ ಡಿಕ್ಕಿ; ಐವರು ವೈದ್ಯ ವಿದ್ಯಾರ್ಥಿಗಳ ಸಾವು

Kasaragod: ಕಾರು-ಕೆಎಸ್ಸಾರ್ಟಿಸಿ ಬಸ್‌ ಡಿಕ್ಕಿ; ಐವರು ವೈದ್ಯ ವಿದ್ಯಾರ್ಥಿಗಳ ಸಾವು

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

accident

Shirva: ಬೈಕ್‌ಗೆ ಜೀಪು ಢಿಕ್ಕಿ; ಸವಾರನಿಗೆ ಗಾಯ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.