ಚಾಕೋಲೇಟ್‌ನಂತೆ ಮಕ್ಕಳ ಕೈಗೆ ಸಿಗುತ್ತಿವೆ ಡ್ರಗ್ಸ್!
ಪೆಡ್ಲರ್‌ಗಳಿಗೆ ಕಾಲೇಜು ವಿದ್ಯಾರ್ಥಿಗಳು, ಮಕ್ಕಳೇ ಟಾರ್ಗೆಟ್
Team Udayavani, Mar 6, 2023, 1:39 PM IST
ಚಾಕೋಲೇಟ್‌ನಂತೆ ಮಕ್ಕಳ ಕೈಗೆ ಸಿಗುತ್ತಿವೆ ಡ್ರಗ್ಸ್! ಸಿಲಿಕಾನ್ ಸಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ನಗರಿಯಂತಹ ಹಲವು ಗರಿಗಳನ್ನು ಮುಡಿಗೇರಿಸಿಕೊಂಡಿರುವ ಹೆಗ್ಗಳಿಕೆ ರಾಜ್ಯ ರಾಜಧಾನಿ ಬೆಂಗಳೂರಿನದ್ದಾಗಿದೆ. ಆ ಮುಕುಟಕ್ಕೆ ಇತ್ತೀಚೆಗೆ “ಡ್ರಗ್ಸ್ ಹಬ್’ ಎಂಬ ಅಪಖ್ಯಾತಿಯ ಗರಿಯೂ ಮುಡಿಗೇರುತ್ತಿದೆ. ಇದಕ್ಕೆ ಕಾರಣವೂ ಇದೆ. ಮಕ್ಕಳಿಗೆ ಚಾಕೋಲೇಟ್ ಸಿಗುವಂತೆ ಇಲ್ಲಿ ಮಾದಕವಸ್ತುಗಳು ಸಿಗುವಷ್ಟರ ಮಟ್ಟಿಗೆ ಡ್ರಗ್ಸ್ ಜಾಲ ವಿಸ್ತರಿಸಿದೆ. ಇದಕ್ಕೆ ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಪ್ರಕರಣಗಳು ಪುಷ್ಠಿ ನೀಡುತ್ತವೆ. ಎರಡು ದಿನಗಳ ಹಿಂದಷ್ಟೇ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿಹೆಚ್ಚು ನಾಲ್ಕು ಕ್ವಿಂಟಲ್ ಗಾಂಜಾ ವಶಪಡಿಸಿಕೊಳ್ಳಲಾಯಿತು. ಇದು ಇತ್ತೀಚಿನ ವರ್ಷಗಳಲ್ಲೇ ದಾಖಲೆ ಎಂದೇ ಹೇಳಲಾಗುತ್ತಿದೆ. ಹಾಗಿದ್ದರೆ, ಇಷ್ಟೊಂದು ಪ್ರಮಾಣದ ಮಾದಕವಸ್ತು ನಗರದಲ್ಲಿ ಹೇಗೆ ಬರುತ್ತದೆ? ಯುವಕರ ಕೈಸೇರಲು ಇರುವ “ಮಾರ್ಗ’ಗಳು ಯಾವುವು? ಇದರ ನಿಯಂತ್ರಣಕ್ಕೆ ಪೊಲೀಸರ ತಂತ್ರ ಏನು? ಇಂತಹ ಹಲವು ಅಂಶಗಳ ಮೇಲೆ ಬೆಳಕುಚೆಲ್ಲುವ ಪ್ರಯತ್ನ ಈ ವಾರದ “ಸುದ್ದಿ ಸುತ್ತಾಟ’…
ವಿಶ್ವದ ಭೂಪಟದಲ್ಲಿ ಐಟಿ-ಬಿಟಿ ಹಬ್, ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿಗೆ ಒಳಪಟ್ಟಿರುವ ರಾಜ್ಯ ರಾಜಧಾನಿಯು ಮಕ್ಕಳ ಡ್ರಗ್ಸ್‌ಯಾರ್ಡ್ ಆಗಿ ಮಾರ್ಪಡುತ್ತಿರುವುದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಅಂಗಡಿಗಳಲ್ಲಿ ಚಾಕೊಲೇಟ್ ಸಿಗುವ ಮಾದರಿಯಲ್ಲೇ ಎಲ್ಲೆಂದರಲ್ಲಿ ಡ್ರಗ್ಸ್‌ಗಳು ಮಕ್ಕಳ ಕೈಗೆ ಸಿಗುತ್ತಿರುವುದು ಪಾಲಕರಲ್ಲಿ ಆತಂಕ ಹುಟ್ಟಿಸಿದೆ. ಬೆಂಗಳೂರೊಂದರಲ್ಲೇ ವಾರ್ಷಿಕವಾಗಿ ಸುಮಾರು 136 ಕೋಟಿ ರೂ.ಗೂ ಅಧಿಕ ಡ್ರಗ್ಸ್ ವಹಿವಾಟು ನಡೆಯುತ್ತಿವೆ ಎಂಬುದನ್ನು ಪೊಲೀಸ್ ಮೂಲಗಳು ಅಂದಾಜಿಸಿವೆ. ಪ್ರತಿಷ್ಠಿತ ಎಂಜಿನಿಯರಿಂಗ್, ಮೆಡಿಕಲ್, ಡಿಗ್ರಿ ಕಾಲೇಜುಗಳ ವಿದ್ಯಾರ್ಥಿಗಳೇ ಪೆಡ್ಲರ್‌ಗಳ ಟಾರ್ಗೆಟ್. ತಾವು ಕೇಳಿದಷ್ಟು ದುಡ್ಡು ಕೊಟ್ಟರೆ ವಿದ್ಯಾರ್ಥಿಗಳು ಸೂಚಿಸುವ ಸ್ಥಳಗಳಿಗೆ ಮಾದಕ ವಸ್ತು ಪೂರೈಸುವ ಜಾಲ ರಾಜ್ಯ ರಾಜಧಾನಿಯಾದ್ಯಂತ ವಿಸ್ತರಿಸಿವೆ.
ಪಾಲಕರದಲ್ಲಿ ಹೆಚ್ಚದ ಆತಂಕ: ಇನ್ನು ಸ್ನೇಹಿತರ ಮೂಲಕ ಡ್ರಗ್ಸ್ ಸೇವನೆಗೆ ಮುಂದಾಗುತ್ತಿರುವ ಮಕ್ಕಳ ನಿಯಂತ್ರಣಕ್ಕೆ ಪಾಲಕರು ಹರಸಾಹಸಪಡುವಂತಾಗಿದೆ. ಎಲ್ಲಿ ತಮ್ಮ ಮಕ್ಕಳು ವ್ಯಸನಗಳಿಗೆ ಬಲಿಯಾಗುತ್ತಾರೋ ಎಂಬ ಭಯದಲ್ಲೇ ಪಾಲಕರು ಪ್ರತಿನಿತ್ಯ ಶಾಲೆ, ಕಾಲೇಜಿಗೆ ತೆರಳುವ ತಮ್ಮ ಮಕ್ಕಳ ಮೇಲೆ ನಿಗಾ ಇಡುವುದು ಅನಿವಾರ್ಯವಾಗಿದೆ. ಇಡೀ ರಾಜ್ಯದಲ್ಲೇ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಡ್ರಗ್ಸ್‌ಗೆ ದಾಸವಾಗುತ್ತಿರುವ ಮಕ್ಕಳ ಪ್ರಮಾಣ ಬೆಂಗಳೂರಿನಲ್ಲಿ ಶೇ.86ರಷ್ಟಿದೆ. ಇದಕ್ಕೆ ಕಡಿವಾಣ ಹಾಕಲುವುದೇ ಪಾಲಕರಿಗೆ ಸವಾಲಾಗಿದೆ. ಮತ್ತೂಂದೆಡೆ ಮಕ್ಕಳ ಡ್ರಗ್ಸ್ ಚಟಕ್ಕೆ ಪಾಲಕರು ಸಮಾಜದ ಮುಂದೆ ತಲೆ ತಗ್ಗಿಸುವಂತಾಗಿದೆ. ಕೆಲ ಪ್ರಕರಣಗಳಲ್ಲಿ ಮಕ್ಕಳು ಮಾದಕ ಚಟಕ್ಕೆ ಅಂಟಿಕೊಂಡ ಸಂಗತಿ ಪಾಲಕರ ಗಮನಕ್ಕೆ ಬಂದು ಮನಶಾಸ್ತ್ರಜ್ಞರ ಬಳಿ ಕೌನ್ಸೆಲಿಂಗ್‌ಗೆ ಕರೆದೊಯ್ದು ಚಟದಿಂದ ಬಿಡಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.
ರಾಜಧಾನಿಯಲ್ಲಿ ವೆರೈಟಿ ಡ್ರಗ್ಸ್: ಗಾಂಜಾ, ಕೊಕೇನ್, ಎಂಡಿಎಂಎ , ಚರಸ್, ನಿಕೋಟಿನ್, ಹೆರಾಯಿನ್, ಆಪೀಮು, ಎಂಡಿಎಂಎ ಮಾತ್ರೆ, ಎಲ್‌ಎಸ್‌ಡಿ, ಹ್ಯಾಷಿಶ್, ಬ್ರೌನ್‌ಶುಗರ್, ಹ್ಯಾಶಿಷ್ ಎಣ್ಣೆ, ಆಂಫೆಟಮಿನ್, ಬೆನ್ಸೋಡಯಾ ಮಾತ್ರೆ, ಮಾರಿಜುಲ್ಲಾ, ಬುಕ್ಕಿ, ಯಾಬಾ ರೆಸ್ಟೆçಲ್, ಅನಿಕ್ಸಿಟ್ ನೈಟ್ರೋಸನ್ ಡ್ರಗ್ಸ್‌ಗಳು ಬೆಂಗಳೂರಿ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಟೆಕಿಗಳು, ಉದ್ಯಮಿಗಳಿಗೆ ಮಾರಾಟವಾಗುತ್ತದೆ. ಈ ಪೈಕಿ ಮಾದಕ ವಸ್ತು ಗಾಂಜಾ ಸುಲಭವಾಗಿ ಸಿಗುವ ಹಿನ್ನೆಲೆಯಲ್ಲಿ ಇದರ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಉಳಿದಂತೆ 110ಕ್ಕೂ ಹೆಚ್ಚಿನ ವೈರೈಟಿ ಮಾದಕ ವಸ್ತುಗಳು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿದೆ. ಸಿಂಥೆಟಿಕ್ ಡ್ರಗ್ಸ್‌ಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಪೆಡ್ಲರ್‌ಗಳ ಸಂಖ್ಯೆಯೂ ದುಪ್ಪಟ್ಟಾಗಿದೆ.
ಡ್ರಗ್ಸ್ ದಾಸರಾಗುವ ಮಕ್ಕಳು 4 ಪಟ್ಟು ಹೆಚ್ಚಳ: ಸಿಲಿಕಾನ್ ಸಿಟಿಯಲ್ಲಿ ವರ್ಷದಿಂದ ವರ್ಷಕ್ಕೆ ಡ್ರಗ್ಸ್ ಮಾರಾಟಗಾರರ ಸಂಖ್ಯೆ ಹಾಗೂ ಡ್ರಗ್ಸ್‌ಗೆ ದಾಸರಾಗುತ್ತಿರುವ ಮಕ್ಕಳ ಪ್ರಮಾಣವು 4 ಪಟ್ಟು ಏರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು. ಕಳೆದ ಆರೂವರೆ ವರ್ಷಗಳಲ್ಲಿ ಸಿಲಿಕಾನ್ ಸಿಟಿಯೊಂದರಲ್ಲೇ 15,368 ಕೆ.ಜಿ.ಗೂ ಹೆಚ್ಚಿನ ಪ್ರಮಾಣದ ಗಾಂಜಾ ಜಪ್ತಿ ಮಾಡಿರುವುದ ಹುಬ್ಬೇರಿಸುವಂತೆ ಮಾಡಿದೆ. ಉಳಿದಂತೆ 2022ರಲ್ಲಿ ಬ್ರೌನ್‌ಶುಗರ್ 2.691 ಕೆ.ಜಿ., ಆಫೀಮು 9.167 ಕೆ.ಜಿ., ಹೆರಾಯಿನ್ 0.196 ಕೆ.ಜಿ., ಚರಸ್ 3.634 ಕೆ.ಜಿ., ಕೊಕೇನ್ 2.39 ಕೆ.ಜಿ., ಎಂಡಿಎಂಎ ಕ್ಯಾಫ್ಯೂಲ್ಸ್ ಹಾಗೂ ಪೌಡರ್‌ಗಳು 35.487 ಕೆ.ಜಿ., ಆಂಫೆಟಮೈನ್ 70.3 ಕೆ.ಜಿ., ಯಾಬಾ ರೆಸ್ಟೈಲ್, ಅನಿಕ್ಸಿಟ್ ನೈಟ್ರೋಸನ್ 2447 ಟ್ಯಾಬ್ಲೆಟ್ ಗಳು, 887 ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 2021ರಲ್ಲಿ 198 ಪ್ರಕರಣಗಳಲ್ಲಿ 86.887 ಕೆ.ಜಿ. ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. 2022ರಲ್ಲಿ 4,042 ಪ್ರಕರಣದಲ್ಲಿ ಬರೊಬ್ಬರಿ 4228.44 ಕೆ.ಜಿ. ಜಪ್ತಿ ಮಾಡಲಾಗಿದೆ. ಇನ್ನು 2023 ಜನವರಿ ತಿಂಗಳಲ್ಲಿ 15 ಪ್ರಕರಣಗಳಿಗೆ ಸಂಬಂಧಿಸಿಂತೆ 1,773 ಕೆ.ಜಿ. ಸಿಂಥೆಟಿಕ್ ಡ್ರಗ್ಸ್ ಜಪ್ತಿಯಾಗಿದೆ.
ಮಾದಕ ವಸ್ತುಗಳ ಪೂರೈಕೆ ಹೇಗೆ ? : ನಗರದ ಪ್ರತಿಷ್ಠಿತ ಕಾಲೇಜು, ಪ್ರೌಢ ಶಾಲೆಗಳ ಬಳಿಯಿರುವ ನಿರ್ಜನ ಪ್ರದೇಶಗಳೇ ಪೆಡ್ಲರ್‌ಗಳ ಮಾರಾಟ ಸ್ಥಳವಾಗಿದ್ದು, ಗಾಂಜಾ, ಕೊಕೇನ್, ಬ್ರೌನ್‌ಶುಗರ್ ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಎಲ್‌ಎಸ್‌ಡಿ ಸ್ಟ್ರಿಪ್ಸ್, ಎಂಡಿಎಂಎ ಮಾತ್ರೆಗಳಂತಹ ಡ್ರಗ್ಸ್‌ಗಳು ವಿದೇಶಿ ಪೆಡ್ಲರ್‌ಗಳಿಂದ ಪೂರೈಕೆಯಾಗುತ್ತಿದೆ. ಇದಲ್ಲದೇ, ಪಾರ್ಕ್‌ಗಳು, ದೊಡ್ಡ ಬಸ್ ನಿಲ್ದಾಣಗಳು, ಜನರ ಓಡಾಟವಿಲ್ಲದ ನಿರ್ಜನ ಪ್ರದೇಶಗಳು, ನಿರ್ಮಾಣ ಹಂತದ ಕಟ್ಟಡಗಳು, ಡ್ಯಾನ್ಸ್ ಬಾರ್‌ಗಳು, ಕ್ಲಬ್‌ಗಳಲ್ಲೂ ಹೇರಳವಾಗಿ ಮಾದಕ ದ್ರವ್ಯ ಮಾರಾಟವಾಗುತ್ತಿದೆ.
ಇದಲ್ಲದೇ ಹಲವು ವಾಟ್ಸ್‌ಆ್ಯಪ್ ಗ್ರೂಪ್‌ಗಳು, ವಿವಿಧ ವೆಬ್‌ಸೈಟ್‌ಗಳು, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲೇ ಬುಕ್ ಮಾಡಿ ಮನೆ ಬಾಗಿಲಿಗೆ ತರಿಸಿಕೊಳ್ಳುವ ವ್ಯವಸ್ಥೆಯೂ ಹುಟ್ಟಿಕೊಂಡಿದೆ. ಇದಲ್ಲದೇ ಇತ್ತೀಚೆಗೆ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್‌ಗಳ ಸೋಗಿನಲ್ಲಿ ಆಹಾರದ ಬಾಕ್ಸ್‌ನೊಳಗೆ ಡ್ರಗ್ಸ್ ಇಟ್ಟು ಮನೆ ಬಾಗಿಲಿಗೆ ತಲುಪಿಸುವ ಹಂತಕ್ಕೆ ಈ ದಂಧೆ ಹಬ್ಬಿದೆ. ಮುಂಬೈನಿಂದ ಹೇರಳವಾಗಿ ಎಂಡಿಎಂಎ, ಎಲ್‌ಎಸ್‌ಡಿ ಅಂತಹ ಡ್ರಗ್ಸ್‌ಗಳು ಬೆಂಗಳೂರಿಗೆ ಕಾಲಿಡುತ್ತಿದ್ದರೆ, ಗಾಂಜಾ, ಅಫೀಮು, ಹೆರಾಯಿನ್‌ನಂತಹ ಮಾದಕ ವಸ್ತುಗಳು ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಲದಿಂದ ರೈಲಿನ ಮೂಲಕ ಸರಬರಾಜು ಆಗುತ್ತಿದೆ.
ವಿದೇಶಿ ಪೆಡ್ಲರ್‌ಗಳ ಹಾವಳಿ : ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದ ಗುಡ್ಡಗಾಡು ಪ್ರದೇಶಗಳಿಂದ ರೈಲು, ಗೂಡ್ಸ್ ವಾಹನಗಳಲ್ಲಿ ಹೇರಳವಾಗಿ ಬೆಂಗಳೂರಿಗೆ ಗಾಂಜಾ ಪೂರೈಕೆಯಾದರೆ. ಎಲ್‌ಎಸ್‌ಡಿ, ಅμàಮು, ಕೊಕೇನ್, ಎಂಡಿಎಂಎ, ಬ್ರೌನ್‌ಶುಗರ್‌ನಂತಹ ಡ್ರಗ್ಸ್‌ಗಳು ವಿದೇಶಿ ಪಡ್ಲರ್‌ಗಳಿಂದ ಪೂರೈಕೆಯಾಗುತ್ತಿದೆ. ಹೊರಗೆ ಕೆ.ಜಿ. ಲೆಕ್ಕದಲ್ಲಿ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸುವ ಪೆಡ್ಲರ್‌ಗಳು, ನಗರದಲ್ಲಿ 30 ರಿಂದ 50 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ವಿದೇಶಿ ಪೆಡ್ಲರ್‌ಗಳು ಡ್ರಗ್ಸ್ ಮಾರಾಟದಿಂದಲೇ ಲಕ್ಷ-ಲಕ್ಷಗಳಿಸಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ನಗರದಲ್ಲಿರುವ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳು ಹಾಗೂ ಉತ್ತರ ಭಾರತ ಮೂಲದ ಮಹಿಳೆಯರಿಂದಲೇ ಡ್ರಗ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಸಿಸಿಬಿ ಪೊಲೀಸರಿಂದ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಪೆಡ್ಲರ್‌ಗಳೇ ವಿಚಾರಣೆ ವೇಳೆ ತಿಳಿಸಿದ್ದಾರೆ.
ಗಾಂಜಾ ಪೆಡ್ಲಿಂಗ್‌ಗಿಳಿದ ನಕ್ಸಲೈಟ್ಸ್? : ಶೋಷಣೆಗೆ ಒಳಗಾದ ಸಮುದಾಯದ ರಕ್ಷಣೆಗಾಗಿ ಹುಟ್ಟಿಕೊಂಡಿರುವ “ನಕ್ಸಲರು’ ಇದೀಗ ತಮ್ಮ ಮೂಲ ಉದ್ದೇಶ ಮರೆತು ಜೀವನೋಪಾಯಕ್ಕಾಗಿ ಗಾಂಜಾ ಪೆಡ್ಲಿಂಗ್‌ಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇಶದ 60 ಜಿಲ್ಲೆಗಳಲ್ಲಿ ದಟ್ಟ ಕಾನನದ ನಡುವೆ ನೆಲೆ ಕಂಡುಕೊಂಡು ಫಂಡಿಂಗ್, ಜೀವನೋಪಾಯ, ಶಸ್ತ್ರಾಸ್ತ್ರ ಖರೀದಿಗೆ ಆದಾಯವಿಲ್ಲದೇ ಗಾಂಜಾ ಬೆಳೆದು ವಾರ್ಷಿಕವಾಗಿ ಕೋಟ್ಯಂತರ ರೂ. ಸಂಪಾದಿಸುತ್ತಿದ್ದಾರೆ. ಕರ್ನಾಟಕಕ್ಕೆ ಶೇ.70ರಷ್ಟು ಗಾಂಜಾ ನಕ್ಸಲರ ಮೂಲಕ ಪೂರೈಕೆಯಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆಂಧ್ರಪ್ರದೇಶ ಹಾಗೂ ಒಡಿಶಾ ಗಡಿ ಭಾಗದಲ್ಲಿರುವ ಅರಕುವ್ಯಾಲಿಯ ದಟ್ಟ ಅರಣ್ಯ ಪ್ರದೇಶದೊಳಗೆ ನೂರಾರು ಎಕರೆಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಅವರ ಸಂಪರ್ಕದಲ್ಲಿರುವ ಡ್ರಗ್ಸ್ ಡೀಲರ್‌ಗಳು ಬೆಂಗಳೂರು ಡ್ರಗ್ಸ್ ಡೀಲರ್‌ಗಳ ಒಡನಾಟ ಹೊಂದಿದ್ದಾರೆ. ಇಲ್ಲಿ ಸಿಗುವ ಹಸಿಗಾಂಜಾ ಒಣಗಿಸಿ ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಬಂಧಿತ ಪೆಡ್ಲರ್‌ಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಅಪ್ರಾಪ್ತರ ಮೇಲೆ ನಿಗಾ ವಹಿಸಲಾಗುತ್ತಿದೆ. ಮಕ್ಕಳು ಫ್ಯಾಷನ್ ಎಂಬ ಭ್ರಮೆಯಲ್ಲಿ ಡ್ರಗ್ಸ್‌ಗೆ ದಾಸರಾಗುವ ಸಾಧ್ಯತೆಗಳಿದ್ದು, ಮಾದಕ ವಸ್ತುಗಳ ಬಗ್ಗೆಯೂ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ ಅರಿವು ಮೂಡಿಸಬೇಕು. -ಪಿ.ಕೃಷ್ಣಕಾಂತ್, ಡಿಸಿಪಿ, ದಕ್ಷಿಣ ವಿಭಾಗ
ಡ್ರಗ್ಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ಡ್ರಗ್ಸ್ ಸೇವನೆ ಅಪಾಯಕಾರಿ ಎಂಬ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. – ಎಸ್.ಗಿರೀಶ್, ಡಿಸಿಪಿ, ವೈಟ್‌ಫೀಲ್ಡ್ ವಿಭಾಗ.
ಡ್ರಗ್ಸ್‌ನಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಬಹುತೇಕ ಕೇಸ್‌ನಲ್ಲಿ ಪ್ರಭಾವಿಗಳು ಮಕ್ಕಳು ಹೆಚ್ಚಾಗಿ ಈ ಚಟಕ್ಕೆ ಅಂಟಿಕೊಳ್ಳುತ್ತಿದ್ದು, ಅಮಾಯಕ ಮಕ್ಕಳಿಗೂ ಈ ಡ್ರಗ್ಸ್ ಚಟ ಅಂಟಿಸುತ್ತಾರೆ. ಇದರಿಂದ ಪಾಲಕರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು. -ಡಾ.ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
-ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.