ಮೂರು ವರ್ಷದಲ್ಲಿ 865 ಕೇಜಿ ಡ್ರಗ್ಸ್ ಜಪ್ತಿ
Team Udayavani, Jan 2, 2017, 11:42 AM IST
ಬೆಂಗಳೂರು: ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರು ನಗರ ಮಾದಕ ವಸ್ತು ಮಾರಾಟದ ಮಾರುಕಟ್ಟೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಮೂರು ವರ್ಷಗಳಲ್ಲಿ 865 ಕೆ.ಜಿ.ಗೂ ಹೆಚ್ಚು ಡ್ರಗ್ಸ್ ಜಪ್ತಿಯಾಗಿದೆ ಎಂದು ನಗರ ಅಪರಾಧ ದಾಖಲಾತಿ ಘಟಕ(ಸಿಸಿಆರ್‌ಬಿ) ತಿಳಿಸಿದೆ.
ಅಲ್ಲದೆ, ಡ್ರಗ್ ದಂಧೆಯಲ್ಲಿ ವಿದೇಶಿಗರು ಸಿಕ್ಕಿ ಬೀಳುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಪ್ರಸಕ್ತ ವರ್ಷ 20 ಮಂದಿ ವಿದೇಶಿಗರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಇನ್ನು ನಗರದಲ್ಲಿ ಡ್ರಗ್ ಮಾಫಿಯಾ ಜಾಲ ವಿಸ್ತರಿಸಿದ್ದು, ಮಾದಕ ವ್ಯಸನಿಗಳ ಜಾಲ ಪತ್ತೆಗೆ ನಗರ ಪೊಲೀಸರು ಬಲೆ ಬೀಸಿದ್ದಾರೆ. ಅದರಂತೆ ಪ್ರಸಕ್ತ ವರ್ಷ 121 ಪ್ರಕರಣಗಳ ದಾಖಲಾಗಿದ್ದು, ಡ್ರಗ್ ದಂಧೆಯಲ್ಲಿ ತೊಡಗಿದ್ದ 269 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 20 ಮಂದಿ ವಿದೇಶಿಗರು ಸೇರಿದ್ದಾರೆ ನಗರ ಅಪರಾಧ ದಾಖಲಾತಿ ಘಟಕದ ಅಂಕಿ-ಅಂಶ ತಿಳಿಸಿದೆ.
ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿರವ ಸಂಖ್ಯೆ ಕಳೆದ ಮೂರು ವರ್ಷಕ್ಕಿಂತ ಅಧಿಕವಾಗಿದೆ. 2014ರಲ್ಲಿ 42 ಪ್ರಕರಣ ದಾಖಲಾಗಿದ್ದು, 76 ಭಾರತೀಯರು ಹಾಗೂ ಏಳು ವಿದೇಶಿಯರನ್ನು ಬಂಧಿಸಲಾಗಿದೆ. 2014ರಲ್ಲಿ 412.14 ಕೆ.ಜಿ.ಮಾದಕ್ತ ವಸ್ತು ಜಪ್ತಿ ಮಾಡಲಾಗಿದೆ. 2015ರಲ್ಲಿ 69 ಪ್ರಕರಣಗಳು ದಾಖಲಾಗಿದ್ದು, 132 ಭಾರತೀಯರು ಮತ್ತು 9 ವಿದೇಶಿಗರನ್ನು ಬಂಧಿಸಿ 184.132 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಆದರೆ 2016ರಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ 121 ಪ್ರಕರಣಗಳು ದಾಖಲಾಗಿದ್ದು, 269 ಮಂದಿ ಭಾರತೀಯರು ಹಾಗೂ 20 ಮಂದಿ ವಿದೇಶಿಗರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 269.124 ಕೆ.ಜಿ.ಡ್ರಗ್ ಜಪ್ತಿ ಮಾಡಲಾಗಿದೆ ಎಂದು ಮೇಘರಿಕ್ ಅವರು ವಿವರಣೆ ನೀಡಿದರು. ಇನ್ನು ವ್ಯಸನಿಗಳು ಮಾದಕ ವಸ್ತು ಜತೆಗೆ ಕಾಫ್ಸಿರಪ್ ಮತ್ತು ಮತ್ತು ಬರುವ ಇಂಜೆಕ್ಷನ್ ತೆಗೆದುಕೊಳ್ಳುವ ಪ್ರಕರಣಗಳು ಈ ವರ್ಷ ಪತ್ತೆಯಾಗಿವೆ.
ನಗರದೆಲ್ಲೆಡೆ ಡ್ರಗ್ ಮಾಫಿಯಾದ ಬಗ್ಗೆ ತೀವ್ರ ನಿಗಾ ಇಡಲಾಗಿದ್ದು, ದಂಧೆಕೋರರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. ವಿಶೇಷ ಕಾರ್ಯಾಚರಣೆಯಿಂದಾಗಿ ಪ್ರಸಕ್ತ ವರ್ಷ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಡ್ರಗ್ ದಂಧೆಯಲ್ಲಿ ಇತ್ತೀಚೆಗೆ ವಿದೇಶಿಗರು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ವಿದೇಶಿ ಪೆಡ್ಲರ್‌ಗಳು, ಜಲ, ಭೂ ಹಾಗೂ ವಾಯು ಮಾರ್ಗವನ್ನು ಡ್ರಗ್ ಸಾಗಾಣಿಕೆಗೆ ಬಳಸುತ್ತಾರೆ.
ಅದರಲ್ಲಿ ಬಹುತೇಕ ವಾಯು ಮಾರ್ಗದಲ್ಲೇ ಅತಿ ಹೆಚ್ಚಿನ ಸಾಗಾಣಿಕೆ ನಡೆಯುವುದು. ವಿಶಾಖಪಟ್ಟಣ, ಚೆನ್ನೈ ಹಾಗೂ ಗೋವಾ ಬಂದರಿಗೆ ಹಡುಗುಗಳ ಮೂಲಕ ಮ ಮಾದಕ ವಸ್ತುಗಳನ್ನು ವಿದೇಶದಿಂದ ತರುತ್ತಾರೆ. ಅಲ್ಲಿಂದ ರಾಜ್ಯಕ್ಕೆ ಭೂ ಸಾರಿಗೆ ಬಳಸಿ ಸಾಗಾಣಿಕೆ ಮಾಡುತ್ತಾರೆ. ಬಳಿಕ ನಗರಕ್ಕೆ ತಂದು ಇಲ್ಲಿಂದ ರಾಜ್ಯದ ವಿವಿಧೆಡೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.