ಸರ್ವಜ್ಞನಗರದಲ್ಲಿ ಅಭಿವೃದ್ಧಿಗೆ ಬರ


Team Udayavani, Apr 7, 2018, 12:15 PM IST

sarvajna.jpg

ಬೆಂಗಳೂರು: ಹಾಲಿ ಸರ್ಕಾರದಲ್ಲಿ ಹಿಂದೆ ಗೃಹ ಸಚಿವರೂ ಈಗ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಕೆ.ಜೆ.ಜಾರ್ಜ್‌ ಪ್ರತಿನಿಧಿಸುತ್ತಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಬರವಿಲ್ಲ.

ದಟ್ಟ ಜನಸಾಂದ್ರತೆ ಹೊಂದಿರುವ ಮತ್ತು ಅರೆ ನಗರೀಕರಣದ (ಸೆಮಿ ಅರ್ಬನ್‌) ಛಾಯೆಯ ಈ ಕ್ಷೇತ್ರದಲ್ಲಿ ಕೊಳೆಗೇರಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಒಂದೆಡೆ ಕುಡಿಯುವ ನೀರು, ಕಸ ವಿಲೇವಾರಿ ಹಾಗೂ ಒಳಚರಂಡಿ ಕೊರತೆ ಕಂಡು ಬಂದರೆ, ಮತ್ತೂಂದಡೆ ಸರಗಳ್ಳತನ, ಗಾಂಜಾ ಮಾರಾಟ, ಗೂಂಡಾ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಕ್ಷೇತ್ರದ ಅನೇಕ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ನಾಗರಿಕರನ್ನು ಕೆಂಗೆಡಿಸಿದೆ.

ಬೆಂಗಳೂರು-ಮದ್ರಾಸ್‌ ರೈಲ್ವೆ ಲೇನ್‌ ಈ ಕ್ಷೇತ್ರದಲ್ಲಿ ಹಾದು ಹೋಗಿದ್ದು, ಎಲ್ಲ ರೈಲು ಹಳಿಯ ಅಕ್ಕ-ಪಕ್ಕ ಕಸದ ಗುಡ್ಡೆಗಳು ಕಂಡು ಬರುತ್ತದೆ. ಬಾಣಸವಾಡಿ, ಮಾರುತಿ ಸೇವಾನಗರ ಸೇರಿದಂತೆ ಜನವಸತಿ ಪ್ರದೇಶ ಇರುವ ಕೆಲವು ಕಡೆ ಜನರಿಗೆ ರೈಲು ಹಳಿ ದಾಟಲು ಸರಿಯಾದ ವ್ಯವಸ್ಥೆ ಇಲ್ಲ.

ಇದರಿಂದ ಅನೇಕ ಸಾವುಗಳು ಸಂಭವಿಸಿವೆ. ಕೆಲವು ಕಡೆ ರೈಲು ಹಳಿಗಳಿಗೆ ಅಡ್ಡಲಾಗಿ ತಂತಿ ಬೇಲಿ ಮತ್ತು ಕಂಬಗಳನ್ನು ನೆಟ್ಟಿಲ್ಲ. ಹೀಗಾಗಿ ಯಾವ್ಯಾವದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವ ಜನ ಇಲ್ಲಿನ ರೈಲ್ವೆ ಹಳಿಗೆ ಬಂದು, ಚಲಿಸುವ ರೈಲಿಗೆ ತಲೆ ಕೊಡುವ ಪ್ರಕರಣಗಳು ಇಲ್ಲಿ ಮಾಮೂಲು.

ಅಧಿಕಾರವಧಿಯಲ್ಲಿ ಸಾಕಷ್ಟು ವಿವಾದಗಳಿಗೆ ತುತ್ತಾದ, ಒಮ್ಮೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು, ಮತ್ತೆ ಸಂಪುಟಕ್ಕೆ ಸೇರ್ಪಡೆಯಾದ ಪ್ರಭಾವಿ ಸಚಿವ, ಮುಖ್ಯಮಂತ್ರಿಗಳ ಆಪ್ತರೂ ಆಗಿರುವ ಕೆ.ಜೆ. ಜಾರ್ಜ್‌ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದು, 2 ಬಾರಿ ಗೆದ್ದು ಈಗ ಹ್ಯಾಟ್ರಿಕ್‌ ಜಯದ ಉಮೇದಿನಲ್ಲಿದ್ದಾರೆ.

ಕ್ಷೇತ್ರದಲ್ಲಿ ಸುತ್ತಾಡಿದರೆ ಅಭಿವೃದ್ಧಿ ಕಾಮಗಾರಿಗಳು ಕಾಣುತ್ತವೆ. ಆದರೆ, ಆ ಅಭಿವೃದ್ಧಿಯನ್ನು ಮಂಕಾಗಿಸುವ ಸಮಸ್ಯೆಗಳ ದರ್ಶನವೂ ಕ್ಷೇತ್ರದಲ್ಲಿ ಆಗುತ್ತದೆ. ಕ್ಷೇತ್ರದಲ್ಲಿ ಒಟ್ಟು ಎಂಟು ವಾರ್ಡ್‌ಗಳಿದ್ದು, ಕಾಂಗ್ರೆಸ್‌ 5, ಬಿಜೆಪಿ 3 ವಾರ್ಡ್‌ಗಳಲ್ಲಿ ಗೆದ್ದಿದೆ.
 
ಹಿಂದಿನ ಫ‌ಲಿತಾಂಶ
-ಕೆ.ಜೆ. ಜಾರ್ಜ್‌ (ಕಾಂಗ್ರೆಸ್‌) 69,673
-ಪದ್ಮನಾಭರೆಡ್ಡಿ (ಬಿಜೆಪಿ) 46,819
-ಮಹಬೂಬ್‌ ಶರೀಫ್ (ಎಸ್‌ಡಿಪಿಐ) 10,610

ಟಿಕೆಟ್‌ ಆಕಾಂಕ್ಷಿಗಳು
-ಕಾಂಗ್ರೆಸ್‌-ಕೆ.ಜೆ. ಜಾರ್ಜ್‌
-ಬಿಜೆಪಿ- ಪದ್ಮನಾಭರೆಡ್ಡಿ, ಎಂ.ಎನ್‌.ರೆಡ್ಡಿ, ಗೋವಿಂದರಾಜು, ಶ್ರೀನಿವಾಸ್‌‌
-ಜೆಡಿಎಸ್‌-ಅನ್ವರ್‌ ಶರೀಫ್
-ಆಮ್‌ಆದ್ಮಿ ಪಾರ್ಟಿ- ಪೃಥ್ವಿರೆಡ್ಡಿ
-ಎಸ್‌ಡಿಪಿಐ- ಅಬ್ದುಲ್‌ ಹನ್ನಾನ್‌

ಕ್ಷೇತ್ರದ ಮಹಿಮೆ: ಕ್ಷೇತ್ರ ಪುನರ್‌ವಿಂಗಡಣೆ ಆದಾಗ 2008ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಕ್ಷೇತ್ರದ ಹೆಸರು ಸರ್ವಜ್ಞನಗರ. ಆದರೆ, ಸರ್ವಜ್ಞನಗರ ವಾರ್ಡ್‌ ಬರುವುದು ಸರ್‌ ಸಿ.ವಿ.ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ. ವಿದೇಶಿ ವಿದ್ಯಾರ್ಥಿಗಳಿಗೆ ಇದು ನೆಚ್ಚಿನ ತಾಣ. ಇರಾನಿ, ಅರಬ್‌ ಸೇರಿದಂತೆ ವಿದೇಶಿ ಖಾದ್ಯಗಳೂ ಇಲ್ಲಿ ಜನಪ್ರೀಯ. ಕ್ಷೇತ್ರದ ಬಹುತೇಕ ಬಡಾವಣೆ, ರಸ್ತೆಗಳ ಹೆಸರುಗಳು ಬ್ರಿಟೀಷರ ಕಾಲದ್ದು.

ಕ್ಷೇತ್ರದ ದೊಡ್ಡ ಸಮಸ್ಯೆ?: ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಮತ್ತು ಟ್ರಾಫಿಕ್‌ ಕಿರಿಕಿರಿ. ಮೂಲ ಸೌಕರ್ಯಗಳ ಕೊರತೆ, ಕಸ ವಿಲೇವಾರಿ ಸಮಸ್ಯೆ ಇಲ್ಲಿನ ಜನರನ್ನು ಬಹುವಾಗಿ ಕಾಡುತ್ತಿದೆ. ಜನವಸತಿ ಪ್ರದೇಶಗಳು ಮತ್ತು ಜನಸಾಂದ್ರತೆ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಾಣಸವಾಡಿ, ಎಚ್‌ಬಿಆರ್‌, ಕಾಚರಕನಹಳ್ಳಿ ವಾರ್ಡ್‌ ಹೊರತುಪಡಿಸಿ ಇತರೆ ಕಡೆ ಅಭಿವೃದ್ಧಿ ಲಕ್ಷಣಗಳೇ ಕಾಣುವುದಿಲ್ಲ.

ಕ್ಷೇತ್ರದಲ್ಲಿ ಬೆಸ್ಟ್‌ ಏನು?: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಣ್ಣೂರು ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ಪೂರ್ಣ. ನಾಗವಾರ ಹೊರ ವರ್ತುಲ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಿಗೆ ವೈಟ್‌ ಟ್ಯಾಪಿಂಗ್‌. ಬಾಣಸವಾಡಿಯ ಬುಲೆವಾರ್ಡ್‌ ಪಾರ್ಕ್‌, ಎಚ್‌ಆರ್‌ಬಿಆರ್‌ ಲೇಔಟ್‌ನ ಬಂಡೆ ಪಾರ್ಕ್‌ ಅಭಿವೃದ್ಧಿ. 218 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣನಗರ ಜಂಕ್ಷನ್‌, ವೀರಣ್ಣಪಾಳ್ಯ, ಹೆಣ್ಣೂರು ಜಂಕ್ಷನ್‌, ಹೆಣ್ಣೂರು-ನಾಗವಾರ ಜಂಕ್ಷನ್‌ ಬಳಿ ಗ್ರೇಡ್‌ ಸಪರೇಟರ್‌, ಲಿಂಗರಾಜಪುರ ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ ನಿರ್ಮಾಣ.

ಶಾಸಕರು ಏನಂತಾರೆ?
ನನ್ನದು ಹೊಸ ಹಾಗೂ ವೈವಿದ್ಯಮಯ ಕ್ಷೇತ್ರ. ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ನಾಗರೀಕರಿಗೆ ಬೇಕಾಗುವ ಎಲ್ಲ ಮೂಲ ಸೌಕರ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಒದಗಿಸಿಕೊಟ್ಟಿದ್ದೇನೆ. ಆಟದ ಮೈದಾನಗಳ ಅಭಿವೃದ್ಧಿ ಮಾಡಿದ್ದೇನೆ. ಬಡವರಿಗೆ ಮನೆ ಕಟ್ಟಿಸಿಕೊಟ್ಟಿದ್ದೇನೆ. ಜನಸ್ಪಂದನ ಸಭೆಗಳ ಮೂಲಕ ನಿರಂತರವಾಗಿ ಕ್ಷೇತ್ರದ ಜನರದೊಂದಿಗೆ ಸಂಪರ್ಕದಲ್ಲಿದ್ದೇನೆ.
-ಕೆ.ಜೆ.ಜಾರ್ಜ್‌

ಜನ ದನಿ
ಬಾಣಸವಾಡಿ ವಾರ್ಡ್‌ನ ಜೈ ಭಾರತನಗರದಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಒಂದಿಷ್ಟು ಬಗೆಹರಿದಿದೆ. ಆದರೆ, ಕಸವಿಲೇವಾರಿ ಮತ್ತು ಒಳ ಚರಂಡಿಯದ್ದೇ ಇಲ್ಲಿ ದೊಡ್ಡ ಸಮಸ್ಯೆ. ಪೊಲೀಸ್‌ ಗಸ್ತು ಮುಖ್ಯ ರಸ್ತೆಗಳಿಗೆ ಸಿಮೀತವಾಗಿದೆ.
-ಸಂಪತ್‌ಕುಮಾರ್‌

ಇದೇ ಕ್ಷೇತ್ರದಲ್ಲಿ 60 ವರ್ಷಗಳಿಂದ ವಾಸವಿದ್ದೇನೆ. ಎಲೆಕ್ಷನ್‌ ಬಂದಾಗ ಸಮಸ್ಯೆ ಪರಿಹರಿಸ್ತೀವಿ ಅಂತಾರೆ. ಆಮೇಲೆ ಯಾರೂ ಬರಲ್ಲ. ಸಾವಿರ ರೂ. ವೃದ್ಯಾಪ ವೇತನ ಬರುತ್ತದೆ ಎಂದು ಹೇಳಿದ್ದರು. ಆದ್ರೆ, ನನಗೆ ಬರಿ¤ರೋದು 500 ರೂ. ಮಾತ್ರ. 
-ಕಾಂತಾ

ಜಾನಕಿರಾಮ ಲೇಔಟ್‌ನಲ್ಲಿ ಸುಮಾರು 290 ಮನೆಗಳಿಗೆ ಕಾವೇರಿ ನೀರು ಬರುವುದಿಲ್ಲ. ಮಳೆ ನೀರು ಹೋಗಲು ಜಾಗವಿಲ್ಲ. ಶೌಚಾಲಯಕ್ಕಾಗಿ ಮಹಿಳೆಯರು ಪ್ರತಿ ದಿನ ಕಷ್ಟಪಡಬೇಕು. ಎಲ್ಲರಿಗೂ ಸಮಸ್ಯೆ ಹೇಳಿ ಸಾಕಾಗಿದೆ.
-ಶ್ರೀನಿವಾಸ

ಏರಿಯಾದಲ್ಲಿ ಹಾದು ಹೋಗಿರುವ ರೈಲ್ವೆ ಹಳಿಗಳು ಮೃತ್ಯುಕೂಪಗಳಾಗಿವೆ. ಮಾರುತಿ ಸೇವಾನಗರದ ಮುನೇಶ್ವರಸ್ವಾಮಿ ದೇವಾಲಯದ ಬಳಿ ರಾತ್ರಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳಲ್ಲ.
-ಶಾಂತಪ್ಪ

* ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BMTC-Driver-New

BMTC: ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ; ಪ್ರಯಾಣಿಕರ ರಕ್ಷಿಸಿದ ನಿರ್ವಾಹಕ!

7-

ಹುಂಡಿ ಒಡೆದು ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು; ಎರಡು ಪ್ರತ್ಯೇಕ ಘಟನೆ ದಾಖಲು

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ

Crime: ಶೀಲ ಶಂಕಿಸಿ ಪತ್ನಿ  ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.