ದುನಿಯಾ ವಿಜಯ್‌ಗೆ ಷರತ್ತುಬದ್ಧ ಜಾಮೀನು
Team Udayavani, Oct 2, 2018, 12:41 PM IST
ಬೆಂಗಳೂರು: ಜಿಮ್ ತರಬೇತುದಾರ ಮಾರುತಿಗೌಡನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದುನಿಯಾ ವಿಜಯ್ ಸೋಮವಾರ ಜಾಮೀನು ಆಧಾರದಲ್ಲಿ ಬಿಡುಗಡೆಗೊಂಡಿದ್ದಾರೆ.
ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಮಾನ್ಯ ಮಾಡಿದ ಸೆಷನ್ಸ್ ಕೋರ್ಟ್, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ, ವಿಜಯ್, ಪ್ರಸಾದ್, ಮಣಿ, ಕಾರು ಚಾಲಕ ಪ್ರಸಾದ್‌ನನ್ನು ಎಂಟು ದಿನಗಳ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ.
ಸೋಮವಾರ ರಾತ್ರಿ 8.20ರ ಸುಮಾರಿಗೆ ಜೈಲಿನಿಂದ ಹೊರಬಂದ ವಿಜಯ್ ಅವರನ್ನು ಎರಡನೇ ಪತ್ನಿ ಕೀರ್ತಿ ಪಟ್ವಾಡಿ ಬರಮಾಡಿಕೊಂಡರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ವಿಜಯ್, “ನಾನು ತಪ್ಪು ಮಾಡಿಲ್ಲ. ರೌಡಿಶೀಟರ್ ಕೂಡ ಅಲ್ಲ. ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಗೊಳಿಸುತ್ತೇನೆ. ಜತೆಗೆ, ಪಾನಿಪುರಿ ಕಿಟ್ಟಿ ಮೇಲೆ ನನಗೆ ಯಾವುದೇ ದ್ವೇಷವಿಲ್ಲ ಎಂದಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ಸೆ.22ರಂದು ನಡೆದ “32ನೇ ಅಮೇಚೂರ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್, ಮಿಸ್ಟರ್ ಬೆಂಗಳೂರು-2018′ ಸ್ಪರ್ಧೆ ಕಾರ್ಯಕ್ರಮದ ವೇಳೆ ಜಿಮ್ ತರಬೇತುದಾರ ಮಾರುತಿ ಗೌಡ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಆತನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ವಿಜಯ್, ಪ್ರಸಾದ್, ಮಣಿ, ಚಾಲಕ ಪ್ರಸಾದ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ನಾಯಕ ನಟ ಸಮಾಜಕ್ಕೆ ಮಾದರಿಯಾಗಿರಬೇಕು: “ಸಿನಿಮಾಗಳಲ್ಲಿ ನಾಯಕ ನಟನಾದವರು ಸಮಾಜಕ್ಕೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಜನ ಅವರನ್ನು ಗಮನಿಸುತ್ತಿರುತ್ತಾರೆ. ಮುಂದೆ ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸಿ’ ಎಂದು ನಟ ವಿಜಯ್‌ಗೆ ನ್ಯಾಯಾಧೀಶರು ಮೌಖೀಕ ಸಲಹೆ ನೀಡಿದ್ದಾರೆ. ನಟ ವಿಜಯ್‌ಗೆ ಜಾಮೀನು ನೀಡುವ ವೇಳೆ ನ್ಯಾಯಾಧೀಶರು ಮೌಖೀಕವಾಗಿ ಸಲಹೆಗಳನ್ನು, ತಮ್ಮ ಕಕ್ಷೀದಾರರಿಗೆ ತಿಳಿಸುವುದಾಗಿ ವಿಜಯ್ ಪರ ವಕೀಲ ಶಿವಕುಮಾರ್ ನ್ಯಾಯಾಧೀಶರಿಗೆ ಹೇಳಿದ್ದಾರೆ.
ಪ್ರಕರಣದ ಟೈಮ್‌ಲೈನ್!
ಸೆ.22: ವಿಜಯ್ ಹಾಗೂ ಇತರ ಆರೋಪಿಗಳಿಂದ ಮಾರುತಿಗೌಡ ಅಪಹರಣ, ಹಲ್ಲೆ
ಸೆ.22: ರಾತ್ರಿ 11:30ಕ್ಕೆ ವಿಜಯ್, ಇತರ ಆರೋಪಿಗಳ ಬಂಧಿಸಿದ ಹೈಗ್ರೌಂಡ್ಸ್ ಪೊಲೀಸರು
ಸೆ.23: 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರು
ಸೆ.26: ವಿಜಯ್ ಜಾಮೀನು ಅರ್ಜಿ ವಜಾಗೊಳಿಸಿದ ಎಸಿಎಂಎಂ ಕೋರ್ಟ್
ಸೆ.28: ಜಾಮೀನು ಕೋರಿ ನಟ ವಿಜಯ್ ಸೆಷನ್ಸ್ ಕೋರ್ಟ್‌ಮೊರೆ
ಅ.1: ಜಾಮೀನು ಮಂಜೂರು ಮಾಡಿದ ಕೋರ್ಟ್, ಜೈಲಿನಿಂದ ಬಿಡುಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.